Download Our App

Follow us

Home » ಜಿಲ್ಲೆ » ವಿಜಯಪುರ : ಸರ್ಕಾರಿ ಬಸ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿ – ಮೂರು ಸಾ*ವು.. ಹಲವರು ಗಂಭೀರ..!

ವಿಜಯಪುರ : ಸರ್ಕಾರಿ ಬಸ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿ – ಮೂರು ಸಾ*ವು.. ಹಲವರು ಗಂಭೀರ..!

ವಿಜಯಪುರ : ಎರಡು ಸರ್ಕಾರಿ ಬಸ್‍ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ. ಈ ಘಟನೆ ವಿಜಯಪುರದ ಮದಭಾವಿ ಕ್ರಾಸ್ ಬಳಿ ನಡೆದಿದೆ. ಅಪಘಾತದಲ್ಲಿ 10 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಿಂದಗಿ ಮಾರ್ಗವಾಗಿ ವಿಜಯಪುರಕ್ಕೆ ಬರುತ್ತಿದ್ದ ಬಸ್‌ ಹಾಗೂ ವಿಜಯಪುರದಿಂದ ಸಿಂದಗಿಗೆ ಹೋಗುತ್ತಿದ್ದ ಬಸ್ ನಡುವೆ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಅಫಘಾತದಿಂದ ಸ್ಥಳದಲ್ಲಿ ಸಂಪೂರ್ಣ ಸಂಚಾರ ಅಸ್ತವ್ಯಸ್ಥವಾಗಿದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಎಎಸ್ಪಿ ಶಂಕರ ಮಾರಿಹಾಳ, ಸಿಪಿಐ ರಾಯಗೊಂಡ ಜನಾರ ಹಾಗೂ ಸಿಬ್ಬಂದಿ ಸ್ಥಳೀಯರ ಸಹಾಯದ ಮೂಲಕ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಅಪಘಾತದ ಕಾರಣ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸಂಪೂರ್ಣ ಸಂಚಾರ ಬಂದ್ ಆಗಿದ್ದು, ಎರಡು ಬದಿಗೆ ಎರಡು ಮೂರು ಕಿಲೋಮೀಟರ್ ವರೆಗೂ ವಾಹನಗಳು ಸಾಲಗಟ್ಟಿ ನಿಂತಿವೆ.

ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸಪಡುತ್ತಿದ್ದಾರೆ. ಸ್ಥಳಕ್ಕೆ ಕ್ರೇನ್ ಹಾಗೂ ಜೆಸಿಬಿ ಆಗಮಿಸಿದ್ದು ಅಪಘಾತಕ್ಕೊಳಗಾದ ಬಸ್​ಗಳನ್ನು ತೆರವು ಮಾಡಲಾಗುತ್ತಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರಿಗೆ ಜಾಮೀನು ಮಂಜೂರು..!

 

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಬಗೆದಷ್ಟೂ ಬಯಲಾಗ್ತಿದೆ ಬಂಡೀಪುರ CF ಡಾ.ರಮೇಶ್​ ಕುಮಾರ್​​​​​​​​ ಕರ್ಮಕಾಂಡ..!

ಮೈಸೂರು : ಬಗೆದಷ್ಟೂ ಬಯಲಾಗ್ತಿದೆ ಬಂಡೀಪುರ CF ಡಾ.ರಮೇಶ್​ ಕುಮಾರ್ ಕರ್ಮಕಾಂಡ. ಆನೆ, ಹುಲಿಗಳ ನಿಗೂಢ ಸಾವಿಗೂ ಡಾ.ರಮೇಶ್​ ಕುಮಾರ್​​​​​​​​ ನಿರ್ಲಕ್ಷ್ಯ ಕಾರಣ ಎಂದು ಪರಿಸರ ವಾದಿ

Live Cricket

Add Your Heading Text Here