ವಿಜಯನಗರ : ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ಮಧ್ಯೆ ಬಡಿದಾಟ ನಡೆದು ಇಬ್ಬರಿಗೆ ಗಾಯಗಳಾಗಿವೆ. ಹನಸಿ ಗ್ರಾಮದಲ್ಲಿ ಪರಮೇಶ್ವರಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಜರುಗಿತ್ತು. ಬಣ್ಣ ಹಚ್ಚುವ ವಿಚಾರಕ್ಕೆ ಎರಡು ಕುಟುಂಬಗಳು ಜಗಳ ಮಾಡಿಕೊಂಡಿವೆ ಎನ್ನಲಾಗಿದೆ.
ಹಳೆ ದ್ವೇಷ ಹಿನ್ನೆಲೆಯಲ್ಲಿ ಶಿವಕುಮಾರ್, ಕೊಟ್ರೇಶ ಅನ್ನೋರ ಮಧ್ಯೆ ಬಡಿದಾಟ ಆಗಿತ್ತು. ದೊಣ್ಣೆ, ಕಟ್ಟಿಗೆಗಳಿಂದ ಹೊಡೆದಿದ್ದಾರೆ. ಶಿವಕುಮಾರ್ ಸಹೋದರ ಮಾರುತಿ ಸೇರಿ ಕೊಟ್ರೇಶ್, ಬಸವರಾಜ್ ಮೇಲೆ ಪ್ರತಿದಾಳಿ ಮಾಡಿದ್ದಾರೆ.
ಮಾರುತಿ ಅನ್ನೋರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಗಾಯಾಳು ಮಾರುತಿಗೆ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗ್ತಿದೆ. ಎರಡೂ ಕಡೆಯವರು ಕೂಡ್ಲಿಗಿ ಪೊಲೀಸರು ದೂರು – ಪ್ರತಿದೂರು ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿಂದು ಅಮಿತ್ ಶಾ ಲೋಕಸಭೆ ಪ್ರಚಾರದ ರಣಕಹಳೆ – ಬಂಡಾಯ ಶಮನಕ್ಕೆ ‘ಶಾ’ ನೇರ ಪ್ರವೇಶ..!
Post Views: 196