Download Our App

Follow us

Home » ಜಿಲ್ಲೆ » ಅಂಗಡಿ ಎಣ್ಣೆ ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ ಈ ಗಾಣದ ಎಣ್ಣೆ ಬಳಸಿ..!

ಅಂಗಡಿ ಎಣ್ಣೆ ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ ಈ ಗಾಣದ ಎಣ್ಣೆ ಬಳಸಿ..!

ತುಮಕೂರು : ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಅಡುಗೆಗೆ ಬಳಸುತ್ತಿರುವ ಎಣ್ಣೆಗಳ ಬಗ್ಗೆ ಹೊಸ ಮಾಹಿತಿಗಳನ್ನ‌ ತೆಗೆದುಕೊಂಡು ಶಾಕ್ ಆಗಿ, ನಾವು ತಿನ್ನುತ್ತಿರುವುದು ನಿಜಕ್ಕೂ ಎಣ್ಣೆನಾ ಅನ್ನುವ ಮಟ್ಟಿಗೆ ಗಲಿಬಿಲಿಯಾಗಿದ್ದಾರೆ. ಹಾಗಾಗಿ ಜನರು ಮತ್ತೆ ಹಳೆ ಪದ್ಧತಿಯಂತೆ ಗಾಣದ ಎಣ್ಣೆಗೆ ವಾಪಸ್ ತೆರಳುತ್ತಿದ್ದಾರೆ.

ತುಮಕೂರಲ್ಲಿ ಒಂದು ಟೀಂ ಆಯಿಲ್ ಮಿಲ್ ಓಪನ್ ಮಾಡಿ ತುಂಬಾ ಫೇಮಸ್ ಆಗಿದ್ದಾರೆ. ಹೌದು.. ಈ ಮಿಲ್​ಗೆ ‘ನಿಮ್ಮೆಲ್ಲೆರ ಆರೋಗ್ಯದ ಕಾಳಜಿ ನಮಗೆ’ ಎಂದು ಟ್ಯಾಗ್ ಲೈನ್ ಕೂಡ ಇಟ್ಟಿದ್ದಾರೆ. ಈ ಟೀಂನಲ್ಲಿರುವ ಶ್ರದ್ದೆ ಟ್ಯಾಗ್ ಲೈನ್​ಗೆ ತಕ್ಕನಾಗಿ ನಡೆದುಕೊಳ್ಳುತ್ತಿದ್ದಾರೆ. ಇನ್ನು ಈ ಟೀಂ ಜನರ ನಂಬಿಕೆ ಪ್ರೀತಿಗಳಿಸಿ ಜನರ ಆರೋಗ್ಯ ಕಾಪಾಡುವುದರಲ್ಲಿ ಸಹಾಯಮಾಡುತ್ತಿದ್ದಾರೆ.

ಈ ಆಯಿಲ್ ಮಿಲ್​ಗೆ ‘ಅತೋಸ್ಯ ಆಯಿಲ್ ಮಿಲ್’ ಎಂದು ಹೆಸರಿಟ್ಟಿದ್ದಾರೆ. ತುಂಬಾ ಜನರಿಗೆ ಅತೋಸ್ಯ ಎಂದರೆ ಅರ್ಥ ಏನು ಅನ್ನೊ ಕುತೂಹಲ ಇದೆ. ಅತೋಸ್ಯ ಪದದ ಅರ್ಥ ಆದಿಶಕ್ತಿ ಅಂದರೆ ಭೂಲೋಕದಲ್ಲಿ ಋಷಿಮುನಿಗಳಿಗೆ‌‌‌, ಜನರಿಗೆ ಎಲ್ಲರಿಗೂ ರಾಕ್ಷಸರ ಕಾಟ ಜಾಸ್ತಿ ಆಗಿರುತ್ತದೆ.

ಆಗ ದೇವಿಗೆ ಭೂಲೋಕಕ್ಕೆ ಹೋಗಿ ಅಲ್ಲಿರುವ ಎಲ್ಲರೂ ಕೂಡ ಶಾಂತಿ ನೆಮ್ಮದಿ‌ಯಾಗಿ ಬಾಳುವಂತೆ ಮಾಡಬೇಕು ಎಂದು ಅಪ್ಪಣೆಯಾಗುತ್ತದೆ. ಆಗ ದೇವಿ ಭೂಲೊಕಕ್ಕೆ ಬಂದು ಇಲ್ಲಿನ ರಾಕ್ಷಸರನ್ನ ಸಂಹಾರ ಮಾಡಿ, ಭೂಲೋಕದಲ್ಲಿ ಶಾಂತಿ ನೆಮ್ಮದಿ ನೆಲಸುವಂತೆ ಮಾಡುತ್ತಾರೆ ಈ ಅವತಾರವೇ ಅತೋಸ್ಯ.

ಇನ್ನು ಈ ಅತೋಸ್ಯ ಆಯಿಲ್ ಮಿಲ್ ಟೀಂ ಕಳೆದ ಐದು ವರ್ಷದ ಹಿಂದೆ ತಮ್ಮ ಕುಟುಂಬದ ಜೊತೆ ಎಲ್ಲರೂ ಕೂತು ಅವರವರ ಫ್ಯಾಮಿಲಿಗಳಲ್ಲಿ‌ ಆದ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡುವಾಗ ಡಾಕ್ಟರ್ ಗಳು ನೀವು ತಿನ್ನುತ್ತಿರುವ ಎಣ್ಣೆ ಸರಿ‌ ಇಲ್ಲ ಗಾಣದ ಎಣ್ಣೆ ಯೂಸ್ ಮಾಡಿ ಎಲ್ಲಾ ಸರಿಹೋಗುತ್ತದೆ ಎನ್ನುವುದರ ಬಗ್ಗೆ ಚರ್ಚೆಮಾಡಿದ್ದರು.

ಇದನ್ನ ಕೇಳಿದ ಅತೋಸ್ಯ ಆಯಿಲ್ ಮಿಲ್ ಟೀಂ ಮಾಮುಲಿ ಎಣ್ಣೆಗೂ ಗಾಣದ ಎಣ್ಣೆಗೂ ಏನು ವ್ಯತ್ಯಾಸ ಎಂದು ಗೂಗಲ್ ಮಾಡಿ ನೋಡಿದಾಗ 2.5 kg ಕಡ್ಲೇ ಬೀಜಕ್ಕೆ ಒಂದು ಲೀಟರ್ ಎಣ್ಣೆ ಸಿಗುತ್ತೆ ಎಂದು ತಿಳಿದು ಇಡೀ ಟೀಂ ಶಾಕ್ ಆಗುತ್ತೆ. ಆಗ ಕಡ್ಲೆ ಬೀಜದ ರೇಟ್ 300 ರೂ ಆಗಿರುತ್ತೆ.

ಸೀಸನ್​ನಲ್ಲಿ 260 ಆಗಬಹುದು ಅಂದರೇ ನಾವು ತಿನ್ನುತ್ತಿರುವ 100 ರಿಂದ 130 ರೂ ಎಣ್ಣೆ ಯಾವುದು ಎಂದು ಗಾಬಾರಿಯಾದರು. ಅಂದರೆ ಕಡ್ಲೆಬೀಜ ಒಂದೇ ಅಲ್ಲ ಎಲ್ಲಾ ಎಣ್ಣೆ ಕಾಳುಗಳ ಬೆಲೆ ನೋಡಿದರೆ ಯಾವುದೇ ಎಣ್ಣಿ ತೆಗೆದುಕೊಳ್ಳಬೇಕು ಎಂದು 300 ರೂಗಳ‌ ಮೇಲೆ ಆಗುತ್ತದೆ. ಕೆಲವೊಂದು ಅಂದರೆ ಹುಚ್ಚಳು ಎಳ್ಳು ಇವೆಲ್ಲಾ 400 ರೂ ಗಡಿ ಡಾಟುತ್ತೆ. ಹೀಗಿರುವಾಗ ಇವರು ಹೇಗೆ ಈ ಬೆಲೆಗೆ ಕೊಡುತ್ತಾರೆ ಎಂದು ಇಡೀ ಟೀಂ ಶಾಕ್ ಆಗಿದ್ದಾರೆ.

ಕೂಡಲೇ ತುಮಕೂರಿನಲ್ಲಿ ಗಾಣಗಳು ಎಲ್ಲಿವೇ ಎಂದು ಹುಡುಕುವುದಕ್ಕೆ ಶುರು ಮಾಡಿದಾಗ ತಿಪಟೂರು, ಶಿರ, ಗುಬ್ಬಿ ಭಾಗದಲ್ಲಿ ಕೆಲವು ಗಾಣಗಳು ಸಿಕ್ಕರು ಯಾವುದೇ ರೀತಿ‌ ಕ್ಲೀನ್ ಇಲ್ಲದೇ ಮತ್ತು ಯಾವುದೇ ಮಾನದಂಡ ಇಲ್ಲದೇ ಅಲ್ಲಿನ ಗಾಣಗಳು ನಡೆಯುತ್ತಿದ್ದವು. ಈ ಟೀಂ ಇಲ್ಲಿ ಎಣ್ಣೆ ಮಾಡಿಸಿಕೊಂಡು ಬಂದರು ಅಷ್ಟು ತೃಪ್ತಿಕರ ಅನ್ನಿಸಲಿಲ್ಲ.

ಹಾಗಾಗಿ ನಮ್ಮ ಆರೋಗ್ಯದ ಜೊತೆಗೆ ತುಮಕೂರಿನ ಜನತೆಯ ಆರೋಗ್ಯ ಕಾಪಾಡಬೇಕೆಂದು ಈ ಟೀಂ ತುಮಕೂರಿನ ಸಿದ್ದರಾಮೇಶ್ವರ ಬಡಾವಣೆಯ 4ನೇ ಕ್ರಾಸ್ ನಲ್ಲಿ ಆಯಿಲ್ ಮಿಲ್ ಓಪೆನ್ ಮಾಡಿದ್ದರು. ಜನರು ಇವರ ಕ್ಲೀನ್ ನೆಸ್ ಕಸ್ಟಮರ್ ಮೇಲೆ ಇವರಿಗೆ ಇರುವ ಕಾಳಜಿ‌ ನೋಡಿ ಜನರು ಫುಲ್‌ಫಿದ ಆಗಿದ್ದಾರೆ. ತುಮಕೂರಿನ ಜನರು ಇದೀಗ ಅತೋಸ್ಯ ಆಯಿಲ್ ಮಿಲ್ ನಲ್ಲಿ ಎಣ್ಣೆ ಹಾಕಿಸಿಕೊಂಡು ಒಂದು ತೃಪ್ತಿಕರ ಭಾವನೆಯಲ್ಲಿದ್ದಾರೆ ಎಂದರೆ ತಪ್ಪಿಲ್ಲ.

ಇನ್ನೂ ಇಲ್ಲಿನ ವಿಶೇಷ ಏನೆಂದರೆ ಇಲ್ಲಿ ನೀವೆ ಬಂದು ಎಣ್ಣೆಕಾಳುಗಳನ್ನ ತಂದು ಎಣ್ಣೆ ಮಾಡಿಸಿಕೊಂಡು ಹೋಗಬಹುದು. ಮತ್ತು ಇಲ್ಲಿ ನೀವು ಏನೇ ತಂದರು ಕೂಡ ಕೆ.ಜಿಗೆ 15 ರೂ ಚಾರ್ಜ್ ಮಾಡುತ್ತಾರೆ ಅಷ್ಟೇ. ಮತ್ತು‌ ಕಡಲೇಕಾಯಿ ಹಿಂಡಿ ಬಿಟ್ಟರೆ ಯಾವುದೇ ಚಾರ್ಜ್ ಮಾಡುವುದಿಲ್ಲ. ಬೇರೆ ಯಾವುದೇ ಹಿಂಡಿ ಬಿಟ್ಟರೆ 10 ರೂ ಚಾರ್ಜ್ ಮಾಡುತ್ತಾರೆ.

ತುಮಕೂರಿನ ಎಲ್ಲಾ ಗಾಣಗಳಲ್ಲೂ 20 ರಿಂದ 30 ರೂ ಚಾರ್ಜ್ ಮಾಡುತ್ತಿದ್ದಾರೆ‌, ಹಿಂಡಿಬಿಟ್ಟರು ಸಹ ಅದಕ್ಕೆ ಅವರು ಕಡಿಮೆ ಬೆಲೆ ಫಿಕ್ಸ್ ಮಾಡಿದ್ದಾರೆ. ಆದರೆ ಅತೋಸ್ಯ ಆಯಿಲ್ ಮಿಲ್ ಎಲ್ಲಾರು ಗಾಣದ ಎಣ್ಣೆ ತಿನ್ನಬೇಕು ಮತ್ತು ಆರೋಗ್ಯ ಕಾಪಡಿಕೊಳ್ಳಬೇಕು ಎಂದು ಪ್ಲಾನ್ ಮಾಡಿ ಎಲ್ಲರ ಪ್ರೀತಿ ಮತ್ತು ನಂಬಿಕೆಗಳಿಸಿದ್ದಾರೆ. ತುಮಕೂರಿನ ಜನ ಕೂಡ ಈ ಅತೋಸ್ಯ ಆಯಿಲ್ ಮಿಲ್‌ಟೀಂನಾ ನೋಡಿ ಅವರ ಸರ್ವಿಸ್ ಗೆ ಫಿದ ಆಗಿದ್ದಾರೆ.

ಇವರ ಕಾಂಟ್ಯಾಕ್ಟ್ ಮಾಡಬೇಕೆಂದರೆ :

ವಾಗೀಶ್ ಪಿ
ಅತೋಸ್ಯ ಆಯಿಲ್‌ಮಿಲ್
ಸಿದ್ದರಾಮೇಶ್ವರ ಬಡಾವಣೆ
4ನೇ ಕ್ರಾಸ್, ಬಸವಭವನ ರಸ್ತೆ
ಬಟವಾಡಿ ಹತ್ತಿರ ತುಮಕೂರು 572103
ಫೋನಂ 7829646893

ಇದನ್ನೂ ಓದಿ : ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಕಾಪಾಡಿ – ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ..!

Leave a Comment

DG Ad

RELATED LATEST NEWS

Top Headlines

ದರ್ಶನ್​ಗೆ ಮತ್ತೊಂದು ಸಂಕಷ್ಟ – ಪ್ರೊಡ್ಯೂಸರ್ ಭರತ್​​​ಗೆ ಬೆದರಿಕೆ ಹಾಕಿದ್ದ ಕೇಸ್​ಗೆ ಮರುಜೀವ.. NCR ದಾಖಲು..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆಯಲು ಕಷ್ಟಪಡುತ್ತಿರುವಾಗಲೇ ನಟ ದರ್ಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಹಿಂದೆ ಯಂಗ್​ ಪ್ರೊಡ್ಯೂಸರ್ ಭರತ್​ಗೆ ಬೆದರಿಕೆ ಹಾಕಿದ್ದ

Live Cricket

Add Your Heading Text Here