Download Our App

Follow us

Home » ಸಿನಿಮಾ » ಡಿ.20ಕ್ಕೆ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ರಿಲೀಸ್..!

ಡಿ.20ಕ್ಕೆ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ರಿಲೀಸ್..!

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ ಚಿತ್ರ “UI” ಯಾವಾಗ ಬಿಡುಗಡೆಯಾಗಬಹುದೆಂಬ ಕಾತುರ ಅಭಿಮಾನಿಗಳಿಗಿತ್ತು. ಈಗ ಉಪ್ಪಿ ತಮ್ಮ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಬಹುನಿರೀಕ್ಷೆಯಿಂದಲೇ ಕಾಯುತ್ತಿದ್ದ ಫ್ಯಾನ್ಸ್‌ಗೆ ಇದೀಗ ಉಪೇಂದ್ರ ಗುಡ್ ನ್ಯೂಸ್ ಕೊಟ್ಟಿದ್ದಾರೆ.

“UI” ಚಿತ್ರ ಡಿಸೆಂಬರ್ 20 ರಂದು ವಿಶ್ವದಾದ್ಯಂತ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಎಂಬ ವಿಷಯವನ್ನು ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತಿಳಿಸಿದೆ‌. ಪೋಸ್ಟರ್​​ನಲ್ಲಿ “ಇಷ್ಟು ದಿನ ಸಿನಿಮಾ ನೋಡಿ ನೀವು ಹಿಟ್, ಫ್ಲಾಪ್ ಅಂತ ಹೇಳ್ತಿದ್ರೀ. ಈ ಸಿನಿಮಾ ನಿಮ್ಮನ್ ನೋಡಿ” ಎಂಬ ವಾಕ್ಯವಿದ್ದು, ಇದರಿಂದ ಚಿತ್ರದ ಬಗ್ಗೆ ಅಭಿಮಾನಿಗಳಿಗಿರುವ ಕುತೂಹಲ ಮತ್ತಷ್ಟು ಹೆಚ್ಚಿದೆ.


ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ ಪ್ರೈಸಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು(ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ಕಾಲೇಜಿನಲ್ಲೇ ಮಾತ್ರೆ ಸೇವಿಸಿ ಪ್ರೊಫೆಸರ್​​ ಆತ್ಮಹತ್ಯೆಗೆ ಯತ್ನ..!

Leave a Comment

DG Ad

RELATED LATEST NEWS

Top Headlines

3-4 ಸಾವಿರ ಸೈಟ್​ಗಳ ಅಕ್ರಮ ಆಗಿದೆ, ED ಯಾವ ದಾಖಲೆ ಸಂಗ್ರಹ ಮಾಡುತ್ತೆ ನೋಡೋಣ – ಆರ್​​.ಅಶೋಕ್..!

ಮೈಸೂರು: ರಾಜ್ಯವ್ಯಾಪಿ ಭಾರೀ ಸದ್ದು ಮಾಡಿದ್ದ ಮುಡಾ ಹಗರಣದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಮೈಸೂರಿನಲ್ಲಿರುವ ಮುಡಾ ಕಛೇರಿ ಮೇಲೆ ಏಕಾಏಕಿ ದಾಳಿ

Live Cricket

Add Your Heading Text Here