Download Our App

Follow us

Home » ರಾಜಕೀಯ » ನಾನು ಮುಡಾ ಫೈಲ್​​​ಗಳನ್ನು ತಂದಿಲ್ಲ, ದೇವರ ಮುಂದೆ ಆಣೆ ಮಾಡೋಕೆ ನಾನ್​ ರೆಡಿ – ಸಚಿವ ಭೈರತಿ ಸುರೇಶ್..!

ನಾನು ಮುಡಾ ಫೈಲ್​​​ಗಳನ್ನು ತಂದಿಲ್ಲ, ದೇವರ ಮುಂದೆ ಆಣೆ ಮಾಡೋಕೆ ನಾನ್​ ರೆಡಿ – ಸಚಿವ ಭೈರತಿ ಸುರೇಶ್..!

ಬೆಂಗಳೂರು : ಇಡೀ ರಾಜ್ಯದಲ್ಲೇ ದೊಡ್ಡ ಸುದ್ದಿಯಾಗಿದ್ದ ಮುಡಾ ಹಗರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಮೈಸೂರು ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. 20ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ದಾಳಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಇದೀಗ ಬೆಂಗಳೂರಿನಲ್ಲಿ ED ರೇಡ್​ ಬಗ್ಗೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್​ ಅವರು, ದೇವರ ಮುಂದೆ ಆಣೆ ಮಾಡೋಕೆ ನಾನ್​ ರೆಡಿ. ನಾನು ಮುಡಾ ಫೈಲ್​​​ಗಳನ್ನು ತಂದಿಲ್ಲ.  ನಾನು ಫೈಲ್​ ತಂದಿರೋದನ್ನು ಬಿಜೆಪಿಯವರು ಸಾಬೀತು ಮಾಡಲಿ, ಬಿಜೆಪಿಯವರು ಕೊಡುವ ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ. ಫೈಲ್​ಗಳನ್ನು ಛಲವಾದಿ ನಾರಾಯಣ ಕದ್ದಿರಬಹುದು. ಇಲ್ಲ ಕುಮಾರಸ್ವಾಮಿಯವರೇ ತಮ್ಮ ಮನೆಯಲ್ಲಿ ಫೈಲ್​ ಇಟ್ಟಿರಬಹುದು ಎಂದು ಬೈರತಿ ಸುರೇಶ್ ಹೇಳಿದ್ದಾರೆ.

ಚಾಮುಂಡೇಶ್ವರಿಗೋ.. ಧರ್ಮಸ್ಥಳ ಮಂಜುನಾಥನ ಮುಂದೆ ಪ್ರಮಾಣಕ್ಕೆ ನಾನು ರೆಡಿ ಇದ್ದೇನೆ. EDಯವರು ಡಾಕ್ಯುಮೆಂಟ್ ಕೇಳಿದ್ದಾರೆ, ಅಧಿಕಾರಿಗಳು ಕೊಡ್ತಾರೆ. ಎಷ್ಟು ಡಾಕ್ಯುಮೆಂಟ್ ಕೇಳ್ತಾರೋ ಅಷ್ಟೂ ಡಾಕ್ಯುಮೆಂಟ್ ಕೊಡ್ತೇವೆ. 8 ಲಕ್ಷ ಡಾಕ್ಯುಮೆಂಟ್ ಇದೆ. ಅಷ್ಟನ್ನೂ ಕೊಡ್ತೇವೆ ಎಂದಿದ್ದಾರೆ.

ಕುಮಾರಸ್ವಾಮಿ ಮನೆಯಲ್ಲಿ ಫೈಲ್​​ ಇದ್ರೆ EDಯವರು ಅಲ್ಲಿಗೆ ಹೋಗಿ ಕೇಳಲಿ. ಒಂದೇ ಒಂದು ಸಣ್ಣ ಪೇಪರ್ ನಾನು ತಂದಿದ್ರೆ ದೇವರು ಕೊಡಬಾರದ ಶಿಕ್ಷೆ ಕೊಡಲಿ. ಸುಳ್ಳು ಹೇಳಿದವರು ಹಾಳಾಗಿ ಹೋಗ್ತಾರೆ. ನಾನು ಈ ದೇಶದ ಪ್ರಜೆ. ಇಡಿ ನೋಟಿಸ್​ ಕೊಟ್ಟರೆ ಉತ್ತರ ನೀಡುವೆ ಎಂದು ಬೆಂಗಳೂರಿನಲ್ಲಿ ED ರೇಡ್​ ಬಗ್ಗೆ ಸಚಿವ ಭೈರತಿ ಸುರೇಶ್​ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಕರ್ನಾಟಕ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿ ಉದ್ಘಾಟಿಸಿದ ರಾಗಿಣಿ ದ್ವಿವೇದಿ..!

Leave a Comment

DG Ad

RELATED LATEST NEWS

Top Headlines

ಕಟೀಲು ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ ಪಡೆದ ನಟ ಉಪೇಂದ್ರ..!

ಸ್ಯಾಂಡಲ್​ವುಡ್​ನ ರಿಯಲ್ ಸ್ಟಾರ್, ನಟ ಉಪೇಂದ್ರ ಅಭಿನಯದ ‘ಯುಐ’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ‘ಯುಐ’ ಟೀಮ್ ಜೊತೆ ನಟ ಉಪೇಂದ್ರ

Live Cricket

Add Your Heading Text Here