ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟುಗಳ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿದ್ದು, ಮುಡಾ ಬ್ರಹ್ಮಾಂಡ ಭ್ರಷ್ಟಾಚಾರದ ತನಿಖೆ ನಡೆಯುತ್ತಿದೆ. ತನಿಖೆ ವೇಳೆ ನೂರಾರು ಕಡತಗಳು ಸಮಿತಿಗೆ ಸಿಗುತ್ತಿಲ್ಲ. ಹಗರಣಗಳ ಪ್ರಮುಖ ಕಡತಗಳೇ ನಾಪತ್ತೆಯಾಗಿದೆ.
ಹಲವಾರು ಕಡತಗಳಲ್ಲಿ ಪ್ರಮುಖ ಹಾಳೆಗಳೇ ಇಲ್ಲ, ಕಡತಗಳ ನಾಪತ್ತೆ ಜೊತೆ ಹಾಳೆಗಳನ್ನು ಹರಿದ ಸ್ಥಿತಿಯಲ್ಲಿ ಕಡತಗಳು ಪತ್ತೆಯಾಗಿದೆ. ಕಡತಗಳ ನಾಪತ್ತೆ ಪ್ರಕರಣ ಇದೀಗ ತನಿಖಾ ಸಮಿತಿಗೆ ತಲೆನೋವಾಗಿದೆ. ಕಡತಗಳ ನಾಪತ್ತೆ ಕುರಿತು FIR ದಾಖಲಿಸಲು ತನಿಖಾ ಸಮಿತಿ ಹಿಂದೇಟು ಹಾಕುತ್ತಿದೆ. ಹಾಗಾಗಿ ತನಿಖಾ ಸಮಿತಿ ಅಧಿಕಾರಿಗಳ ರಕ್ಷಣೆಗೆ ಮುಂದಾಗಿದ್ದಾರೆ ಅನ್ನೊ ಅನುಮಾನ ಹುಟ್ಟಿಕೊಂಡಿದೆ.
ಮುಡಾ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಸೇರಿ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ಹೂಡಲು ಮೀನಾಮೇಷ ಎನಿಸುತ್ತಿದ್ದಾರೆ. ಪ್ರಕರಣ ಬಯಲಿಗೆ ಬರುವ ಮುನ್ನ ಒಂದೇ ದಿನ ನೂರಕ್ಕೂ ಹೆಚ್ಚು ಪ್ರಮುಖ ಕಡತಗಳು ಆಯುಕ್ತರ ನಿವಾಸಕ್ಕೆ ರವಾನೆಯಾಗಿತ್ತು. ಇದೀಗ ಈ ಹಗರಣ ಪತ್ತೆ ಹಚ್ಚಲು ತನಿಖಾ ಸಮಿತಿಗೆ ಕಡತಗಳೇ ಸಿಗುತ್ತಿಲ್ಲ. ಹಾಗಾಗಿ ತಮ್ಮನ್ನು ರಕ್ಷಿಸಿಕೊಳ್ಳಲು ಅಧಿಕಾರಿಗಳು ಕಡತಗಳನ್ನೇ ನಾಪತ್ತೆ ಮಾಡಿದ್ದಾರೆ ಅನ್ನೋ ಅನುಮಾನ ಎದುರಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮುಂದುವರಿದ ವರುಣನ ಅಬ್ಬರ – ಇಂದು ಕೂಡ ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ..!