Download Our App

Follow us

Home » ಅಪರಾಧ » ಉಡುಪಿ : ಆನ್​ಲೈನ್ ಟ್ರೇಡಿಂಗ್ ಹೆಸರಲ್ಲಿ ವಂಚನೆ – ನಾಲ್ವರು ಆರೋಪಿಗಳ ಬಂಧನ..!

ಉಡುಪಿ : ಆನ್​ಲೈನ್ ಟ್ರೇಡಿಂಗ್ ಹೆಸರಲ್ಲಿ ವಂಚನೆ – ನಾಲ್ವರು ಆರೋಪಿಗಳ ಬಂಧನ..!

ಉಡುಪಿ : ಆನ್‌ಲೈನ್‌ ಟ್ರೇಡಿಂಗ್​ ಹೆಸರಲ್ಲಿ ವಂಚನೆ ಮಾಡಿದ ನಾಲ್ವರು ಆರೋಪಿಗಳನ್ನು ಉಡುಪಿ ಸೆನ್ ಠಾಣೆಯ ಪೊಲೀಸರು ಬಂಧಿಸಿ 13 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ.

ಉಪೇಂದ್ರ ಭಟ್ ಎಂಬವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ವಾಟ್ಸ್ಯಾಪ್‌ ನಲ್ಲಿ ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್​ಮೆಂಟ್ ಗ್ರೂಪ್​ಗೆ ಸೇರಿಸಿ, ಟ್ರೇಡಿಂಗ್ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಉಪೇಂದ್ರ ಭಟ್​ರನ್ನು ನಂಬಿಸಿದ್ದಾರೆ. ಆದಾದ ಬಳಿಕ ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್​ನ ಅಕೌಂಟ್ ನಂಬರ್‌ ನೀಡಿ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಒಟ್ಟು 33,10,000 ಹಣ ಖಾತೆಗೆ ಹಾಕಿಸಿಕೊಂಡು ಉಪೇಂದ್ರ ಭಟ್​ಗೆ ವಂಚಿಸಿದ್ದರು.

ಈ ಬಗ್ಗೆ ಉಪೇಂದ್ರ ಭಟ್ ನೀಡಿದ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ ಪೊಲೀಸರು ಪುತ್ತೂರಿನ ಮಹಮ್ಮದ್ ಮುಸ್ತಫಾ ಪಿ. (36), ಕುಂಬ್ಳೆಯ ಖಾಲೆಡ್ಜ್. ಬಿ, (39 ), ಕಾಸರಗೋಡಿನ ಮೊಹಮ್ಮದ್ ಸಫಾನ್ ಕೆ.ಎ., (22) , ಮಂಗಳೂರಿನ ಸತೀಶ್ ಶೇಟ್(22 )ರನ್ನು ವಶಕ್ಕೆ ಪಡೆದು ಅವರಿಂದ 5 ಮೊಬೈಲ್ ಹಾಗೂ 13 ಲಕ್ಷ ರೂ.ನಗದು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಪ್ರಮುಖ ಸೂತ್ರದಾರಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ಸಾವಿನ ಮನೆಗೆ ಬಂದು ಸ್ನೇಹಿತನಿಂದಲೇ ಕೊಲೆಯಾದ ವ್ಯಕ್ತಿ – ಅಸಲಿಗೆ ಆಗಿದ್ದೇನು?

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here