ಬೆಂಗಳೂರು : ಸಾವಿನ ಮನೆಗೆ ಬಂದು ಸ್ನೇಹಿತನಿಂದಲೇ ವ್ಯಕ್ತಿ ಕೊಲೆಯಾದ ಘಟನೆ ಬೆಂಗಳೂರಿನ ಕಾಟನ್ ಪೇಟೆಯ ಅಂಜನಪ್ಪ ಗಾರ್ಡನ್ನಲ್ಲಿ ನಡೆದಿದೆ. ಸ್ನೇಹಿತ ಶರತ್ಗೆ ಚಾಕು ಇರಿದು ಆಟೋ ಚಾಲಕ ಶರತ್ ಎಂಬಾತ ಹತ್ಯೆಗೈದಿದ್ದಾನೆ.
ಅಂಜನಪ್ಪ ಗಾರ್ಡನ್ನಲ್ಲಿ ಒಂದು ಸಾವಾಗಿರುತ್ತದೆ. ಹೀಗಾಗಿ ಅವರ ಅಂತಿಮ ದರ್ಶನ ಪಡೆಯಲು ಈ ಇಬ್ಬರು ಆಗಮಿಸಿದ್ದರು. ಬಳಿಕ ವಾಪಸ್ ಮನೆಗೆ ತೆರಳುವ ವೇಳೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಇದರಿಂದ ರೊಚ್ಚಿಗೆದ್ದ ಚಾಲಕ ಶರತ್, ತನ್ನ ಸ್ನೇಹಿತ ಮತ್ತೋರ್ವ ಶರತ್ಗೆ ಚಾಕುವಿನಿಂದ ಇರಿದಿದ್ದ. ಗಾಯಾಳುವನ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಅಂತಿಮ ವಿಧಿವಿಧಾನ ಸಂದರ್ಭದಲ್ಲಿ ಮಹಿಳೆಯೋರ್ವಳನ್ನು ಮೃತ ಶರತ್ ಬೈದಿದ್ದ. ಈ ವೇಳೆ ಆರೋಪಿ ಶರತ್ ಯಾಕೆ ಬೈಯುತ್ತಿಯಾ ಎಂದು ಕೇಳಿದ್ದ. ಅಷ್ಟೇ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ಅದು ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಆರೋಪಿ ಶರತ್ ಪರಾರಿ ಆಗಿದ್ದಾನೆ. ಈ ಕುರಿತು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ : ನೆಲಮಂಗಲ : ಪಂಚಾಯಿತಿಯ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ..!