Download Our App

Follow us

Home » ಅಪರಾಧ » ಬಳ್ಳಾರಿ : ಲಾಡ್ಜ್​​ನಲ್ಲಿ ನಕಲಿ‌ ನೋಟ್ ಪ್ರಿಂಟ್ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್..!

ಬಳ್ಳಾರಿ : ಲಾಡ್ಜ್​​ನಲ್ಲಿ ನಕಲಿ‌ ನೋಟ್ ಪ್ರಿಂಟ್ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್..!

ಬಳ್ಳಾರಿ : ಲಾಡ್ಜ್​ವೊಂದರಲ್ಲಿ ನಕಲಿ ಕೋಟಾ ನೋಟುಗಳನ್ನು ಪ್ರಿಂಟ್ ಮಾಡಿ ತೆಗೆಯುತ್ತಿದ್ದ ಇಬ್ಬರು ಆರೋಪಿಗಳನ್ನು ಬಳ್ಳಾರಿ ಗಾಂಧಿನಗರ ಪೊಲೀಸರು ಬಂಧಿಸಿದ್ದಾರೆ. ಅಶೋಕ್ ಕುಮಾರ್ ಮತ್ತು ಹರೀಶ್ ಕುಮಾರ್ ಬಂಧಿತ ಆರೋಪಿಗಳು.

ಆರೋಪಿ ಅಶೋಕ್ ಕುಮಾರ್ ಬ್ಯಾಂಕ್ ಆಫ್ ಬರೋಡಾದಲ್ಲಿ ಗುತ್ತಿಗೆ ಕೆಲಸ ಮಾಡ್ತಿದ್ದನು. ಬ್ಯಾಂಕಿನಲ್ಲಿ ನೋಟ್ ಚಲಾವಣೆ ವಹಿವಾಟು ಅರಿತಿದ್ದ ಅಶೋಕ್ ಕುಮಾರ್ ಇನ್ನೋರ್ವ ಆರೋಪಿ ಹರೀಶ್ ಜೊತೆಗೆ ಸೇರಿ ನೋಟ್‌ ಪ್ರಿಂಟ್ ಮಾಡಲು ಮುಂದಾಗಿದ್ದನು.

ಇನ್ನು ಈ ವೇಳೆ ಸಿಪಿಐ ಸಿದ್ದರಾಮೇಶ್ವರ, ಪಿಎಸ್ಐ ಸೌಮ್ಯಾ ನೇತೃತ್ವದಲ್ಲಿ ಬಳ್ಳಾರಿ ಗಾಂಧಿನಗರ ಪೊಲೀಸರು ಕಾರ್ಯಚರಣೆ ನಡೆಸಿ ಬಳ್ಳಾರಿಯ ಕೋಲಾಚಲಂ ಕಾಂಪೌಂಡ್‌ ನಲ್ಲಿರುವ ಮೋಹನ್ ಲಾಡ್ಜ್‌ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಆರೋಪಿಗಳನ್ನು ಬಂಧಿಸಿದ ಪೊಲೀಸರು 100 ರೂಪಾಯಿ ಮುಖಬೆಲೆಯ ಒಟ್ಟು 80 ನಕಲಿ‌ ನೋಟುಗಳು ಹಾಗೂ  ಕೋಟಾ ನೋಟುಗಳನ್ನು ತಯಾರು ಮಾಡಲು ಬಳಸುತ್ತಿದ್ದ ಕಲರ್ ಜಿರಾಕ್ಸ್ ಪ್ರಿಂಟರ್ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ನಾಳೆಯಿಂದ ಐತಿಹಾಸಿಕ ಬೆಂಗಳೂರು ಕರಗ ಶುರು..!

Leave a Comment

DG Ad

RELATED LATEST NEWS

Top Headlines

ಸ್ಟಾರ್ ನಿರ್ದೇಶಕ ಎ.ಪಿ ಅರ್ಜುನ್ ವಿರುದ್ಧ ನಡೆಯುತ್ತಿದ್ಯಾ ಪಿತೂರಿ?

ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ವಿವಾದದಲ್ಲಿ ಸಿಲುಕಿದೆ. ನಿರ್ಮಾಪಕರಿಂದ 2.5 ಕೋಟಿ ರೂಪಾಯಿ ಪಡೆದು ಡಿಜಿಟಲ್ ಟೆರೆನ್ ಸಂಸ್ಥೆ ಗ್ರಾಫಿಕ್ಸ್

Live Cricket

Add Your Heading Text Here