ಬಳ್ಳಾರಿ : ಲಾಡ್ಜ್ವೊಂದರಲ್ಲಿ ನಕಲಿ ಕೋಟಾ ನೋಟುಗಳನ್ನು ಪ್ರಿಂಟ್ ಮಾಡಿ ತೆಗೆಯುತ್ತಿದ್ದ ಇಬ್ಬರು ಆರೋಪಿಗಳನ್ನು ಬಳ್ಳಾರಿ ಗಾಂಧಿನಗರ ಪೊಲೀಸರು ಬಂಧಿಸಿದ್ದಾರೆ. ಅಶೋಕ್ ಕುಮಾರ್ ಮತ್ತು ಹರೀಶ್ ಕುಮಾರ್ ಬಂಧಿತ ಆರೋಪಿಗಳು.
ಆರೋಪಿ ಅಶೋಕ್ ಕುಮಾರ್ ಬ್ಯಾಂಕ್ ಆಫ್ ಬರೋಡಾದಲ್ಲಿ ಗುತ್ತಿಗೆ ಕೆಲಸ ಮಾಡ್ತಿದ್ದನು. ಬ್ಯಾಂಕಿನಲ್ಲಿ ನೋಟ್ ಚಲಾವಣೆ ವಹಿವಾಟು ಅರಿತಿದ್ದ ಅಶೋಕ್ ಕುಮಾರ್ ಇನ್ನೋರ್ವ ಆರೋಪಿ ಹರೀಶ್ ಜೊತೆಗೆ ಸೇರಿ ನೋಟ್ ಪ್ರಿಂಟ್ ಮಾಡಲು ಮುಂದಾಗಿದ್ದನು.
ಇನ್ನು ಈ ವೇಳೆ ಸಿಪಿಐ ಸಿದ್ದರಾಮೇಶ್ವರ, ಪಿಎಸ್ಐ ಸೌಮ್ಯಾ ನೇತೃತ್ವದಲ್ಲಿ ಬಳ್ಳಾರಿ ಗಾಂಧಿನಗರ ಪೊಲೀಸರು ಕಾರ್ಯಚರಣೆ ನಡೆಸಿ ಬಳ್ಳಾರಿಯ ಕೋಲಾಚಲಂ ಕಾಂಪೌಂಡ್ ನಲ್ಲಿರುವ ಮೋಹನ್ ಲಾಡ್ಜ್ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಆರೋಪಿಗಳನ್ನು ಬಂಧಿಸಿದ ಪೊಲೀಸರು 100 ರೂಪಾಯಿ ಮುಖಬೆಲೆಯ ಒಟ್ಟು 80 ನಕಲಿ ನೋಟುಗಳು ಹಾಗೂ ಕೋಟಾ ನೋಟುಗಳನ್ನು ತಯಾರು ಮಾಡಲು ಬಳಸುತ್ತಿದ್ದ ಕಲರ್ ಜಿರಾಕ್ಸ್ ಪ್ರಿಂಟರ್ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ನಾಳೆಯಿಂದ ಐತಿಹಾಸಿಕ ಬೆಂಗಳೂರು ಕರಗ ಶುರು..!