ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಇದರ ಜೊತೆಗೆ ಭೀಕರ ಚಳಿ ನಡುವೆಯೂ ಹಲವೆಡೆ ಮಳೆ ಮುಂದುವರೆದಿದೆ. ಇಂದಿನಿಂದ 2 ದಿನಗಳ ಕಾಲ ಈ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ಮಳೆ?
ಇಂದು ಮತ್ತು ನಾಳೆ ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಹಿಮದ ಜೊತೆಗೆ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಉತ್ತರಾಖಂಡದಲ್ಲಿ ಸಾಧಾರಣ ಮಳೆ ಇದ್ದು, ಉತ್ತರ ಭಾರತದ ಕೆಲವು ಭಾಗಗಳಲ್ಲಿ ತಡರಾತ್ರಿ ಮಳೆ ಬೀಳಲಿದ್ದು, ಮಂಜು ಕೂಡ ಇರಲಿದೆ.
ದೆಹಲಿಯಲ್ಲೂ ಮಳೆ ಅಬ್ಬರ
ಇನ್ನು, ದೆಹಲಿಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಬೆಳಗ್ಗೆಯಿಂದಲೇ ಗಾಳಿ ಸಮೇತ 4 ಕಿಲೋ ಮೀಟರ್ ವೇಗದಲ್ಲಿ ಮಳೆ ಬೀಳಲಿದೆ. ಮಧ್ಯಾಹ್ನದ ವೇಳೆಗೆ ಗಾಳಿಯು 8-10 ಕಿಲೋ ಮೀಟರ್‌ವರೆಗೆ ಬೀಸಲಿದೆ.
ಹಿಮಾಚಲ ಪ್ರದೇಶದ ಶಿಮ್ಲಾ, ಕಿನ್ನೌರ್, ಲಾಹೌಲ್ ಮತ್ತು ಸ್ಪಿತಿ, ಚಂಬಾ, ಕಂಗ್ರಾ, ಕುಲು ಮತ್ತು ಮಂಡಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ. ಭಾರೀ ಮಳೆ ಹಿನ್ನೆಲೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ : ಶೃಂಗೇರಿಯ ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥ ಪ್ರೌಢಶಾಲೆಗೆ 100% ಫಲಿತಾಂಶದ ಸಂಭ್ರಮ.. ಕಾರಣೀಭೂತರಾದ ಶಿಕ್ಷಕ ವೃಂದಕ್ಕೆ ಸನ್ಮಾನ..!