ಇಟಲಿ : ನೀಲಿ ಚಿತ್ರಗಳ ತಾರೆಯನ್ನು ಹತ್ಯೆಗೈದು, ಆಕೆಯ ಮುಖವನ್ನು ಸುಟ್ಟು, ದೇಹದ ಭಾಗಗಳನ್ನು ತುಂಡು, ತುಂಡಾಗಿ ಕತ್ತರಿಸಿ ಗೋಣಿಚೀಲದಲ್ಲಿ ತುಂಬಿ ಬಿಸಾಕಿರುವ ವಿಕೃತ ಘಟನೆ ಇಟಲಿಯಲ್ಲಿ ನಡೆದಿದೆ. ಇಟಲಿ ಮೂಲದ ನಟಿ ಕರೋಲ್ ಮಾಲ್ಟೆಸಿ ಸಾವಿನ ಕಥೆ ಭಯಾನಕವಾಗಿದೆ. ಅಶ್ಲೀಲ ಚಿತ್ರದ ಮೂಲಕ ಹಣ ಸಂಪಾದನೆ ಮಾಡ್ತಿದ್ದ ಕರೋಲ್ ಮಾಲ್ಟೆಸಿ ಜೀವ ಅದೇ ಚಿತ್ರದ ಶೂಟಿಂಗ್ ವೇಳೆ ಹೋಗಿದೆ. ಮರ್ಡರ್ ಮಾಡಿದ ವ್ಯಕ್ತಿ, ನಟಿ ಹೆಸರಿನಲ್ಲೇ ಹಣ ಸಂಪಾದನೆ ಮಾಡಿದ್ದಾನೆ.
ಅಶ್ಲೀಲ ಸಿನಿಮಾಗಳಲ್ಲಿ ಕೆಲಸ ಮಾಡ್ತಿದ್ದ ನಟಿ ಕರೋಲ್ ಮಾಲ್ಟೆಸಿ ಸಾವಿನ ಕಥೆ ಅಚ್ಚರಿ ಹುಟ್ಟಿಸುವಂತಿದೆ. ಸಿನಿಮಾ ಶೂಟಿಂಗ್ ವೇಳೆಯೇ ಆಕೆ ಸಾವನ್ನಪ್ಪಿದ್ದಾಳೆ. ಆದ್ರೆ ಹಣಕ್ಕಾಗಿ ನಟಿ ಜೀವಂತವಿದ್ದಾಳೆಂದು ಬಿಂಬಿಸಲಾಗಿತ್ತು. ಎರಡು ತಿಂಗಳ ಕಾಲ ಈ ಕಣ್ಣಾಮುಚ್ಚಾಲೆ ಆಟ ಮುಂದುವರೆದಿತ್ತು. ಆ ನಂತ್ರ ನಟಿಯ ಹತ್ಯೆಯ ಬಗ್ಗೆ ಭಯಾನಕ ಸತ್ಯ ಹೊರಗೆ ಬಿದ್ದಿದೆ. ಕರೋಲ್ ಮಾಲ್ಟೆಸಿ, ಇಟಲಿಯ ಪ್ರಸಿದ್ಧ ಪೋರ್ನ್ ಸ್ಟಾರ್. ಆಕೆಯನ್ನು ಜನರು ಚಾರ್ಲೋಟ್ ಆಂಜಿ ಎಂದೂ ಕರೆಯುತ್ತಿದ್ದರು. 26 ವರ್ಷದ ಕರೋಲ್ ಮಾಲ್ಟೆಸಿ, ಅತ್ಯಂತ ಪ್ರಸಿದ್ಧ ನಟಿ. ಆಕೆಯ ವಿಡಿಯೋಗಳು ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ್ದವು. ಸೋಶಿಯಲ್ ಮೀಡಿಯಾದಲ್ಲೂ ಪ್ರಸಿದ್ಧಿ ಪಡೆದಿರುವ ಕರೋಲ್ ಮಾಲ್ಟೆಸಿ, ಲಕ್ಷಾಂತರ ಮಂದಿ ಫಾಲೋವರ್ಸ್ ಹೊಂದಿದ್ದಳು.
ರೋಲ್ ಮಾಲ್ಟೆಸಿ ಬಾಯ್ ಫ್ರೆಂಡ್ ಡೇವಿಡ್ ಫೊಂಟೋನಾ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಬ್ರೇಸಿಯಾ ನಗರದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಂಕರ್ ಆಗಿದ್ದ ಡೇವಿಡ್ ಫೊಂಟೋನಾ, ಕರೋಲ್ ಅವರ ನೆರೆ ಮನೆಯಲ್ಲಿ ವಾಸವಾಗಿದ್ದ. ಅಲ್ಲದೇ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕೆಲವು ತಿಂಗಳ ಹಿಂದೆ ಇಬ್ಬರ ನಡುವೆ ಜಗಳ ನಡೆದಿತ್ತು. ನಂತರ ಜನವರಿಯಲ್ಲಿ ನಟಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆಗೈದಿದ್ದಾನೆ. ದೇಹವನ್ನು ಸುಡಲು ಕೂಡ ಪ್ರಯತ್ನಿಸಿದ್ದಾನೆ. ಬಳಿಕ ದೇಹ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ರಸ್ತೆಗೆ ಎಸೆದಿದ್ದಾನೆ.
ಸತ್ತ ವ್ಯಕ್ತಿಯ ಮೊಬೈಲ್‍ನಿಂದ ಕೊಲೆಗಾರ ಮಾತ್ರವೇ ರಿಪ್ಲೈ ಮಾಡಬಲ್ಲ ಎಂದು ಊಹಿಸಿದ ಪತ್ರಕರ್ತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೊನೆಗೆ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ : “ಅಪಾಯವಿದೆ ಎಚ್ಚರಿಕೆ” ಚಿತ್ರದ ಪ್ರಯೋಗಾತ್ಮಕ ಟೀಸರ್ ಅನಾವರಣ – ವಿಭಿನ್ನ ಕಥೆಯ ಹಾರರ್ ಥ್ರಿಲ್ಲರ್ ಸಿನಿಮಾ!