ಬೆಂಗಳೂರು : ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟ ಡಾಲಿ ಧನಂಜಯ್ ಅವರು ತಮ್ಮ ವಿವಾಹ ಸಮಾರಂಭಕ್ಕೆ ಈಗಾಗಲೇ ಸಿನಿಮಾ ರಂಗದ ತಾರೆಯರು, ರಾಜಕೀಯ ನಾಯಕರು, ಸ್ವಾಮೀಜಿಗಳು, ಮಠಾಧೀಶರು, ಗಣ್ಯರು ಸೇರಿ ಹಲವರಿಗೆ ಮದುವೆ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸುತ್ತಿದ್ದಾರೆ.
ಇಂದು ನಟ ಡಾಲಿ ಧನಂಜಯ್ ಅವರು ಮಾಜಿ ಶಾಸಕರಾದ ಹಾಗೂ ನೈಸ್ ಸಂಸ್ಥೆಯ ಮುಖ್ಯಸ್ಥರಾದ ಅಶೋಕ್ ಖೇಣಿ ಅವರನ್ನು ಭೇಟಿ ಮಾಡಿ ಮದುವೆಯ ಆಮಂತ್ರಣ ಪತ್ರಿಕೆ ನೀಡಿ ತಮ್ಮ ಮದುವೆ ಸಮಾರಂಭಕ್ಕೆ ಪ್ರೀತಿ ಪೂರ್ವಕವಾಗಿ ಆಹ್ವಾನಿಸಿದ್ದಾರೆ. ಅಶೋಕ್ ಖೇಣಿ ಅವರು ತಮ್ಮ ನಿವಾಸಕ್ಕೆ ಆಗಮಿಸಿದ ಡಾಲಿ ಧನಂಜಯ್ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ.
ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದ ಡಾಲಿ ಧನಂಜಯ್ಗೆ ಅಶೋಕ್ ಖೇಣಿ ಅವರು ದಾಂಪತ್ಯ ಜೀವನದ ಶುಭಾಶಯ ಕೋರಿದ್ದಾರೆ. ಡಾಕ್ಟರ್ ಧನ್ಯತಾ ಅವರ ಜೊತೆ ಹೊಸ ಬದುಕಿನ ಪಯಣ ಪ್ರಾರಂಭಿಸಲಿರುವ ಡಾಲಿ ಧನಂಜಯ್ ಅವರಿಗೆ ಒಳ್ಳೆಯದಾಗಲಿ ಎಂದು ಮನದುಂಬಿ ಹಾರೈಸಿದ್ದಾರೆ.
ಇನ್ನೂ ಫೆಬ್ರವರಿ 15-16 ರಂದು ಮೈಸೂರಿನಲ್ಲಿ ನಟ ಡಾಲಿ ಧನಂಜಯ್ ಅವರು ಡಾಕ್ಟರ್ ಧನ್ಯತಾ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ಮದುವೆ ತಯಾರಿ ಕೂಡ ಶುರುವಾಗಿದೆ.
ಇದನ್ನೂ ಓದಿ : ಕೋರ್ಟ್ಗೆ ಸ್ಯಾಂಡಲ್ವುಡ್ “ಮೋಹಕ ತಾರೆ” ಹಾಜರ್ – ಬರೋಬ್ಬರಿ 1 ಕೋಟಿ ಪರಿಹಾರಕ್ಕೆ ರಮ್ಯಾ ಮನವಿ..!