Download Our App

Follow us

Home » ಅಪರಾಧ » ಬೆಂಗಳೂರು : ಡ್ರಿಂಕ್ ಅಂಡ್​ ಡ್ರೈವ್ ತಪಾಸಣೆ ವೇಳೆ ಸಂಚಾರ ಪೊಲೀಸರ‌ ಜೊತೆ ಯುವಕರ ಕಿರಿಕ್​..!

ಬೆಂಗಳೂರು : ಡ್ರಿಂಕ್ ಅಂಡ್​ ಡ್ರೈವ್ ತಪಾಸಣೆ ವೇಳೆ ಸಂಚಾರ ಪೊಲೀಸರ‌ ಜೊತೆ ಯುವಕರ ಕಿರಿಕ್​..!

ಬೆಂಗಳೂರು : ಡ್ರಿಂಕ್ ಅಂಡ್​ ಡ್ರೈವ್ ತಪಾಸಣೆ ವೇಳೆ ಸಂಚಾರ ಪೊಲೀಸರ‌ ಜೊತೆ ಯುವಕರು ಕಿರಿಕ್​ ಮಾಡಿರುವ ಘಟನೆ ನಗರದ ಹೆಬ್ಬಾಳ ಸರ್ಕಲ್ ರಿಂಗ್‌ರೋಡ್​​ನಲ್ಲಿ ನಡೆದಿದೆ. ಕಾರ್​ನಲ್ಲಿದ್ದ ಮೂವರು ಯುವಕರು ಟ್ರಾಫಿಕ್​​​ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.

ವೀಕೆಂಡ್​ ಪಾರ್ಟಿ ಬಳಿಕ‌ ಕಾರಿನಲ್ಲಿ ಬರ್ತಿದ್ದವರನ್ನು ಹೆಬ್ಬಾಳ ಸರ್ಕಲ್ ರಿಂಗ್‌ರೋಡ್​ನಲ್ಲಿ ತಡೆದು ಟ್ರಾಫಿಕ್​​​ ಪೊಲೀಸರು ವಿಚಾರಣೆ ಮಾಡಿದ್ರು. ಸ್ಟೀಪ್ ಡಿಜೈರ್ ಕಾರಿನಲ್ಲಿ‌ ಬಂದ ಮೂವರು ಯುವಕರನ್ನು ತಪಾಸಣೆ ಮಾಡುವ ವೇಳೆ ಈ ಹೈಡ್ರಾಮಾ ನಡೆದಿದೆ. ಆಲ್ಕೋ ಮೀಟರ್​​ನಲ್ಲಿ ಡ್ರೈವರ್​​ ನವೀನ್​​​ ಡ್ರಿಂಕ್ಸ್ ಮಾಡಿರೋದು ಗೊತ್ತಾಗಿದೆ.

ಸ್ನೇಹಿತರಾದ ಅಬ್ದುಲ್,‌ ಕಿರಣ್ ಗುಂಪು ಕಟ್ಟಿಕೊಂಡು ಪೊಲೀಸ್ ‌ಜೊತೆ ಗಲಾಟೆ ಮಾಡಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಬ್ಬಾಳ ಸಂಚಾರ ಠಾಣೆ ಇನ್ಸ್​ಪೆಕ್ಟರ್​​ ದೂರು ನೀಡಿದ್ದರು. ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ : ಜೆಡಿಎಸ್ ಪಕ್ಷಕ್ಕೆ ನೂತನ ಪದಾಧಿಕಾರಿಗಳ ನೇಮಕ : ಇಲ್ಲಿದೆ ಪಟ್ಟಿ..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆ ಸಾ*ವು..!

ಉಡುಪಿ : 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶವಿದೆ. ಹಾಗಾಗಿ ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಪಿ.ಯಶೋಧಾ ನಾರಾಯಣ ಉಪಾಧ್ಯ

Live Cricket

Add Your Heading Text Here