ಬೆಳಗಾವಿ : ಬೆಳಗಾವಿಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ತುಂಬಿ ಹರಿಯುತ್ತಿದ್ದ ನದಿಗೆ ಟ್ರಾಕ್ಟರ್ ಮುಗುಚಿ ಬಿದ್ದಿದೆ. 13 ಜನರಿದ್ದ ಟ್ರ್ಯಾಕರ್ ಅವರಾದಿ ನಂದಗಾಂವ್ ಬಳಿ ನದಿಗೆ ಬಿದ್ದಿದೆ.
ಮೂಡಲಗಿಯ ಅವರಾದಿ-ಬಾಗಲಕೋಟೆಯ ನಂದಗಾಂವ್ ಮಧ್ಯೆ ಇರುವ ಬ್ಯಾರೇಜ್ನಲ್ಲಿ ಈ ಅವಘಡ ಸಂಭವಿಸಿದೆ. ಟ್ರೇಲರ್ ಸಮೇತ ಟ್ರಾಕ್ಟರ್ ನೀರಿಗೆ ಬಿದ್ದಿದ್ದು, ಅದೃಷ್ಟವಷಾತ್ 12 ಮಂದಿ ಈಜಿ ದಡ ಸೇರಿದ್ದಾರೆ.
13 ಜನರು ಅವರಾದಿಯಿಂದ ನಂದಗಾಂವ್ ಗೆ ಟ್ರ್ಯಾಕ್ಟರ್ ಮೇಲೆ ಕುಳಿತುಕೊಂಡು ಕೂಲಿ ಕೆಲಸಕ್ಕೆಂದು ತೆರಳುತ್ತಿದ್ದರು. ನದಿ ದಾಟುವಾಗ ಟ್ರಾಕ್ಟರ್ ಆಯತಪ್ಪಿ ಘಟಪ್ರಭಾ ನದಿಗೆ ಬಿದ್ದಿದೆ. ನೀರಲ್ಲಿ ಕಣ್ಮರೆಯಾಗಿರುವ ಓರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕುಲಗೋಡ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಕಾರಿಗೆ ಬೈಕ್ ಅಡ್ಡ ಹಾಕಿ ಬಾನೆಟ್‌ಗೆ ಒದ್ದು ಪರಾರಿಯಾದ ಬೈಕ್ ಸವಾರ..!
Post Views: 379