Download Our App

Follow us

Home » ಸಿನಿಮಾ » ಯಶ್‌ ಬರ್ತ್‌ಡೇಗೆ ‘ಟಾಕ್ಸಿಕ್’ ಝಲಕ್ – ಪಾರ್ಟಿ ಮೂಡ್‌ನಲ್ಲಿ ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟ ರಾಕಿಭಾಯ್!

ಯಶ್‌ ಬರ್ತ್‌ಡೇಗೆ ‘ಟಾಕ್ಸಿಕ್’ ಝಲಕ್ – ಪಾರ್ಟಿ ಮೂಡ್‌ನಲ್ಲಿ ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟ ರಾಕಿಭಾಯ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಮೊದಲ ಗ್ಲಿಂಪ್ಸ್ ರಿಲೀಸ್ ಆಗಿದೆ. ನಟ ಯಶ್ ಅವರು ಮಸ್ತ್ ಆಗಿರುವ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಬರ್ತ್​ಡೇ ದಿನ ರಾಕಿಭಾಯ್ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಕೊಟ್ಟಿದ್ದಾರೆ. ಸಖತ್ ಆಗಿರುವ ಬಿಜಿಎಂ ಜೊತೆ ಯಶ್ ಅವರ ಮಸ್ತ್ ಲುಕ್ ರಿವೀಲ್ ಆಗಿದ್ದು, ಟಾಕ್ಸಿಕ್ ಅವತಾರದಲ್ಲಿ ಯಶ್ ಮಿರ ಮಿರ ಮಿಂಚಿದ್ದಾರೆ.

ರಾಕಿಂಗ್ ಸ್ಟಾರ್ ಇಂದು ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದು, 39 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಯಶ್ ಈ​ ಮೊದಲೇ ತಮ್ಮ ಸಿನಿಮಾದ ಅಪ್ಡೇಟ್ ಒಂದನ್ನು ಬರ್ತ್​ಡೇ ದಿನವೇ ಕೊಡೋದಾಗಿ ಹೇಳಿದ್ದರು. ಅದರಂತೆಯೇ ಈಗ ಟಾಕ್ಸಿಕ್ ಸಿನಿಮಾದ ಅಪ್ಡೇಟ್ ರಿಲೀಸ್ ಮಾಡಲಾಗಿದೆ.

ಯಶ್ ಅವರನ್ನು ಈ ಒಂದು ಗ್ಲಿಂಪ್ಸ್​​ನಲ್ಲಿ ಸಖತ್ ಸ್ಟೈಲಿಷ್ ಆಗಿ ತೋರಿಸಲಾಗಿದೆ. ವಿಂಟೇಜ್ ಕಾರಿನಿಂದ ಬಂದು ಇಳಿಯುವ ಯಶ್, ಕ್ಲಬ್ ಒಂದಕ್ಕೆ ಎಂಟ್ರಿ ಕೊಡುತ್ತಾರೆ. ಮದ್ಯ, ಲಲನೆಯರು, ನಶೆ ತುಂಬಿರುವ ಪಾರ್ಟಿಯಲ್ಲಿ ರಾಕಿಭಾಯ್ ಎಂಟ್ರಿಯನ್ನು ಮಸ್ತ್ ಆಗಿ ತೋರಿಸಲಾಗಿದೆ.

ಬರ್ತ್​ಡೇ ಪೀಕ್ ಎನ್ನುವ ಹೆಸರಿನಲ್ಲಿ ಯಶ್ ಅವರ ಈ ಒಂದು ಗ್ಲಿಂಪ್ಸ್ ಅನ್ನು ಕೆವಿಎನ್ ಪ್ರೊಡಕ್ಷನ್ಸ್ ಯೂಟ್ಯೂಬ್​ ಚಾನಲ್​ನಲ್ಲಿ ರಿಲೀಸ್ ಮಾಡಲಾಗಿದೆ. ಇಷ್ಟು ದಿನ ಯಾವಾಗ ‘ಟಾಕ್ಸಿಕ್’ ಅಪ್ಡೇಟ್ ಕೊಡ್ತಾರಪ್ಪ ಅಂತ ಯಶ್ ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದರು. ಅದಕ್ಕೆ ತಕ್ಕಂತೆ ಇಷ್ಟೊಂದು ಸಮಯ ಕಾದರೂ ಕೂಡಾ ಯಶ್ ಅಭಿಮಾನಿಗಳಿಗೆ ನಿರಾಸೆಯಾಗಿಲ್ಲ. ನಿರೀಕ್ಷೆಗೆ ತಕ್ಕಂತೆಯೇ ಚಿತ್ರತಂಡ ಭರ್ಜರಿ ಗಿಫ್ಟ್​ ನೀಡಿದ್ದಾರೆ. ಗ್ಲಿಂಪ್ಸ್​​ಗೆ ಮಸ್ತ್ ಆಗಿರುವ ಬಿಜಿಎಂ, ಯಶ್ ಕಾಸ್ಟ್ಯೂಮ್, ಸ್ಟೈಲ್ ಎಲ್ಲವನ್ನೂ ನೋಡುತ್ತಿದ್ದರೆ ಇದು ಸಕತ್ ಪ್ರಾಮಿಸಿಂಗ್ ಆಗಿಯೇ ಮೂಡಿ ಬಂದಿದೆ ಎನ್ನುವುದರಲ್ಲಿ ಡೌಟೇ ಇಲ್ಲ.

‘ಟಾಕ್ಸಿಕ್’ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರಡಕ್ಷನ್ಸ್ ಮೂಲಕ ವೆಂಕಟ್ ನಾರಾಯಣ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಬಿಗ್ ಬಜೆಟ್​ನಲ್ಲಿ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಹಿಂದಿಯ ಕಿಯಾರಾ ಅಡ್ವಾಣಿ, ತಮಿಳಿನ ನಯನತಾರಾ ನಟಿಸುತ್ತಿದ್ದಾರೆ. ಈ ಸಿನಿಮಾ ವರ್ಷಾಂತ್ಯಕ್ಕೆ ರಿಲೀಸ್ ಆಗಲಿದೆ. ಇದನ್ನು, ಪ್ಯಾನ್​ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡಲು ಆಲೋಚನೆ ನಡೆದಿದೆ. ಈ ಚಿತ್ರದಲ್ಲಿ ಹಾಲಿವುಡ್ ತಂತ್ರಜ್ಞರು ಕೂಡ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ‘ಲೋಕಾ’ – ಬೆಂಗಳೂರು, ಗದಗ ಸೇರಿ ರಾಜ್ಯದ ಹಲವೆಡೆ ದಾಳಿ​!

Leave a Comment

DG Ad

RELATED LATEST NEWS

Top Headlines

“ಫಾರೆಸ್ಟ್”ಚಿತ್ರದ “ಪೈಸಾ ಪೈಸಾ ಪೈಸಾ” ಹಾಡಿಗೆ ಫ್ಯಾನ್ಸ್ ಫಿದಾ – ಅಡ್ವೆಂಚರ್ಸ್ ಕಾಮಿಡಿಯ ಸಿನಿಮಾ ಜನವರಿ 24ಕ್ಕೆ ರಿಲೀಸ್!

ಬೆಂಗಳೂರು : ಆರಂಭದಿಂದಲೂ ಕುತೂಹಲ ಮೂಡಿಸಿರುವ ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ ಮಲ್ಟಿ ಸ್ಟಾರರ್ ಸಿನಿಮಾ “ಫಾರೆಸ್ಟ್” ಚಿತ್ರದ “ಪೈಸಾ ಪೈಸಾ ಪೈಸಾ” ಹಾಡು ಇತ್ತೀಚೆಗೆ ಬಿಡುಗಡೆಯಾಗಿ 5

Live Cricket

Add Your Heading Text Here