ಬಹುನಿರೀಕ್ಷಿತ 2025ರ ಐಪಿಎಲ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಗೆ ವೇದಿಕೆ ಸಿದ್ದವಾಗಿದ್ದು, ಇಂದು ಮತ್ತು ನಾಳೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಈ ಬಿಗ್ ಈವೆಂಟ್ ನಡೆಯಲಿದೆ. ಇದು ವಿದೇಶದಲ್ಲಿ ನಡೆಯುತ್ತಿರುವ ಎರಡನೇ IPL ಬಿಡ್ಡಿಂಗ್ ಪ್ರಕ್ರಿಯೆಯಾಗಿದೆ. ಈ ಬಾರಿ ಹರಾಜಿನಲ್ಲಿ ಒಟ್ಟು 1,574 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ ಫ್ರಾಂಚೈಸಿಗಳ ಸೂಚನೆಯ ಮೇರೆಗೆ ಬಿಸಿಸಿಐ 577 ಆಟಗಾರರನ್ನು ಶಾರ್ಟ್ ಲಿಸ್ಟ್ ಮಾಡಿದ್ದು, ಈ ಪೈಕಿ 204 ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಸಜ್ಜಾಗಿದೆ.
ಮೆಗಾ ಆಕ್ಷನ್ ಎಷ್ಟು ಗಂಟೆಗೆ ಆರಂಭ? ಯಾವ ಚಾನೆಲ್ನಲ್ಲಿ ವೀಕ್ಷಿಸಬಹುದು? ಇಲ್ಲಿದೆ ಮಾಹಿತಿ.
ಐಪಿಎಲ್ ಸೀಸನ್-18ರ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾ ಸಮಯ ಮಧ್ಯಾಹ್ನ 1 ಗಂಟೆಗೆ ಹಾಗೂ ಭಾರತೀಯ ಕಾಲಮಾನ ಸಂಜೆ 3.30ರಿಂದ ಶುರುವಾಗಲಿದೆ. ಈ ಬಾರಿಯ ಮೆಗಾ ಹರಾಜನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಮೊಬೈಲ್ನಲ್ಲಿ ಜಿಯೋ ಸಿನಿಮಾ ಆ್ಯಪ್ನಲ್ಲೂ ಉಚಿತವಾಗಿ ನೋಡಬಹುದು.
ಈಗಾಗಲೇ 10 ಫ್ರಾಂಚೈಸಿಗಳು 46 ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದ್ದು, ಇನ್ನುಳಿದ 204 ಆಟಗಾರರಿಗಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ. ಹೀಗಾಗಿ 577 ಆಟಗಾರರಲ್ಲಿ ಗರಿಷ್ಠ 204 ಪ್ಲೇಯರ್ಸ್ಗೆ ಮಾತ್ರ ಚಾನ್ಸ್ ಸಿಗಲಿದೆ. 577 ಆಟಗಾರರಲ್ಲಿ 367 ಭಾರತೀಯರು ಮತ್ತು 210 ವಿದೇಶಿ ಆಟಗಾರರಿದ್ದಾರೆ.
ಪ್ರತಿ ಫ್ರಾಂಚೈಸಿಗಳ ಬಳಿ ಇರುವ ಹರಾಜು ಮೊತ್ತ ಎಷ್ಟು?
ಚೆನ್ನೈ ಸೂಪರ್ ಕಿಂಗ್ಸ್ : 55 ಕೋಟಿ ರೂ.
ಡೆಲ್ಲಿ ಕ್ಯಾಪಿಟಲ್ಸ್ : 73 ಕೋಟಿ ರೂ.
ಕೊಲ್ಕತ್ತಾ ನೈಟ್ ರೈಡರ್ಸ್ : 51 ಕೋಟಿ ರೂ.
ರಾಯಲ್ ಚಾಲೆಂಜರ್ಸ್ ಬೆಂಗಳೂರು : 83 ಕೋಟಿ ರೂ.
ರಾಜಸ್ಥಾನ್ ರಾಯಲ್ಸ್ : 41 ಕೋಟಿ ರೂ.
ಲಕ್ನೋ ಸೂಪರ್ ಜೈಂಟ್ಸ್ : 69 ಕೋಟಿ ರೂ.
ಮುಂಬೈ ಇಂಡಿಯನ್ಸ್ : 45 ಕೋಟಿ ರೂ
ಸನ್ರೈಸರ್ಸ್ ಹೈದರಾಬಾದ್ : 45 ಕೋಟಿ ರೂ.
ಗುಜರಾತ್ ಟೈಟಾನ್ಸ್ : 69 ಕೋಟಿ ರೂ.
ಪಂಜಾಬ್ ಕಿಂಗ್ಸ್ : 110.5 ಕೋಟಿ ರೂ.
ಇದನ್ನೂ ಓದಿ : ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಖಡಕ್ ವಾರ್ನಿಂಗ್.. ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ..!