Download Our App

Follow us

Home » ಅಪರಾಧ » ಹಳೇ ಲವ್ವರ್‌ ಮೀಟ್ ಆಗೋಣ ಬಾ ಅಂದ್ರೆ ಹೋಗ್ತೀರಾ? ಹುಷಾರ್.. ನಂಬಿ ಹೋದವನ ಕಥೆ ಆಗಿದ್ದೇನು ಗೊತ್ತಾ?

ಹಳೇ ಲವ್ವರ್‌ ಮೀಟ್ ಆಗೋಣ ಬಾ ಅಂದ್ರೆ ಹೋಗ್ತೀರಾ? ಹುಷಾರ್.. ನಂಬಿ ಹೋದವನ ಕಥೆ ಆಗಿದ್ದೇನು ಗೊತ್ತಾ?

ಬೆಂಗಳೂರು : ಹಳೇ ಲವ್ವರ್‌ ಮಾತಿಗೆ ಮರುಳಾಗಿ ಮೀಟ್ ಮಾಡಲು ಬಂದ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಸುಲಿಗೆ ಮಾಡಿದ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎಟಿಎಂ ಬಳಿ ನಡೆಯುತ್ತಿದ್ದ ಜಗಳನ್ನು ಗಮನಿಸಿದ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಕೋರಮಂಗಲ ಪೊಲೀಸರಿಂದ ಖತರ್ನಾಕ್ ಹನಿಗ್ಯಾಂಗ್​ ಬಂಧನವಾಗಿದೆ. ಆಂಧ್ರದ ನೆಲ್ಲೂರು ಮೂಲದ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆಂಧ್ರದಲ್ಲಿ ಕಿಡ್ನಾಪ್ ಮಾಡಿ ಪಾವಗಡ ಹಾಗೂ ಬೆಂಗಳೂರಿಗೆ ಕರೆತಂದು ಹಲ್ಲೆ ಮಾಡಿ ಹಣ ಸುಲಿಗೆ ಮಾಡಿದ ಆರೋಪವನ್ನು ಇವರು ಎದುರಿಸುತ್ತಿದ್ದಾರೆ. ಮೋನಿಕಾ, ರೀಶ್, ಹರಿಕೃಷ್ಣ, ನರೇಶ್, ರಾಜ್ ಕುಮಾರ್, ನರಸಿಂಹ, ಅಂಜನೀಲ್ ಬಂಧಿತ ಆರೋಪಿಗಳು.

ಅಷ್ಟಕ್ಕೂ ಆಗಿದ್ದೇನು? ಆಂಧ್ರದ ನೆಲ್ಲರೂರಿನ ಮೆಡಿಕಲ್ ಶಾಪ್​​​ನಲ್ಲಿ ಶಿವ ಇಟ್ಕೊಂಡಿದ್ದ. ಈ ವೇಳೆ ಸಂಬಂಧಿಯಾದ ಮೌನಿಕ ಜೊತೆ ಶಿವನಿಗೆ ಪ್ರೇಮಾಂಕುರವಾಗಿತ್ತು. ಒಂದು ವರ್ಷದ ಹಿಂದೆ ಮೌನಿಕ ಶಿವನಿಂದ ದೂರವಾಗಿದ್ದಳು. ಆದ್ರೆ, ನವೆಂಬರ್ 17ರಂದು ಮೌನಿಕ ಏಕಾಏಕಿ ಶಿವನಿಗೆ ಕರೆ ಮಾಡಿ ಮೀಟ್​ ಮಾಡಲು ಪೆನಾಗೊಂಡಗೆ ಕರೆದಿದ್ದಾಳೆ. ಅಷ್ಟು ಮಾತ್ರವಲ್ಲ ನಿನ್ನ ಬಳಿ ಇರೋ ಕಾರು, ಚಿನ್ನಾಭರಣದ ಜೊತೆಗೆ ಬಾ ಸ್ನೇಹಿತರಿಗೆ ನಿನ್ನನ್ನು ಪರಿಚಯ ಮಾಡಿಸಬೇಕು ಎಂದು ಕೂಡ ಹೇಳಿದ್ದಾಳೆ.

ಮಾಜಿ ಪ್ರೇಯಸಿಯ ಮಾತನ್ನು ನಂಬಿದ ಶಿವ, ತನ್ನ ಬಳಿ ಇದ್ದ ಚಿನ್ನಾಭರಣದೊಂದಿಗೆ ಹೊರಟಿದ್ದಾನೆ. ಕೊನೆಗಳಿಗೆಯಲ್ಲಿ ಪೆನಾಗೊಂಡ ಬದಲು ಪಾವಗಡಕ್ಕೆ ಮೀಟಿಂಗ್ ಜಾಗ ಫಿಕ್ಸ್ ಆಗಿತ್ತು. ಪಾವಗಡಕ್ಕೆ ಚಿನ್ನಾಭರಣ ಹಾಕಿಕೊಂಡು ಬಂದ ಶಿವ ಮೌನಿಕಳನ್ನು ಭೇಟಿಯಾಗಿದ್ದ. ಆ ಬಳಿಕ ಇಬ್ಬರು ಪಾವಗಡದಲ್ಲಿ ಸುತ್ತಾಡುವಾಗ ಕಾರ್​ನಲ್ಲಿ ಬಂದ ಆರೋಪಿಗಳು ಕಿಡ್ನಾಪ್ ಮಾಡಿದ್ದಾರೆ.

ಬಳಿಕ ಪಾವಗಡದ ಮನೆಯೊಂದರಲ್ಲಿ ಕೂಡಿ ಹಾಕಿ ಶಿವನ ಮೇಲೆ ಮನಸೋಯಿಚ್ಛೆ ಹಲ್ಲೆ ಮಾಡಿದ್ದಾರೆ. ಆತನ ಬಳಿ ಇದ್ದ 4.20 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದಾರೆ. ಇಷ್ಟೆಲ್ಲ ನಡೀತಿದ್ರು ತನಗೆ ಸಂಬಂಧವೇ ಇಲ್ಲದಂತೆ ಮೌನಿಕ ನಡೆದುಕೊಂಡಿದ್ದಳು. ಮೌನಿಕಳನ್ನು ಆ ಮನೆಯಿಂದ ಆರೋಪಿಗಳು ಕಳುಹಿಸಿಕೊಟ್ಟಿದ್ದರು. ಇದಾದ ಬಳಿಕ ಆರೋಪಿಗಳು ಶಿವನಿಗೆ ಮತ್ತೆ 10 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಕೊನೆಗೆ 5 ಲಕ್ಷ ನೀಡಲು ಒಪ್ಪಿದ ಶಿವ,  ಸ್ನೇಹಿತರಿಂದ ಅಕೌಂಟ್​ಗೆ ಹಣ ಹಾಕಿಸಿಕೊಂಡಿದ್ದಾನೆ.

ಆದ್ರೆ ಆತನ ಬಳಿ ಎಟಿಎಂ ಕಾರ್ಡ್ ಇಲ್ಲದಿದ್ದರಿಂದ ಕಾರ್ಡ್ ಕೊರಿಯರ್ ಮಾಡಿಸಿಕೊಂಡಿದ್ದ. ಬೆಂಗಳೂರಿನ ಮೆಸೆಸ್ಟಿಕ್ ಅಡ್ರೆಸ್​ಗೆ 4 ರಿಂದ 5 ಎಟಿಎಂ ಕಾರ್ಡ್​ಗಳನ್ನ ಆರೋಪಿಗಳು ಕೊರಿಯರ್ ಮಾಡಿಸಿಕೊಂಡಿದ್ದರು. ಎ1 ಆರೋಪಿ ಹರೀಶ್​ಗೆ ಬೆಂಗಳೂರು ಪರಿಚಯ ಇದ್ದಿದ್ದರಿಂದ ಸಿಕ್ಕಿ ಬೀಳುವುದಿಲ್ಲ ಎಂಬ ವಿಶ್ವಾಸದಲ್ಲಿದ್ದ. ಬಳಿಕ ನವೆಂಬರ್ 21ರ ಸಂಜೆ 5 ಗಂಟೆ ಸುಮಾರಿಗೆ ಇಬ್ಬರು ಆರೋಪಿಗಳು ಮತ್ತು ಶಿವ ಕೋರಮಂಗಲದ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದರು. ಆದರೆ ಈ ವೇಳೆ ಇಬ್ಬರು ಆರೋಪಿಗಳ ಮಧ್ಯೆ ಹಣದ ವಿಚಾರಕ್ಕೆ ಜಗಳ ಆಗಿದೆ. ಇದೇ ಸಮಯವನ್ನು ಉಪಯೋಗಿಸಿಕೊಂಡ ಶಿವ, ಜೋರಾಗಿ ಕಿರುಚಿಕೊಂಡು ಸ್ಥಳದಲ್ಲಿದ್ದ ಜನರನ್ನು ಸೇರಿಸಿದ್ದಾನೆ.

ಇದೇ ಸಮಯದಲ್ಲಿ ಸಮೀಪದಲ್ಲಿಯೇ ಡ್ಯೂಟಿಯಲ್ಲಿದ್ದ PSI ಮಾದೇಶ್ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ ಶಿವನ ಮಾತು ಕೇಳಿ ಅನುಮಾನ ಬಂದು ಮೂವರನ್ನು ಸ್ಟೇಷನ್​ಗೆ ಕರೆತಂದಿದ್ದಾರೆ. ಆರೋಪಿಗಳು ಮತ್ತು ಶಿವನನ್ನು ವಿಚಾರಿಸಿದಾಗ ಕಿಡ್ನಾಪ್ ಮತ್ತು ಸುಲಿಗೆಯ ಕಥೆ ಬಯಲಿಗೆ ಬಂದಿದೆ. ಈ ವಿಚಾರ ಕೇಳಿ ತಕ್ಷಣ FIR ದಾಖಲಿಸಿ ತನಿಖೆಗೆ ಸೂಚಿಸಿದ್ದ ಡಿಸಿಪಿ ಸಾರಾ ಫಾತೀಮಾ, ಶಿವನಿಂದ ದೂರು ಪಡೆದು ಪಾವಗಡದಲ್ಲಿದ್ದ ಮೌನಿಕ‌ ಸೇರಿದಂತೆ ಇನ್ನಿತರ ಆರೋಪಿಗಳನ್ನ ಕರೆತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಮೌನಿಕ ಮತ್ತು ಆರೋಪಿಗಳು ಎಲ್ಲಾ ಕಥೆ ಬಿಚ್ಚಿಟ್ಟಿದ್ದಾರೆ. ಸದ್ಯ 7 ಜನರನ್ನ ಬಂಧಿಸಿ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

ಆರೋಪಿಗಳಲ್ಲಿ ಒಬ್ಬನಾದ ಅಂಜನೀಲ್ ಆಂಧ್ರದಲ್ಲಿ ತನ್ನದೇ ಆದ ಟಾಪ್-9 ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ. ಇದೇ ಸಂಸ್ಥೆಯಲ್ಲಿ ಮೌನಿಕ ಕೂಡ ಕೆಲಸ ಮಾಡ್ತಿದ್ಲು, ಇಬ್ಬರಿಗೂ ಗೆಳೆತನ ಇತ್ತು. ಈ ವೇಳೆ ಮೌನಿಕಗೆ ಹಣದ ಅವಶ್ಯಕತೆ ಇದ್ದಿದ್ದರಿಂದ ಅಂಜನೀಲ್ ಬಳಿ ಹೇಳಿಕೊಂಡಿದ್ದಳು. ಜೊತೆಗೆ ಶಿವನ ಬಗ್ಗೆಯೂ ಹೇಳಿದ್ದಳು. ಇದನ್ನು ಅರಿತ ಅಂಜನೀಲ್ ತನ್ನ ಸ್ನೇಹಿತ ಹರೀಶ್ ಜೊತೆ ಸೇರಿ ಈ ಹನಿಟ್ರ್ಯಾಪ್​ಗೆ ಪ್ಲ್ಯಾನ್ ಮಾಡಿದ್ದ. ಈ ಮೊದಲೇ ಹರೀಶ್ ಕ್ರಿಮಿನಲ್ ಬ್ಯಾಕ್​ಗ್ರೌಂಡ್ ಇರೋ ವ್ಯಕ್ತಿಯಾಗಿದ್ದ. ಹೀಗಾಗಿಯೇ ತನ್ನ ಸ್ನೇಹಿತರ ಜೊತೆ ಸೇರಿ ಮೌನಿಕಗಳನ್ನು ಮುಂದೆ ಬಿಟ್ಟು ಶಿವನನ್ನು ಕಿಡ್ನಾಪ್ ಮಾಡುವ ಪ್ಲ್ಯಾನ್ ಮಾಡಿದ್ದ. ಆದರೆ ಎಲ್ಲಾ ಅಂದುಕೊಂಡಂತೆ ನಡೆದು ಹಣ ಕೈಗೆ ಬರೋ ವೇಳೆ ಕೈಕೊಟ್ಟ ನಸೀಬು ಇವರೆಲ್ಲರನ್ನೂ ಕಂಬಿ ಹಿಂದೆ ಹೋಗುವಂತೆ ಮಾಡಿದೆ.

ಸದ್ಯ 7 ಜನರನ್ನ ಬಂಧಿಸಿ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳ‌ ಜೊತೆಗೆ ಕೃತ್ಯಕ್ಕೆ ಬಳಸಿದ್ದ ಎರಡು ಕಾರ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬೇರೆಯವರಿಗೂ ಇದೇ ರೀತಿ ಮಾಡಿದ್ದಾರಾ ಎಂದು ತನಿಖೆ ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ : ಈ ವಾರದ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಉಗ್ರಂ ಮಂಜು..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here