ಬಿಗ್ಬಾಸ್ ಮನೆಯಲ್ಲಿ ಇವತ್ತು ಕಿಚ್ಚನ ಪಂಚಾಯ್ತಿ ನಡೆಯಲಿದೆ. ತಪ್ಪು ಮಾಡಿದ ಯಾವೆಲ್ಲ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಲು ಬಿಗ್ಬಾಸ್ ವೀಕ್ಷಕರು ಕಾದು ಕುಳಿತಿದ್ದಾರೆ. ಇದರ ನಡುವೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ರಜತ್‌ಗೆ ಕಿಚ್ಚ ಸುದೀಪ್ ಖಡಕ್ ವಾರ್ನ್ ಮಾಡಿದ ಪ್ರೋಮೋವನ್ನು ಕಲರ್ಸ್ ಕನ್ನಡ ರಿಲೀಸ್ ಮಾಡಿದೆ.
ಹೌದು, ಬಿಗ್ಬಾಸ್ ಮನೆಗೆ ಹನುಮಂತನ ಬಳಿಕ ಶೋಭಾ ಶೆಟ್ಟಿ ಹಾಗೂ ರಜತ್ ಎಂಟ್ರಿ ಕೊಟ್ಟಿದ್ದರು. ಬಿಗ್ಬಾಸ್ ಮನೆಗೆ ಬಂದ ದಿನದಲ್ಲೇ ವಿಶೇಷ ಅಧಿಕಾರವನ್ನು ಪಡೆದುಕೊಂಡಿದ್ದರು. ಇದಾದ ಬಳಿಕ ಶೋಭಾ ಶೆಟ್ಟಿ ಅದ್ಭುತವಾಗಿ ಟಾಸ್ಕ್ ಆಡುವ ಮೂಲಕ ಕಮಾಲ್ ಮಾಡಿದ್ದರು. ಆದರೆ ರಜತ್ ಟಾಸ್ಕ್ ಸಂದರ್ಭದಲ್ಲಿ ಗೋಲ್ಡ್ ಸುರೇಶ್ ಅವರಿಗೆ ಕೆಟ್ಟ ಪದಗಳಿಂದ ಬೈದಿದ್ದರು.
ಎಷ್ಟರ ಮಟ್ಟಿಗೆ ಅಂದರೆ ಗೋಲ್ಡ್ ಸುರೇಶ್ ಅವರು ಮನೆಯಿಂದ ಆಚೆ ಹೋಗಬೇಕು ಎಂದು ನಿರ್ಧಾರ ಮಾಡಿದ್ದರು. ಇದೀಗ ಕಿಚ್ಚನ ಮುಂದೆ ಈ ಬಗ್ಗೆ ಪ್ರಸ್ತಾವನೆ ಆಗಿದೆ. ಕಿಚ್ಚ ಅವರು ರಜತ್‌ಗೆ ಕನ್ನಡದಲ್ಲಿ ತುಂಬಾ ಪದಗಳಿವೆ. ಆದರೆ ಕೆಲವೊಂದಕ್ಕೆ ಅದರದ್ದೇ ಆದ ತೂಕಗಳಿವೆ. ನನಗೆ ಕೋಪ ಬಂದಾಗ ಇಂತಹದ್ದೆ ಬಾಯಲ್ಲಿ ಬರೋದು ಅಂತೀರಾ. ಇದೀಗ ಆ ಮಾತುಗಳನ್ನೆಲ್ಲ ನನ್ನ ಮುಂದೆ ವಾಪಸ್ಸು ರಿಪೀಟ್ ಮಾಡಿ ಅಂತ ಕೇಳಿದ್ದಾರೆ.
ಆಗ ರಜತ್ ಅವರು ಇನ್ನೊಂದು ಸಲ ಆ ತಪ್ಪನ್ನು ರಿಪೀಟ್ ಮಾಡಲ್ಲ ಎಂದಿದ್ದಾರೆ. ಆಗ ಕಿಚ್ಚ ಅವರು ನಕ್ಕು, ಮುಂದೆ ತಪ್ಪು ಆದರೆ ಮನೆಯಲ್ಲಿ ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ ಎಂದು ಹೇಳಿದ್ದಾರೆ. ಈ ಮೂಲಕ ಕಡೆಯದಾಗಿ ರಜತ್‌ಗೆ ಕಿಚ್ಚ ಸುದೀಪ್ ವಾರ್ನಿಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ : ‘ಹೊಂಬಾಳೆ ಫಿಲ್ಮ್ಸ್’ ಮೂಲಕ ಕರ್ನಾಟಕದಲ್ಲಿ ಜೋಜು ಜಾರ್ಜ್ ಅಭಿನಯದ ಮಲಯಾಳಂ ಚಿತ್ರ ‘ಪಣಿ’ ರಿಲೀಸ್..!