ಕನ್ನಡ ಕಿರುತೆರೆಯಲ್ಲಿ ಸಾಲು ಸಾಲು ರಿಯಾಲಿಟಿ ಶೋಗಳು ಹಾಗೂ ಹೊಚ್ಚ ಹೊಸ ಧಾರಾವಾಹಿಗಳನ್ನು ತನ್ನ ವೀಕ್ಷಕರಿಗೆ ಉಣ ಬಡಿಸುವ ಮೂಲಕ ಝೀ ಕನ್ನಡ ಸದ್ಯ ನಂಬರ್ ಒನ್ ಸ್ಥಾನದಲ್ಲಿದೆ. ನಾಡಿನ ಜನರ ಮನ ಗೆದ್ದಿರುವ ಝೀ ಕನ್ನಡ ಇತ್ತೀಚೆಗೆ ಹೊಸ ರಿಯಾಲಿಟಿ ಶೋ ಪ್ರೋಮೋ ಒಂದನ್ನು ರಿಲೀಸ್ ಮಾಡಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದು, ಇದು ನಿಜಾನ ಎಂದು ಪ್ರಶ್ನೆ ಮಾಡಿದ್ದಾರೆ.
ಇತ್ತೀಚಿಗಷ್ಟೇ ಝೀ ಕನ್ನಡ ಹೊಸ ಪ್ರೋಮೋವೊಂದರ ಝಲಕ್ ಅನ್ನು ರೀವಿಲ್ ಮಾಡಿದೆ. ಈ ಹೊಸ ರಿಯಾಲಿಟಿ ಶೋನಲ್ಲಿ ಚಂದನವನದ ಘಟಾನುಘಟಿಗಳನ್ನು ಕೆರೆತರಲು ಸಜ್ಜಾಗಿದೆ. ಒಬ್ಬರಲ್ಲ ಇಬ್ಬರಲ್ಲ ಸ್ಯಾಂಡಲ್ ವುಡ್ನ ಮೂವರು ಸೂಪರ್ ಸ್ಟಾರ್‌ಗಳನ್ನು ಒಂದೇ ಶೋ ಅಲ್ಲಿ ತೋರಿಸಲು ಝೀ ಸಿದ್ದವಾಗಿದೆ.
ಹೌದು, ಆ ಮೂವರು ಸ್ಟಾರ್‌ಗಳು ಬೇರಾರು ಅಲ್ಲ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಅವರು ಈ ಹೊಸ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಹೊಸ ರಿಯಾಲಿಟಿ ಶೋನಾ ಪ್ರೋಮೋದ ಝಲಕ್ ಹೊರಬೀಳುತ್ತಿದ್ದಂತೆ, ಅವರ ಅಭಿಮಾನಿಗಳಿಗೆ ಅಚ್ಚರಿಯ ಜೊತೆಗೆ ನಿರೀಕ್ಷೆಯೂ ಮುಗಿಲು ಮುಟ್ಟಿದೆ. ಏಕೆಂದರೆ, ಈ ವರೆಗೂ ಇಂಥ ಒಂದು ಪ್ರಯತ್ನ ಕನ್ನಡ ಕಿರುತೆರೆಯಲ್ಲಿ ಇಲ್ಲಿಯ ವರೆಗೆ ನಡೆದಿಲ್ಲ.
ಆದರೆ ಈ ಪ್ರೋಮೋವನ್ನು ನೋಡಿದ ನೆಟ್ಟಿಗರು ಮಾತ್ರ ಇದನ್ನು ನಿಜ ಎಂದು ನಂಬುತ್ತಿಲ್ಲ. ಇನ್ನೇನು ಏಪ್ರಿಲ್ ಬಂದೇ ಬಿಡ್ತು. ಹಾಗಾಗಿ ತನ್ನ ವೀಕ್ಷಕರಿಗೆ ಪೂಲ್ ಮಾಡುವ ಉದ್ದೇಶದಿಂದಲೂ ಈ ಶೋನ ಕಿರು ಝಲಕ್ ಅನ್ನು ಝೀ ಕನ್ನಡ ರಿಲೀಸ್ ಮಾಡಿರಬಹುದು ಎಂದೂ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. “ಇದು ಅಸಾಧ್ಯ, ಆದರೆ ಇದನ್ನು ನಿಜವಾಗಿಸಿದರೆ, ಆ ಶ್ರೇಯಸ್ಸು ಝೀ ಕನ್ನಡಕ್ಕೆ ಸಲ್ಲಲಿದೆ ಎಂದು ಇನ್ನು ಕೆಲವರು ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಹಾಗೂ ಈ ಮೂಲಕ ದರ್ಶನ್ – ಸುದೀಪ್ ಒಂದಾಗ್ತಾರ..? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದೆ.
ಇನ್ನು ಪ್ರೋಮೋದ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿರುವ ಝೀ ಕನ್ನಡ ಅದೆಷ್ಟೋ ಅಭಿಮಾನಿಗಳ ಕನಸನ್ನು ನನಸು ಮಾಡುತ್ತದೆ ಎಂದು ಕಾದು ನೋಡಬೇಕಾಗಿದೆ. ಇದರೊಂದಿಗೆ ಏನಿದು ಶೋ? ಹೇಗಿರಲಿದೆ? ಎಂಬಿತ್ಯಾದಿ ಮಾಹಿತಿ ಇನ್ನಷ್ಟೇ ರಿವೀಲ್ ಆಗಬೇಕಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಬಿಲ್ಡರ್ಗಳು, ಉದ್ಯಮಿಗಳಿಗೆ IT ಬಿಗ್ ಶಾಕ್- 20ಕ್ಕೂ ಹೆಚ್ಚು ಕಡೆ ದಾಳಿ..!