ಬೆಂಗಳೂರು : ಬೆಂಗಳೂರಿನ ಕುಂದನಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿರೋದು ಯಾವುದೇ ಸಿಲಿಂಡರ್ ಸ್ಫೋಟವಲ್ಲ. ಇದೊಂದು ಬಾಂಬ್ ಸ್ಪೋಟದ ಘಟನೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ರಾಮೇಶ್ವರಂ ಕೆಫೆ ಸ್ಫೋಟದ ಬಗ್ಗೆ ಸೋಷಿಯಲ್ ಮೀಡಿಯಾ Xನಲ್ಲಿ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ ಅವರು, ರಾಮೇಶ್ವರಂ ಕೆಫೆ ಮಾಲೀಕರಜೊತೆಗೆ ಘಟನೆಯ ಬಗ್ಗೆ ಮಾತನಾಡಿದೆ. ಗ್ರಾಹಕರೊಬ್ಬರು ಬಿಟ್ಟು ಹೋದ ಬ್ಯಾಗ್‌ನಿಂದ ಸ್ಫೋಟವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕೆಫೆಯಲ್ಲಿ ಯಾವುದೇ ಸಿಲಿಂಡರ್ ಸ್ಫೋಟವಾಗಿಲ್ಲ. ಘಟನೆಯಲ್ಲಿ ರಾಮೇಶ್ವರಂ ಕೆಫೆಯ ಸಿಬ್ಬಂದಿ ಗಾಯಗೊಂಡಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿರೋದು ಬಾಂಬ್ ಸ್ಫೋಟ ಅನ್ನೋದು ಮೇಲ್ನೋಟಕ್ಕೆ ಸಾಬೀತಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿಗರಿಗೆ ಉತ್ತರ ಕೊಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ರಾಮೇಶ್ವರಂ ಕೆಫೆ ಸ್ಫೋಟದಲ್ಲಿ IED ಬಳಸಿರುವ ಶಂಕೆ?
Post Views: 59