ಕಳೆದ ಕೆಲ ದಿನಗಳಿಂದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಾಲ್ ಮಂಥೆರೊ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಭಾರೀ ಚರ್ಚೆಯಾಗುತ್ತಿದೆ. ಇದು ವದಂತಿ ಅಷ್ಟೇ’’ ಅಂತ ಹೇಳಿ ಮೊನ್ನೆಯಷ್ಟೇ ಸೋನಾಲ್ ಮಂಥೆರೊ ನಾಚಿ ನೀರಾಗಿದ್ದರು. ಇದೀಗ ಇದೇ ಗುಸುಗುಸು ಬಗ್ಗೆ ತರುಣ್ ಸುಧೀರ್ ತಾಯಿ ಮಾಲತಿ ಸುಧೀರ್ ರಿಯಾಕ್ಟ್ ಮಾಡಿದ್ದಾರೆ.
ಹೌದು, ಮಗನ ಮದುವೆ ಸುದ್ದಿಯ ಬಗ್ಗೆ ಬಿಟಿವಿಗೆ ಮಾಹಿತಿ ನೀಡಿರುವ ಮಾಲತಿ ಸುಧೀರ್ ಅವರು, ಸೋನಲ್ ಮತ್ತು ತರುಣ್ ಮದುವೆ ವಿಚಾರ ಇನ್ನು ಚರ್ಚೆ ಆಗ್ಬೇಕಿದೆ. ಇನ್ನೂ ಸೋನಲ್ ಕುಟುಂಬದವರು ದುಬೈನಲ್ಲಿದ್ದಾರೆ. ಅವರೆಲ್ಲ ಬಂದ್ಮೇಲೆ ಮಾತುಕತೆ ಆಗ್ಬೇಕು ಎಂದು ತಿಳಿಸಿದ್ದಾರೆ.
ತರುಣ್ ಸುಧೀರ್ ಮತ್ತು ಸೋನಾಲ್ ಮಂಥೆರೊ ಆಗಸ್ಟ್ ತಿಂಗಳಲ್ಲಿ ಮದುವೆಯಾಗಲಿದ್ದಾರೆ ಎಂಬ ವಿಚಾರ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ಬಗ್ಗೆ ಕ್ಲ್ಯಾರಿಟಿ ನೀಡಿರುವ ಅವರು, ಆಗಸ್ಟ್ನಲ್ಲಿ ಮದುವೆ ಅನ್ನೋದು ಸುಳ್ಳು. ಡೇಟ್ ಇನ್ನೂ ಫಿಕ್ಸ್ ಆಗಿಲ್ಲ. ಈಗ ಆಷಾಢ ಸಮಯ. ಈ ಸಂದರ್ಭದಲ್ಲಿ ಮದುವೆ ಮಾತುಕತೆ ನಡೆಸಲು ಸಾಧ್ಯವಿಲ್ಲ. ಆಷಾಢ ಮಾಸ ಮುಗಿದ ಬಳಿಕ ಮಾತನಾಡಬೇಕು ಎಂದಿದ್ದಾರೆ.
ಇನ್ನು ತರುಣ್ ಸುಧೀರ್ ತಾಯಿ ಮಾಲತಿ ಸುಧೀರ್ ಅವರು ಮಗ ಮದ್ವೆ ಆಗ್ತಿದ್ದಾನೆ ಅನ್ನೋ ಖುಷಿಯಲ್ಲಿದ್ದಾರೆ. ಆದಷ್ಟು ಬೇಗ ಮಗನ ಮದ್ವೆ ಆಗ್ಬೇಕು ಅಂತ ಆಸೆ ಪಡುತ್ತಿದ್ದಾರೆ. ಸದ್ಯದ ಸುದ್ದಿಯ ಬಗ್ಗೆ ತಿಳಿದುಕೊಂಡಿರೋ ಮಾಲತಿ ಅವರು, ಮಗ ಮದ್ವೆ ಆಗ್ತಿದ್ದಾನೆ ಅನ್ನೋದೇ ಖುಷಿ ಅಂತ ಹೇಳಿಕೊಳ್ತಿದ್ದಾರೆ. ಈ ಮೂಲಕ ಸೋನಾಲ್ ಮಂಥೆರೋ ಅವರನ್ನು ತರುಣ್ ಸುಧೀರ್ ವಿವಾಹವಾಗುವ ವದಂತಿಗೆ ಒಂದಿಷ್ಟು ಸ್ಪಷ್ಟನೆಯೂ ದೊರಕಿದೆ.
ಇದನ್ನೂ ಓದಿ : ಸಿನಿಪ್ರಿಯರ ಗಮನ ಸೆಳೆಯುತ್ತಿದೆ ‘ಫ್ಯಾಮಿಲಿ ಡ್ರಾಮ’ ಚಿತ್ರದ ಸಾಂಗ್..!