Download Our App

Follow us

Home » ಸಿನಿಮಾ » ಸಿನಿಪ್ರಿಯರ ಗಮನ ಸೆಳೆಯುತ್ತಿದೆ ‘ಫ್ಯಾಮಿಲಿ ಡ್ರಾಮ’ ಚಿತ್ರದ ಸಾಂಗ್​..!

ಸಿನಿಪ್ರಿಯರ ಗಮನ ಸೆಳೆಯುತ್ತಿದೆ ‘ಫ್ಯಾಮಿಲಿ ಡ್ರಾಮ’ ಚಿತ್ರದ ಸಾಂಗ್​..!

ಕನ್ನಡ ಚಿತ್ರರಂಗದಲ್ಲಿ ಸದ್ಯ ಸದ್ದು ಮಾಡುತ್ತಿರುವ ಸಿನಿಮಾಗಳಲ್ಲಿ ‘ಫ್ಯಾಮಿಲಿ ಡ್ರಾಮ’ ಕೂಡ ಒಂದು. ಈಗಾಗಲೇ ಟ್ರೈಲರ್ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ಫ್ಯಾಮಿಲಿ ಡ್ರಾಮ ಸದ್ಯ ಇಂಟ್ರೆಸ್ಟಿಂಗ್ ಟೈಟಲ್ ಟ್ರ್ಯಾಕ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಯುವ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ ‘ಫ್ಯಾಮಿಲಿ ಡ್ರಾಮಾ’ ಹಾಡು ಕೂಡ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ. ಇತ್ತೀಚಿಗಷ್ಟೇ ರಿಲೀಸ್ ಆಗಿದ್ದ ಟ್ರೈಲರ್ ಸಖತ್ ಕ್ರಿಯೇಟಿವ್​​ ಆಗಿದ್ದು, ಇದೊಂದು ಮಾಮೂಲಿ ಸಿನಿಮಾವಲ್ಲ, ವಿನೂತನ ಮತ್ತು ವಿಭಿನ್ನವಾದ ಸಿನಿಮಾ ಎನ್ನುವುದನ್ನು ಹೇಳುತ್ತಿದೆ.

ಹೊಸ ನಿರ್ದೇಶಕ ಆಕರ್ಷ್ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಇದು ಅವರ ನಿರ್ದೇಶನದಲ್ಲಿ ಸಿದ್ಧವಾದ ಮೊದಲ ಸಿನಿಮಾ. ಈ ಚಿತ್ರದಲ್ಲಿ ಅಭಯ್, ಅನನ್ಯಾ ಅಮರ್, ಸಿಂಧು ಶ್ರೀನಿವಾಸ್ ಮೂರ್ತಿ, ರೇಖಾ, ಪೂರ್ಣಚಂದ್ರ ಮೈಸೂರು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ ಈ ಸಿನಿಮಾಗೆ ಡಬ್ಬುಗುಡಿ ಮುರಳಿಕೃಷ್ಣ ಅವರು ತಮ್ಮ DMK ಎಂಟರ್ಟೈನ್ಮೆಂಟ್ ಮೂಲಕ ಬಂಡವಾಳ ಹೂಡಿದ್ದಾರೆ.

ಸದ್ಯ ರಿಲೀಸ್ ಆಗಿರುವ ಟೈಟಲ್ ಟ್ರ್ಯಾಕ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಗಾಯಕ ವಾಸುಕಿ ವೈಭವ್ ಧ್ವನಿಯಲ್ಲಿ ಮೂಡಿ ಬಂದಿರುವ ‘ ಲಿ ಲಿ ಫ್ಯಾಮಿ ಹಾಡು…’ ಹಾಡು ಕೇಳೋಕೆ ಎಷ್ಟು ಮಜವಾಗಿದೆಯೋ ನೋಡೊಕು ಅಷ್ಟೇ ಕುತೂಹಲಕಾರಿಯಾಗಿದೆ.

ಅಂದಹಾಗೆ ಈ ಹಾಡಿಗೆ ಚೇತನ್ ಅಮ್ಮಯ್ಯ ಸಂಗೀತ ಸಂಯೋಜನೆ ಮಾಡಿದ್ದು, ಶರತ್ ವಶಿಷ್ಠ ಹಾಗೂ ಚೇತನ್ ಅಮ್ಮಯ್ಯ ಜಂಟಿಯಾಗಿ ಸಾಹಿತ್ಯ ಬರೆದಿದ್ದಾರೆ. ಈ ಹಾಡಿನಲ್ಲಿ ಪಾರ್ಟಿ ನಡೆಯುತ್ತಿದ್ದು ನಟ ಅಭಯ್, ಸಿಂಧು, ಅನಯ್ಯಾ ಎಂಡ್ ಗ್ಯಾಂಗ್ ಯಾರನ್ನೊ ಕೊಲೆ ಮಾಡಲು ಸ್ಕೆಚ್ ಹಾಕಿದ್ದಾರೆ. ಆದರೆ ಹಾಡಿನ ಕೊನೆಯಲ್ಲಿ ಅವರ ಸ್ಕೆಚ್ ಫ್ಲಾಪ್ ಆಗಿರುವ ಹಾಗೆ ಭಾಸವಾಗುತ್ತದೆ. ಆದರೆ ಮುಂದೇನಾಗುತ್ತೆ ಎನ್ನುವುದು ಸಿನಿಮಾದಲ್ಲಿಯೇ ನೋಡಬೇಕು. ಈ ಹಾಡು ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿದೆ.

ಇನ್ನೂ ನಿರ್ಮಾಪಕ ಮುರಳಿಕೃಷ್ಣ ಅವರು ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅಂದಹಾಗೆ ಮುರಳಿಕೃಷ್ಣ ಅವರು ಯುಎಸ್​​​​ನಲ್ಲಿ ನೆಲೆಸಿದ್ದಾರೆ. ವಿದೇಶದಲ್ಲಿದ್ದರೂ ತಮ್ಮ ನೆಲದ ಮೇಲಿನ ಪ್ರೀತಿ, ಸಿನಿಮಾಗಳ ಮೇಲಿನ ಆಸಕ್ತಿ ಕಳೆದುಕೊಂಡಿಲ್ಲ. ಉತ್ತಮ ಸಿನಿಮಾಗಳನ್ನು ಮಾಡಬೇಕು ಎನ್ನುವ ದೊಡ್ಡ ಕನಸು ಹೊತ್ತಿರುವ ಮುರುಳಿಯವರು ಚಿತ್ರರಂಗದ ಬಗ್ಗೆ ಒಂದಷ್ಟು ತಿಳಿದುಕೊಂಡು ‘ಫ್ಯಾಮಿಲಿ ಡ್ರಾಮ’ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಕನ್ನಡದ ‘ಫ್ಯಾಮಿಲಿ ಡ್ರಾಮ’ ಸಿನಿಮಾ ರಿಲೀಸ್​​ನ ಬ್ಯುಸಿಯ ಜೊತೆಗೆ ನಿರ್ಮಾಪಕರು ಈಗಾಗಲೇ ತೆಲುಗಿನಲ್ಲಿ ಮೂರು ಸಿನಿಮಾಗಳ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ DMK ಎಂಟರ್ಟೈನ್ಮೆಂಟ್ ನಿರ್ಮಾಣ ಸಂಸ್ಥೆ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಹಾಗೂ ದೊಡ್ಡ ಬಜೆಟ್​​​ನ ಸ್ಟಾರ್ ಸಿನಿಮಾ ನಿರ್ಮಾಣ ಮಾಡುವ ದೊಡ್ಡ ಕನಸನ್ನು ಕಂಡಿದ್ದಾರೆ. ಅವರ ಮುಂದಿನ ಎಲ್ಲಾ ಯೋಜನೆಗಳಿಗೆ ‘ಫ್ಯಾಮಿಲಿ ಡ್ರಾಮ’ ಉತ್ತಮ ವೇದಿಕೆ ಯಾಗಲಿದೆ ಎನ್ನುವ ಭರವಸೆ ಹೊಂದಿದ್ದಾರೆ.

ಇನ್ನು ಫ್ಯಾಮಿಲಿ ಡ್ರಾಮ ಉತ್ತಮ ಕಂಟೆಂಟ್ ಜೊತೆಗೆ ಟೆಕ್ನಿಕಲ್ ವಿಚಾಗಳು ಸಹ ಗಮನ ಸೆಳೆಯುತ್ತಿದೆ. ಡಾರ್ಕ್ ಕಾಮಿಡಿ ಸಿನಿಮಾ ಇದಾಗಿದ್ದು, ಮುಗ್ದ ಕುಟುಂಬವೊಂದು ಕೊಲೆ ಮಾಡಿ ಸಂಕಷ್ಚಕ್ಕೆ ಸಿಲುಕುವ ಕಥೆಯಾಗಿದೆ. ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಫ್ಯಾಮಿಲಿ ಡ್ರಾಮ ಸದ್ಯದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ.

ಇದನ್ನೂ ಓದಿ : ಬೆಂಗಳೂರು ಶೆಡ್​ನಲ್ಲಿ ಮತ್ತೊಂದು ಮರ್ಡರ್ ​​- ದರ್ಶನ್​​ ಕೇಸ್​ ಎಫೆಕ್ಟ್​​​ನಿಂದ ಕೊಲೆ ಅಡ್ಡೆಯಾಗ್ತಿವೆ ಶೆಡ್​..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here