Download Our App

Follow us

Home » ಸಿನಿಮಾ » ಕ್ರಿಶ್ಚಿಯನ್‌ ಸಂಪ್ರದಾಯದಂತೆ ಮಂಗಳೂರಿನಲ್ಲಿ ತರುಣ್-ಸೋನಲ್ ಚರ್ಚ್ ವೆಡ್ಡಿಂಗ್ – ಫೋಟೋಸ್ ಇಲ್ಲಿವೆ ನೋಡಿ..!

ಕ್ರಿಶ್ಚಿಯನ್‌ ಸಂಪ್ರದಾಯದಂತೆ ಮಂಗಳೂರಿನಲ್ಲಿ ತರುಣ್-ಸೋನಲ್ ಚರ್ಚ್ ವೆಡ್ಡಿಂಗ್ – ಫೋಟೋಸ್ ಇಲ್ಲಿವೆ ನೋಡಿ..!

ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ತರುಣ್​​ ಸುಧೀರ್​​ ಮತ್ತು ನಟಿ ಸೋನಲ್​​ ಮೊಂಥೆರೋ ಇತ್ತೀಚೆಗೆ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್​ನಲ್ಲಿ ಅದ್ದೂರಿಯಾಗಿ ನಡೆದ ಮದುವೆಗೆ ಬಂಧು ಮಿತ್ರರು, ಚಿತ್ರರಂಗದ ಅನೇಕ ನಟ- ನಟಿ, ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದರು.

ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ ಈ ಜೋಡಿ ನಿನ್ನೆ ಕ್ರೈಸ್ತ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ. ಸೋನಲ್ ಮಂಥೆರೊ ಮಂಗಳೂರಿನ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು. ಹೀಗಾಗಿ ನಿನ್ನೆ ಮಂಗಳೂರಿನ ಪ್ರಸಿದ್ಧ ಚರ್ಚ್‌ನಲ್ಲಿ ಮದುವೆ ನಡೆದಿದೆ. ಪರಸ್ಪರ ಉಂಗುರ ಬದಲಾಯಿಸಿಕೊಂಡು ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್ – ಸೋನಲ್ ಮಂಥೆರೊ ವಿವಾಹವಾಗಿದ್ದಾರೆ.

ಚರ್ಚ್ ವೆಡ್ಡಿಂಗ್‌ಗೆ ವರ ತರುಣ್ ಸುಧೀರ್‌ ಬಿಳಿ ಬಣ್ಣದ ಸೂಟ್‌ ಧರಿಸಿದ್ದರು. ಇನ್ನೂ ಕ್ರಿಶ್ಚಿಯನ್ ಬ್ರೈಡ್‌ ಸೋನಲ್ ಮಂಥೆರೊ ಬಿಳಿ ಬಣ್ಣದ ಗೌನ್‌ನಲ್ಲಿ ಮಿಂಚುತ್ತಿದ್ದರು. ಮಂಗಳೂರಿನ ಚರ್ಚ್‌ನಲ್ಲಿ ಮಿಸ್ಟರ್ & ಮಿಸಸ್ ತರುಣ್ ಸುಧೀರ್ ಪ್ರಾರ್ಥನೆ ಸಲ್ಲಿಸಿದರು.

ಕ್ರಿಶ್ಚಿಯನ್ ವೆಡ್ಡಿಂಗ್ ಬಳಿಕ ತರುಣ್ ಸುಧೀರ್ – ಸೋನಲ್ ಮಂಥೆರೊ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದರು. ಸೋನಲ್ ಮಂಥೆರೊ – ತರುಣ್ ಸುಧೀರ್ ವಿವಾಹಕ್ಕೆ ಕುಟುಂಬಸ್ಥರು, ಆಪ್ತರು ಸಾಕ್ಷಿಯಾಗಿದ್ದರು. ಚರ್ಚ್ ವೆಡ್ಡಿಂಗ್ ಬಳಿಕ ಮಂಗಳೂರಿನಲ್ಲಿ ವೆಡ್ಡಿಂಗ್ ಪಾರ್ಟಿ ಹಾಗೂ ರಿಸೆಪ್ಷನ್ ಕೂಡ ನಡೆದಿದೆ.

ಇದನ್ನೂ ಓದಿ : ವಾಲ್ಮೀಕಿ ಹಗರಣ – ಇಂದು ಮಾಜಿ ಸಚಿವ ಬಿ.ನಾಗೇಂದ್ರ ಅರ್ಜಿ ವಿಚಾರಣೆ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here