ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಇತ್ತೀಚೆಗೆ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್ನಲ್ಲಿ ಅದ್ದೂರಿಯಾಗಿ ನಡೆದ ಮದುವೆಗೆ ಬಂಧು ಮಿತ್ರರು, ಚಿತ್ರರಂಗದ ಅನೇಕ ನಟ- ನಟಿ, ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದರು.
ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ ಈ ಜೋಡಿ ನಿನ್ನೆ ಕ್ರೈಸ್ತ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ. ಸೋನಲ್ ಮಂಥೆರೊ ಮಂಗಳೂರಿನ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು. ಹೀಗಾಗಿ ನಿನ್ನೆ ಮಂಗಳೂರಿನ ಪ್ರಸಿದ್ಧ ಚರ್ಚ್‌ನಲ್ಲಿ ಮದುವೆ ನಡೆದಿದೆ. ಪರಸ್ಪರ ಉಂಗುರ ಬದಲಾಯಿಸಿಕೊಂಡು ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್ – ಸೋನಲ್ ಮಂಥೆರೊ ವಿವಾಹವಾಗಿದ್ದಾರೆ.
ಚರ್ಚ್ ವೆಡ್ಡಿಂಗ್‌ಗೆ ವರ ತರುಣ್ ಸುಧೀರ್ ಬಿಳಿ ಬಣ್ಣದ ಸೂಟ್ ಧರಿಸಿದ್ದರು. ಇನ್ನೂ ಕ್ರಿಶ್ಚಿಯನ್ ಬ್ರೈಡ್ ಸೋನಲ್ ಮಂಥೆರೊ ಬಿಳಿ ಬಣ್ಣದ ಗೌನ್‌ನಲ್ಲಿ ಮಿಂಚುತ್ತಿದ್ದರು. ಮಂಗಳೂರಿನ ಚರ್ಚ್‌ನಲ್ಲಿ ಮಿಸ್ಟರ್ & ಮಿಸಸ್ ತರುಣ್ ಸುಧೀರ್ ಪ್ರಾರ್ಥನೆ ಸಲ್ಲಿಸಿದರು.
ಕ್ರಿಶ್ಚಿಯನ್ ವೆಡ್ಡಿಂಗ್ ಬಳಿಕ ತರುಣ್ ಸುಧೀರ್ – ಸೋನಲ್ ಮಂಥೆರೊ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದರು. ಸೋನಲ್ ಮಂಥೆರೊ – ತರುಣ್ ಸುಧೀರ್ ವಿವಾಹಕ್ಕೆ ಕುಟುಂಬಸ್ಥರು, ಆಪ್ತರು ಸಾಕ್ಷಿಯಾಗಿದ್ದರು. ಚರ್ಚ್ ವೆಡ್ಡಿಂಗ್ ಬಳಿಕ ಮಂಗಳೂರಿನಲ್ಲಿ ವೆಡ್ಡಿಂಗ್ ಪಾರ್ಟಿ ಹಾಗೂ ರಿಸೆಪ್ಷನ್ ಕೂಡ ನಡೆದಿದೆ.
ಇದನ್ನೂ ಓದಿ : ವಾಲ್ಮೀಕಿ ಹಗರಣ – ಇಂದು ಮಾಜಿ ಸಚಿವ ಬಿ.ನಾಗೇಂದ್ರ ಅರ್ಜಿ ವಿಚಾರಣೆ..!