Download Our App

Follow us

Home » ಸಿನಿಮಾ » ಯೂಟ್ಯೂಬರ್​ ಕೇಳಿದ ಪ್ರಶ್ನೆಗೆ ಮುಜುಗರಕ್ಕೊಳಗಾಗಿದ್ದ ಘಟನೆ ನೆನೆದ ತನಿಷಾ ಕುಪ್ಪಂಡ..!

ಯೂಟ್ಯೂಬರ್​ ಕೇಳಿದ ಪ್ರಶ್ನೆಗೆ ಮುಜುಗರಕ್ಕೊಳಗಾಗಿದ್ದ ಘಟನೆ ನೆನೆದ ತನಿಷಾ ಕುಪ್ಪಂಡ..!

ಬಿಗ್ ಬಾಸ್ ಕನ್ನಡ ಸೀಸನ್ ’10’ ಶೋ ಸ್ಪರ್ಧಿ ಇಶಾನಿ ಅಭಿನಯದ “ಅಸಲಿ ಬಣ್ಣ” ಆಲ್ಬಂ ಸಾಂಗ್ ಅವರ ಹುಟ್ಟುಹಬ್ಬದಂದೇ ಅವರ ಯೂಟ್ಯೂಬ್ ಚಾನೆಲ್​ನಲ್ಲಿ ರಿಲೀಸ್​ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಇವರ ಪೋಸ್ಟ್​​ಗಳಿಗೆ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ‌. ಅಂಥವರಿಗೆ ಅಸಲಿ ಬಣ್ಣ ಎಂಬ ಹಿಪಪ್ ಸಾಂಗ್​​ ಅನ್ನು ಇಶಾನಿ ಡೆಡಿಕೆಟ್​​ ಮಾಡಿದ್ದಾರೆ. 

ಈಶಾನಿ ಅವರೇ ಹಾಡಿ ಅಭಿನಯಿಸಿರುವ ‘ಅಸಲಿ ಬಣ್ಣ’ ಆಲ್ಬಂ ಸಾಂಗ್ ರಿಲೀಸ್​​ಗೆ​​ ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಸ್ಪರ್ಧಿಗಳು ಹಾಗೂ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು. ಈ ವೇಳೆ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಕೂಡ ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

ಸಾಂಗ್​​ ಸಿಕ್ಕಾಪಟ್ಟೆ ಚೆನ್ನಾಗಿದೆ ಎಂದು ಮಾತು ಆರಂಭಿಸಿದ ತನಿಷಾ ಕುಪ್ಪಂಡ ಅವರು, ಯಾರು ಇದನ್ನು ಎಕ್ಸ್​​ಪಿರಿಯನ್ಸ್​​ ​​ಮಾಡಿರಲ್ವೋ ಅವರಿಗೆ ಈ ಸಾಂಗ್​​ ಅರ್ಥ ಆಗೋಕೆ ಟೈಮ್​​ ಹಿಡಿಬಹುದು ಅಂತ ನನಗೆ ಅನ್ನಿಸುತ್ತೆ.

ಇನ್ನು ಇದೇ ಥಿಯೇಟರ್​​ನಲ್ಲಿ ಯೂಟ್ಯೂಬರ್​​ ಒಬ್ಬ ತನಗೆ ಇಷ್ಟ ಬಂದಹಾಗೆ ಮಾತನಾಡಿದ್ರೂ. ಅದು ಪೊಲೀಸ್​​ ಕಾಂಪ್ಲೇಟ್​​ ಕೂಡ ಆಯಿತು. ನಮ್ಮ ಅನುಭವನ್ನು ಒಂದು ಸಾಂಗ್​​ ಮೂಲಕ ಹೊರ ಹಾಕ್ಬೇದು ಅಂತ ಇಶಾನಿಯವರು ತೋರಿಸಿ ಕೊಟ್ಟಿದ್ದಾರೆ.

ಇನ್ನು ನಮ್ಗೆ ಬರುವಂತಹಾ ಕೆಟ್ಟ ಕಾಮೆಂಟ್ಸ್​​ಗೆ ಈ ರೀತಿ ತಿರುಗೇಟು ಕೊಡಬಹುದು ಅಂತಾ ಇಶಾನಿ ಅವರು ಹಾಗೂ ತಂಡದವರು ತೋರಿಸಿಕೊಂಡಿದ್ದಾರೆ. ನನಗೆ ತುಂಬಾ ಖುಷಿಯಾಗಿದೆ ಯಾಕಂದ್ರೆ ನಾನು ಇದನ್ನೆಲ್ಲ ಫೆಸ್​​​​ ಮಾಡಿರುವುದರಿಂದ ನನಗೆ ಈ ಸಾಂಗ್​​ ತುಂಬಾ ಇಷ್ಟ ಆಯಿತು. ಇದೇ ರೀತಿ ಇನ್ನಷ್ಟು ಒಳ್ಳೆಳ್ಳೆ ಮಾಹಿತಿ ಕೊಡುವಂತಹ ಕಾಂಟೆಟ್​ಗಳನ್ನು ಕ್ರಿಯೇಟ್​​ ಮಾಡಿ ಎಂದು ಹಾರೈಸಿದ್ದಾರೆ.

ಇನ್ನು ನನಗೆ ಕೂಡ ಆಲ್ಬಂ ಸಾಂಗ್ ಮಾಡುವ ಕನಸು ಇದೇ ಎಂದ ತನಿಷಾ ಕುಪ್ಪಂಡ ಅವರು, ನನಗೆ ಸ್ಕೂಲ್​​ ಡೇಸ್​​ನಿಂದಲೂ ಆಲ್ಬಂ ಸಾಂಗ್ ಮಾಡ್ಬೇಕು ಅಂತಾ ಕನಸು ಇದೆ. ಆದ್ರೆ ಇತ್ತೀಚಿಗೆ ಕೆಲ ಸಿನಿಮಾಗಳಲ್ಲಿ ಬ್ಯೂಸಿ ಇರೊಂದ್ರಿಂದ ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : ನಾಗಮಂಗಲ ಗಲಭೆ ಕೇಸ್ ​​- ಬಂಧನ ಭೀತಿಗೆ ಹೆದರಿ ಊರು ಬಿಟ್ಟ ಯುವಕರು..!

 

 

ಇದನ್ನೂ ಓದಿ : ಬ್ಯಾಡ್ ಕಾಮೆಂಟ್ ಮಾಡೋರ ‘ಅಸಲಿ ಬಣ್ಣ’ ಕಳಚಿದ ಬಿಗ್ ಬಾಸ್ ಖ್ಯಾತಿಯ ಇಶಾನಿ..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here