ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಮಾದರಿಯಲ್ಲಿ ಸ್ಯಾಂಡಲ್ವುಡ್ನಲ್ಲೂ ನಟಿಯರ ರಕ್ಷಣೆಗೆ ಸಮಿತಿ ಬೇಕು ಎನ್ನುವು ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಕಮಿಟಿ ರಚಿಸುವ ಬಗ್ಗೆ ಸೆ.16ರಂದು ಸಭೆ ಕೂಡ ನಡೆಯಿತು. ಕನ್ನಡ ಚಿತ್ರರಂಗದಲ್ಲೂ ನಟಿಯರ ರಕ್ಷಣೆಗೆ ಸಮಿತಿ ರಚನೆ ಆಗ್ಬೇಕು ಎಂದು ಅನೇಕರು ಪಟ್ಟು ಹಿಡಿದಿದ್ದಾರೆ. ಈ ವಿಚಾರವಾಗಿ ನಟಿ ಚೈತ್ರಾ ಜೆ. ಆಚಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ಇಲ್ಲ ಅಂತ ಹೇಳೊಕೆ ಆಗಲ್ಲ, ಶೋಷಣೆ ಇಲ್ಲ ಅಂತ ಹೇಳೋದು ಪ್ರಪಂಚದಲ್ಲಿ ಕಳ್ಳತನ ಇಲ್ಲ ಎಂದಂತೆ. ನನಗೆ ಯಾವತ್ತೂ ಈ ರೀತಿಯ ಅನುಭವ ಆಗಿಲ್ಲ. ಆದ್ರೆ ಶೋಷಣೆ ಆಗಿರೋರು ನನ್ನ ಬಳಿ ಹೇಳಿ ಕೊಂಡಿದ್ದಾರೆ ಎಂದರು. ನನ್ನ ಎರಡನೇ ಚಿತ್ರದ ಶೂಟಿಂಗ್ ವೇಳೆ ಜೂನಿಯರ್ ಆರ್ಟಿಸ್ಟ್ ತಮಗಾದ ಅನುಭವ ಹಂಚಿಕೊಂಡಿದ್ದರು ಎಂದು ಚೈತ್ರಾ ಹೇಳಿದ್ದಾರೆ.
ಜೂನಿಯರ್ ಆರ್ಟಿಸ್ಟ್ ಒಬ್ಬರು ಯಾವುದೇ ಸಿನಿಮಾಗಾಗಿ ಆಡಿಷನ್ ಕೊಟ್ಟಿದ್ರಂತೆ. ಮೊದಲ ರೌಂಡ್ ನಲ್ಲಿ ಸೆಲೆಕ್ಟ್ ಆಗಿದ್ದೀರಾ ಅಂತ ಅವ್ರು ಆಕೆಗೆ ಹೇಳಿದ್ರಂತೆ. ಬಳಿಕ ಕಾಲ್ ಮಾಡಿ ನಮ್ಮ ಜೊತೆ ಟ್ರಿಪ್ಗೆ ಬನ್ನಿ ನಿಮ್ಮನ್ನೇ ನಾಯಕಿ ಮಾಡ್ತೀನಿ ಅಂದ್ರಂತೆ ಎಂದು ನಟಿ ಚೈತ್ರಾ ಆಚಾರ್ ಹೇಳಿದ್ದಾರೆ.
ಇದನ್ನೂ ಓದಿ : ಐಶ್ವರ್ಯಾ ರೈ ಜಿಮ್ಗೆ ಭೇಟಿ ನೀಡಿದ್ದರಿಂದ ನಮ್ಮ ಮಧ್ಯೆ ಬ್ರೇಕಪ್ ಆಯ್ತು – ಸಲ್ಮಾನ್ ಖಾನ್ ಮಾಜಿ ಪ್ರೇಯಸಿ..!