ನಾಗಮಂಗಲ : ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಸಂಭವಿಸಿದ್ದ ಗಲಭೆ ಕೇಸ್ಗೆ ಸಂಬಂಧಪಟ್ಟಂತೆ ಬಂಧನ ಭೀತಿಗೆ ಹೆದರಿ ಹಲವು ಯುವಕರು ಊರು ಬಿಡುತ್ತಿದ್ದಾರೆ. ಬದ್ರಿಕೊಪ್ಪಲು ಗ್ರಾಮದ ಹಿಂದೂ ಯುವಕರು ಊರುಬಿಟ್ಟದ್ದು, ಪಟ್ಟಣದ ಮುಸ್ಲಿಂ ಬ್ಲಾಕ್ನಲ್ಲಿ ಮುಸ್ಲಿಂ ಯುವಕರು ಕೂಡ ಮನೆ ಬಿಟ್ಟಿದ್ದಾರೆ.
ಗಲಭೆ ಪ್ರಕರಣದಲ್ಲಿ ಈಗಾಗಲೇ 150ಕ್ಕೂ ಹೆಚ್ಚು ಜನರ ಮೇಲೆ ಪೊಲೀಸರು FIR ಹಾಕಿದ್ದು, 50ಕ್ಕೂ ಹೆಚ್ಚು ಜನರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಗಲಭೆ ದಿನದ CCTV ದೃಶ್ಯ ಆಧರಿಸಿ ಪೊಲೀಸರು ನಾಗಮಂಗಲದಲ್ಲಿ ಕಿಚ್ಚು ಹಚ್ಚಿದ ದುಷ್ಕರ್ಮಿಗಳನ್ನು ಬಂಧಿಸಲು ಬಲೆ ಬೀಸಿದ್ದಾರೆ. ನಿತ್ಯವು ನಗರದ ಹಲವರ ಮನೆಗಳ ಬಳಿ ತಲಾಶ್ ನಡೆಸ್ತಿದ್ದಾರೆ. ಸದ್ಯ ಪೊಲೀಸರ ಬಂಧನಕ್ಕೆ ಹೆದರಿ ಯುವಕರು ಊರು ಬಿಟ್ಟಿದ್ದಾರೆ ಎನ್ನಲಾಗಿದೆ.
ಇಂದು ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ನಾಗಮಂಗಲದಲ್ಲಿ ಶಾಂತಿ ಸಭೆ ನಡೆದಿದೆ. ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಸಂಭವಿಸಿದ್ದ ಗಲಭೆಯಿಂದ ಉಂಟಾಗಿದ್ದ ಉದ್ವಿಗ್ನ ವಾತಾವರಣ ತಿಳಿಗೊಂಡಿದೆ. ಘಟನೆ ನಡೆದ ದಿನದಿಂದಲೂ ಬಂದ್ ಆಗಿದ್ದ ಅಂಗಡಿಗಳು ನಿನ್ನೆ ಶೇಕಡಾ.50ರಷ್ಟು ತೆರೆದಿವೆ. ಸದ್ಯ ಬೂದಿ ಮುಚ್ಚಿದ ಕೆಂಡದಂತಿದ್ದ ನಾಗಮಂಗಲ ಸಹಜ ಸ್ಥಿತಿಯತ್ತ ಮರಳಿದೆ.
ಇದನ್ನೂ ಓದಿ : ಬ್ಲೌಸ್ ಧರಿಸದೇ ಕೇರಳ ಸೀರೆಯುಟ್ಟ ಹಾಟ್ ಬ್ಯೂಟಿ – ಕನ್ನಡದ ಈ ನಟಿ ಯಾರು ಅಂತಾ ಗೊತ್ತಾಯ್ತಾ?