Download Our App

Follow us

Home » ಸಿನಿಮಾ » ಹಸೆಮಣೆ ಏರಲು “ಟಗರು ಪುಟ್ಟಿ” ರೆಡಿ – ಮಾನ್ವಿತಾ ಕೈ ಹಿಡಿಯುತ್ತಿರುವ ವರ ಯಾರು?

ಹಸೆಮಣೆ ಏರಲು “ಟಗರು ಪುಟ್ಟಿ” ರೆಡಿ – ಮಾನ್ವಿತಾ ಕೈ ಹಿಡಿಯುತ್ತಿರುವ ವರ ಯಾರು?

ಕೆಂಡಸಂಪಿಗೆ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಹೆಜ್ಜೆ ಇಟ್ಟು ಸಕ್ಸಸ್ ಫುಲ್ ನಟಿಯಾಗಿ ಹೊರಹೊಮ್ಮಿರುವವರು ಮಾನ್ವಿತಾ ಕಾಮತ್. ಆರ್ ಜೆಯಾಗಿದ್ದ ಮಾನ್ವಿತಾ ಸುಕ್ಕ ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಬಲಗಾಲಿಟ್ಟರು. ಬಳಿಕ ಶಿವಣ್ಣನ ಟಗರು ಸಿನಿಮಾದಲ್ಲಿ ಬಣ್ಣ ಹಚ್ಚಿ ಟಗರು ಪುಟ್ಟಿಯಾಗಿ ಕರುನಾಡ ಪ್ರೇಕ್ಷಕರ ಮನ ಗೆದ್ದ ಈ ಸುಂದರಿ ಈಗ ಹಸೆಮಣೆ ಏರಲು ರೆಡಿಯಾಗಿದ್ದಾರೆ.

ಮಾನ್ವಿತಾ ಕಾಮತ್ ಗೆ ಕಂಕಣ ಭಾಗ್ಯ ಕೂಡಿಬಂದಿದೆ. ಮೈಸೂರು ಮೂಲದ ಸಂಗೀತ ನಿರ್ದೇಶಕ ಅರುಣ್ ಕುಮಾರ್ ಅವರೊಂದಿಗೆ ಕೆಂಡಸಂಪಿಗೆ ಕುವರಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೇ 1 ರಂದು ಮಾನ್ವಿತಾ ಅರುಣ್ ಕುಮಾರ್ ವಿವಾಹೋತ್ಸವ ನಡೆಯಲಿದೆ.

ಮಾನ್ವಿತಾ ಕಾಮತ್ ಹಾಗೂ ಅರುಣ್ ಕುಮಾರ್ ಕೊಂಕಣಿ ಸಂಪ್ರದಾಯದಂತೆ ಮೇ1 ಕ್ಕೆ ಹೊಸ ಬಾಳಿಗೆ ಹೆಜ್ಜೆ ಇಡಲಿದ್ದಾರೆ. ಅದಕ್ಕೂ ಮುನ್ನ ಏಪ್ರಿಲ್ 29ಕ್ಕೆ ಮೆಹಂದಿ ಕಾರ್ಯಕ್ರಮ, ಏಪ್ರಿಲ್ 30 ಅರಿಶಿನ ಶಾಸ್ತ್ರ ಜರುಗಿದರೆ, ಏಪ್ರಿಲ್ 30ರಂದು ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಚಿಕ್ಕಮಗಳೂರಿನ ಕಳಸದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆ ನಡೆಯಲಿದೆ.

ಇದನ್ನೂ ಓದಿ : ಲಕ್ಷ್ಮೀ ಹೆಬ್ಬಾಳ್ಕರ್‌-ಮುರುಗೇಶ್‌ ನಿರಾಣಿ ವಾಕ್ಸಮರ – ಸಚಿವೆಯ ಬೆಂಬಲಕ್ಕೆ ನಿಂತ ಪಂಚಮಸಾಲಿ ಸ್ವಾಮೀಜಿ..!

Leave a Comment

DG Ad

RELATED LATEST NEWS

Top Headlines

ಸ್ಟಾರ್ ನಿರ್ದೇಶಕ ಎ.ಪಿ ಅರ್ಜುನ್ ವಿರುದ್ಧ ನಡೆಯುತ್ತಿದ್ಯಾ ಪಿತೂರಿ?

ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ವಿವಾದದಲ್ಲಿ ಸಿಲುಕಿದೆ. ನಿರ್ಮಾಪಕರಿಂದ 2.5 ಕೋಟಿ ರೂಪಾಯಿ ಪಡೆದು ಡಿಜಿಟಲ್ ಟೆರೆನ್ ಸಂಸ್ಥೆ ಗ್ರಾಫಿಕ್ಸ್

Live Cricket

Add Your Heading Text Here