Download Our App

Follow us

Home » ಕ್ರೀಡೆ » ಟಿ20 ವಿಶ್ವಕಪ್ : ಬುಮ್ರಾ, ಅರ್ಷ್​ದೀಪ್ ಮ್ಯಾಜಿಕ್‌ – ಅಫ್ಘಾನ್ ವಿರುದ್ಧ ಭಾರತಕ್ಕೆ 47 ರನ್‌ಗಳ ಭರ್ಜರಿ ಜಯ..!

ಟಿ20 ವಿಶ್ವಕಪ್ : ಬುಮ್ರಾ, ಅರ್ಷ್​ದೀಪ್ ಮ್ಯಾಜಿಕ್‌ – ಅಫ್ಘಾನ್ ವಿರುದ್ಧ ಭಾರತಕ್ಕೆ 47 ರನ್‌ಗಳ ಭರ್ಜರಿ ಜಯ..!

ಟಿ20 ವಿಶ್ವಕಪ್ : ವೆಸ್ಟ್​ ಇಂಡೀಸ್​​ನ ಬ್ರಿಡ್ಜ್‌ಟೌನ್‌ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್ 8ರ ಸುತ್ತಿನ ಪಂದ್ಯದಲ್ಲಿ ಭಾರತ 47 ರನ್​​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಭಾರತ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಸತತ 4 ಪಂದ್ಯಗಳನ್ನು ಗೆಲ್ಲುವ ಮೂಲಕ ತನ್ನ ಅಜೇಯ ಓಟವನ್ನು ಮುಂದುವರೆಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ಪರ ಕೊಹ್ಲಿ 24, ಪಂತ್​ 20 ರನ್​ ಗಳಿಸಿದ್ರು. ಸೂರ್ಯಕುಮಾರ್​ ಯಾದವ್​​ ಕೇವಲ 28 ಬಾಲ್​ನಲ್ಲಿ 3 ಸಿಕ್ಸರ್​​, 5 ಫೋರ್​​ ಸಮೇತ 53 ರನ್​ ಸಿಡಿಸಿದ್ರು. ಹಾರ್ದಿಕ್​ ಪಾಂಡ್ಯ 32, ಅಕ್ಷರ್​ ಪಟೇಲ್​​ 12 ರನ್​ ಗಳಿಸಿದ್ರು. ಭಾರತ ನಿಗದಿತ 20 ಓವರ್​ನಲ್ಲಿ 8 ವಿಕೆಟ್​ ನಷ್ಟಕ್ಕೆ 181 ರನ್​ ಕಲೆ ಹಾಕಿತ್ತು.

ಭಾರತ ನೀಡಿದ ಬೃಹತ್​​ ಗುರಿ ಬೆನ್ನತ್ತಿದ ಅಫ್ಘಾನ್​ ತಂಡವು ನಿಗದಿತ 20 ಓವರ್​ಗಳಲ್ಲಿ ಆಲೌಟ್​ ಆಗಿದೆ. ಅಫ್ಘಾನ್​ ತಂಡದ ಪರ ಗುರ್ಬಾಜ್​ 11, ನಯಾಬ್​ 17, ಓಮರ್​ಝೈ 26, ನೂರ್​ 12 ರನ್​ ಗಳಿಸಿದ್ರು. ಭಾರತ ಪರ ಜಸ್‌ಪ್ರೀತ್ ಬುಮ್ರಾ ಮತ್ತು ಅರ್ಷ್​ದೀಪ್ ಸಿಂಗ್ ಮಾಡಿದ ಮ್ಯಾಜಿಕ್ ಬೌಲಿಂಗ್ ದಾಳಿಗೆ ತತ್ತರಿಸಿ 134 ರನ್‌ಗಳಿಗೆ ಅಫ್ಘಾನ್ ಆಲೌಟ್ ಆಗಿದ್ದು, ಬುಮ್ರಾ ಮತ್ತು ಅರ್ಷ್​ದೀಪ್​​ ಸಿಂಗ್​​ ತಲಾ 3 ವಿಕೆಟ್​ ಪಡೆದ್ರು.

ಇದನ್ನೂ ಓದಿ : ದರ್ಶನ್ ಕೇಸ್ ವಿಚಾರದಲ್ಲಿ ಸಚಿವರಿಗೆ ವಾರ್ನಿಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ – ಹೇಳಿದ್ದೇನು?

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here