ಬೆಂಗಳೂರು : ದರ್ಶನ್ ಕೇಸ್ ವಿಚಾರದಲ್ಲಿ ಯಾರೂ ಕೂಡ ನನ್ನ ಹತ್ತಿರ ಬರಂಗಿಲ್ಲ. ಪ್ರಕರಣ ಕುರಿತು ಯಾರೊಬ್ಬರೂ ಹೆಚ್ಚಿಗೆ ಮಾತನಾಡಬಾರದು ಎಂದು ಸಚಿವ ಸಂಪುಟ ಸಭೆಯಲ್ಲಿ ಸಚಿವರಿಗೆ ಸಿಎಂ ಸಿದ್ದರಾಮಯ್ಯ ವಾರ್ನಿಂಗ್ ಕೊಟ್ಟಿದ್ದಾರೆ.
ಸಂಪುಟ ಸಭೆಯ ಆರಂಭದಲ್ಲೇ ಸಚಿವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ ಅವರು, ಈ ಪ್ರಕರಣದ ಬಗ್ಗೆ ಅನಗತ್ಯವಾಗಿ ತುಟಿ ಬಿಚ್ಚಬೇಡಿ, ಪರ-ವಿರೋಧ ಚರ್ಚೆ ಬೇಡ. ಇದಕ್ಕಿಂತ ಕ್ರೂರ ಕೃತ್ಯ ಮತ್ತೊಂದಿಲ್ಲ ಎಂದಿದ್ದಾರೆ.
ಇನ್ನು ಇದರಂತಹ ಕ್ರೂರತನ ನಾನು ನೋಡಿಯೇ ಇಲ್ಲ. ಯಾರೂ ಈ ವಿಚಾರದಲ್ಲಿ ನನ್ನ ಹತ್ರ ಬರಬೇಡಿ. ದರ್ಶನ್ ಪರ ಲಾಭಿ ಮಾಡಲು ಮುಂದಾದವರಿಗೆ ಹೊರಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರುವಂತೆ ಸಿಎಂ ಸಿದ್ದರಾಮಯ್ಯ ಕಟ್ಟಾಜ್ಞೆ ಮಾಡಿದ್ದಾರೆ.
ಇದನ್ನೂ ಓದಿ : ರೇಣುಕಾಸ್ವಾಮಿ ಹ*ತ್ಯೆ ಕೇಸ್ : ದರ್ಶನ್ ಸೇರಿ 4 ಆರೋಪಿಗಳು ಪೊಲೀಸ್ ಕಸ್ಟಡಿಗೆ..!
Post Views: 302