Download Our App

Follow us

Home » ಕ್ರೀಡೆ » ಟಿ20 ವಿಶ್ವಕಪ್ : ಬುಮ್ರಾ, ಪಾಂಡ್ಯ ಬೌಲಿಂಗ್‌ ದಾಳಿಗೆ ಮಂಡಿಯೂರಿದ ಪಾಕ್​​ – ಭಾರತಕ್ಕೆ 6 ರನ್​ಗಳ ರೋಚಕ ಜಯ..!

ಟಿ20 ವಿಶ್ವಕಪ್ : ಬುಮ್ರಾ, ಪಾಂಡ್ಯ ಬೌಲಿಂಗ್‌ ದಾಳಿಗೆ ಮಂಡಿಯೂರಿದ ಪಾಕ್​​ – ಭಾರತಕ್ಕೆ 6 ರನ್​ಗಳ ರೋಚಕ ಜಯ..!

ನ್ಯೂಯಾರ್ಕ್‌ ನಸೌ ಕೌಂಟಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಪಾಕ್​ ವಿರುದ್ಧ ಟೀಮ್​ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಲೀಗ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ಟೀಂ ಇಂಡಿಯಾ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಟೀಮ್​ ಇಂಡಿಯಾ ನೀಡಿದ 119 ರನ್​ಗಳ ಗುರಿಯನ್ನು ಬೆನ್ನತ್ತಿದ ಪಾಕ್​ ತಂಡ 20 ಓವರ್​ಗಳಲ್ಲಿ 7 ವಿಕೆಟ್​​ ನಷ್ಟಕ್ಕೆ 113 ರನ್​ ಗಳಿಸಿ 6 ರನ್​ನಿಂದ ಹೀನಾಯ ಸೋಲು ಕಂಡಿದೆ. ಲೀಗ್​ನಲ್ಲಿ ಸತತ ಎರಡನೇ ಸೋಲು ಅನುಭವಿಸಿದ ಪಾಕ್ ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲೇ ಉಳಿದುಕೊಂಡಿದೆ.

ಇನ್ನು, ಟೀಮ್​ ಇಂಡಿಯಾ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದು, ಓಪನರ್​ ಆಗಿ ಬಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೇವಲ 12 ಬಾಲ್​​ನಲ್ಲಿ 13 ರನ್​ ಗಳಿಸಿ ಶಾಹೀನ್​ ಅಫ್ರಿದಿ ಬೌಲಿಂಗ್​ನಲ್ಲಿ ಕ್ಯಾಚ್​ ನೀಡಿ ಪೆವಿಲಿಯನ್ ತೆರಳಿದರು. ವಿರಾಟ್​ ಕೊಹ್ಲಿ ಕೂಡ 3 ಬಾಲ್​ನಲ್ಲಿ 4 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ರು. ಹಾಗಾಗಿ ಟೀಮ್​ ಇಂಡಿಯಾಗೆ ಆರಂಭಿಕ ಆಘಾತ ಆಗಿತ್ತು.

ಕೊಹ್ಲಿ, ರೋಹಿತ್​ ಔಟಾದ್ರೂ ಪಂತ್​​ ಮಾತ್ರ ತನ್ನ ಲಕ್​ನಿಂದಲೇ ಬಚಾವ್​ ಆಗಿದ್ದರು. ಬರೋಬ್ಬರಿ ಮೂರು ಬಾರಿ ಪಂತ್​​ ಕ್ಯಾಚ್​​ ಅನ್ನು ಪಾಕ್​ ಆಟಗಾರರು ಕೈ ಚೆಲ್ಲಿದ್ರು. ಹಾಗಾಗಿ ಕೊನೆವರೆಗೂ ಕ್ರೀಸ್​ನಲ್ಲೇ ನಿಂತು ಬ್ಯಾಟ್​​ ಬೀಸಿದ ಪಂತ್​ 31 ಬಾಲ್​ಗೆ 42 ರನ್​ ಚಚ್ಚಿದ್ರು. ಇವರಿಗೆ ಸಾಥ್​ ನೀಡಿದ್ದ ಅಕ್ಷರ್​ ಪಟೇಲ್​ 1 ಸಿಕ್ಸರ್​​, 2 ಫೋರ್​ ಸಮೇತ 20 ರನ್​ ಸಿಡಿಸಿದ್ರು. ಟೀಮ್​ ಇಂಡಿಯಾ 19 ಓವರ್​ಗೆ 119 ರನ್​ಗೆ ಆಲೌಟ್​ ಆಗಿತ್ತು.

ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಉತ್ತಮ ಆರಂಭದ ಹೊರತಾಗಿಯೂ ಸತತ ವಿಕೆಟ್​ಗಳ ಪತನದ ಕಾರಣ ಹಾಗೂ ಟೀಮ್ ಇಂಡಿಯಾ ವೇಗಿಗಳ ದಾಳಿಯಿಂದಾಗಿ 20 ಓವರ್​ಗಳಲ್ಲಿ 113 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಭಾರತದ ಪರ ಬುಮ್ರಾ ಮೂರು ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಹಾರ್ದಿಕ್ ಎರಡು ವಿಕೆಟ್, ಅರ್ಷದೀಪ್ ಮತ್ತು ಅಕ್ಷರ್ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ : ‘ತ್ರಿ’ ವಿಕ್ರಮನಾಗಿ ಪ್ರಧಾನಿ ಪಟ್ಟಕ್ಕೇರಿದ ಮೋದಿ – ನಮೋ 3.0 ದರ್ಬಾರ್​​ ಶುರು..!

 

 

 

 

Leave a Comment

DG Ad

RELATED LATEST NEWS

Top Headlines

ಸ್ಟಾರ್ ನಿರ್ದೇಶಕ ಎ.ಪಿ ಅರ್ಜುನ್ ವಿರುದ್ಧ ನಡೆಯುತ್ತಿದ್ಯಾ ಪಿತೂರಿ?

ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ವಿವಾದದಲ್ಲಿ ಸಿಲುಕಿದೆ. ನಿರ್ಮಾಪಕರಿಂದ 2.5 ಕೋಟಿ ರೂಪಾಯಿ ಪಡೆದು ಡಿಜಿಟಲ್ ಟೆರೆನ್ ಸಂಸ್ಥೆ ಗ್ರಾಫಿಕ್ಸ್

Live Cricket

Add Your Heading Text Here