Download Our App

Follow us

Home » ಕ್ರೀಡೆ » ಟಿ20 ವಿಶ್ವಕಪ್ : ಸೂರ್ಯ-ದುಬೆ ಭರ್ಜರಿ ಆಟ, ಯುಎಸ್ಎ ವಿರುದ್ಧ ಗೆದ್ದು ಸೂಪರ್​​-8ಕ್ಕೆ ಪ್ರವೇಶಿಸಿದ ಭಾರತ..!

ಟಿ20 ವಿಶ್ವಕಪ್ : ಸೂರ್ಯ-ದುಬೆ ಭರ್ಜರಿ ಆಟ, ಯುಎಸ್ಎ ವಿರುದ್ಧ ಗೆದ್ದು ಸೂಪರ್​​-8ಕ್ಕೆ ಪ್ರವೇಶಿಸಿದ ಭಾರತ..!

ನ್ಯೂಯಾರ್ಕ್‌ : ನಿನ್ನೆ ನಡೆದ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಯುಎಸ್​​ಎ ವಿರುದ್ಧ ​ಭಾರತ ಗೆಲುವು ಸಾಧಿಸಿದ್ದು, ಈ ಮೂಲಕ ಸೂಪರ್-8 ಹಂತಕ್ಕೆ ಅರ್ಹತೆ ಪಡೆದಿದೆ.

ನ್ಯೂಯಾರ್ಕ್‌ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಯುಎಸ್​ಎ ತಂಡ 20 ಓವರ್​ನಲ್ಲಿ 8 ವಿಕೆಟ್​ ನಷ್ಟಕ್ಕೆ 110 ರನ್​ ಗಳಿಸಿದ್ರು. ಈ ಮೂಲಕ ಭಾರತ ತಂಡಕ್ಕೆ 111 ರನ್​ಗಳ ಗುರಿ ನೀಡಿತ್ತು.

ಯುಎಸ್​​ಎ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಭಾರತ ​ ತಂಡ ಆರಂಭದಲ್ಲೇ​​​ ವಿರಾಟ್​​​ ಕೊಹ್ಲಿ ಮತ್ತು ಕ್ಯಾಪ್ಟನ್​​ ರೋಹಿತ್​ ಶರ್ಮಾ ವಿಕೆಟ್​ ಕಳೆದುಕೊಂಡಿತ್ತು. ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತದ ಪರ ಪಂತ್​ ಕೆಲ ಹೊತ್ತು ಕ್ರೀಸ್​ನಲ್ಲಿ ನಿಂತು 18 ರನ್​ ಕಲೆ ಹಾಕಿದ್ರು.

ಇನ್ನು, ಬಳಿಕ ಕೊನೆವರೆಗೂ ಕ್ರೀಸ್​ನಲ್ಲೇ ನಿಂತು ಆಡಿದ ಸೂರ್ಯಕುಮಾರ್​​ ಯಾದವ್​ ಮತ್ತು ಶಿವಂ ದುಬೆ ಉತ್ತಮ ಜೊತೆಯಾಟ ಆಡಿದ್ರು. ಸೂರ್ಯಕುಮಾರ್​ ಯಾದವ್​​ 49 ಬಾಲ್​ನಲ್ಲಿ 2 ಭರ್ಜರಿ ಸಿಕ್ಸರ್​​, 2 ಫೋರ್​ ಸಮೇತ 50 ರನ್​ ಗಳಿಸಿದ್ರು. ಇವರಿಗೆ ಸಾಥ್​ ನೀಡಿದ ಶಿವಂ ದುಬೆ 1 ಫೋರ್​​, 1 ಸಿಕ್ಸರ್​ ಸಮೇತ 31 ರನ್​​​​ ಚಚ್ಚಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ರು. ಭಾರತ 18.2 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 111 ರನ್​ ಕಲೆ ಹಾಕಿ ಗೆದ್ದು ಬೀಗಿತು.

ಇದನ್ನೂ ಓದಿ : ರಜನಿ ಎಕ್ಸ್​ಪ್ರೆಸ್​​ ಯೂಟ್ಯೂಬ್ ಚಾನೆಲ್ ವಿರುದ್ಧ ಆಕ್ರೋಶ ಹೊರಹಾಕಿದ ದರ್ಶನ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ..!

 

 

 

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here