ಬೆಳಗಾವಿ : ಲೋಕ ಚುನಾವಣೆಗೆ ಬೆಳಗಾವಿ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಹಿಂಡಲಗಾ ಜೈಲಿನ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಜೈಲಿನಲ್ಲಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಸರ್ಪೈಸ್ ದಾಳಿ ನಡೆಸಿ, ಇಡೀ ಜೈಲು ಜಾಲಾಡಿದ್ದಾರೆ. ಬೆಳಗಾವಿ ಹಿಂಡಲಗಾ ಜೈಲಿನಿಂದಲೇ ಜೀವಬೆದರಿಕೆ ಕರೆ ಮಾಡಿದ್ದ ಆರೋಪ ಕೇಳಿಬಂದಿದ್ದು, ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಈ ಬಗ್ಗೆ ಡಿಸಿಪಿ ರೋಹನ್ ಜಗದೀಶ್ ಮಾತನಾಡಿ, ಶ್ವಾನದಳದೊಂದಿಗೆ ಬಂದು ಇಡೀ ಜೈಲು ತಪಾಸಣೆ ಮಾಡಿದ್ದೇವೆ. ಜೈಲಿನೊಳಗೆ ವಾಸ್ತವತೆ ಏನಿದೆ ಎಂದು ತಿಳಿಯಲು ತಪಾಸಣೆ ಮಾಡಿದ್ದೇವೆ,
ತಂಬಾಕು, ಬೀಡಿ ಸಿಗರೇಟು ಸಣ್ಣ ಪುಟ್ಟ ಚಾಕುಗಳು ಒಳಗಡೆ ಸಿಕ್ಕಿವೆ ಎಂದರು.
ಭದ್ರತೆ ಇದ್ದರೂ ಸಹ ಒಳಗೆ ಇಂತವೆಲ್ಲ ಏಕೆ ಹೋಗ್ತಿದೆ ತನಿಖೆ ಮಾಡಬೇಕಾಗಿದೆ, ಸದ್ಯಕ್ಕೆ ಮೊಬೈಲ್ ಸಿಕ್ಕಿಲ್ಲ ಆದ್ರೆ ಮೊಬೈಲ್ ಚಾರ್ಜರ್ಗಳು ಸಿಕ್ಕಿವೆ. ಬ್ಲೂಟೂತ್ ಡಿವೈಸಗಳು ಸಿಕ್ಕಿವೆ ಅದನ್ನ ನಮ್ಮ ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಡಿಸಿಪಿ ರೋಹನ್ ಜಗದೀಶ್ ಹೇಳಿದ್ದಾರೆ.
ಇದನ್ನೂ ಓದಿ : ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡ ‘ಆಡುಜೀವಿತಂ’ ಚಿತ್ರ : ಪೃಥ್ವಿರಾಜ್ ನಟನೆಗೆ ಜನರು ಫುಲ್ ಫಿದಾ..!