Download Our App

Follow us

Home » ಸಿನಿಮಾ » ಜನ ಮೆಚ್ಚಿದ ಮಾರ್ಟಿನ್‌.. ದೇಶಾದ್ಯಂತ ಯಶಸ್ವಿ ಪ್ರದರ್ಶನ – ಸಕ್ಸಸ್‌ ಮೀಟ್‌ನಲ್ಲಿ ಜನತೆಗೆ ಧನ್ಯವಾದ ಸಲ್ಲಿಸಿದ ಧ್ರುವ ಸರ್ಜಾ..!

ಜನ ಮೆಚ್ಚಿದ ಮಾರ್ಟಿನ್‌.. ದೇಶಾದ್ಯಂತ ಯಶಸ್ವಿ ಪ್ರದರ್ಶನ – ಸಕ್ಸಸ್‌ ಮೀಟ್‌ನಲ್ಲಿ ಜನತೆಗೆ ಧನ್ಯವಾದ ಸಲ್ಲಿಸಿದ ಧ್ರುವ ಸರ್ಜಾ..!

ಆ್ಯಕ್ಷನ್​​ ಪ್ರಿನ್ಸ್​​ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ದೇಶಾದ್ಯಂತ ತನ್ನದೇ ರೀತಿಯಲ್ಲಿ ಸದ್ದು ಮಾಡುತ್ತಿದೆ. ಉದಯ್ ಕೆ ಮೆಹ್ತಾ ನಿರ್ಮಾಣದ, ಎ.ಪಿ ಅರ್ಜುನ್ ನಿರ್ದೇಶನದ ಈ ಸಿನಿಮಾ ಕಳೆದವಾರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿ, ಎಲ್ಲಾ ಕಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಯಶಸ್ಸಿನ ಸಂತೋಷ ಹಂಚಿಕೊಳ್ಳಲು ಚಿತ್ರತಂಡ ಸಕ್ಸಸ್ ಮೀಟ್ ಆಯೋಜಿಸಿತ್ತು.‌

ಸಕ್ಸಸ್ ಮೀಟ್​​ನಲ್ಲಿ ಧ್ರುವ ಸರ್ಜಾ ಅವರು ಮೊದಲು ತಂತ್ರಜ್ಞರಿಗೆ ಧನ್ಯವಾದ ತಿಳಿಸಿದ್ದಾರೆ. ನಂತರ ನಮ್ಮ “ಮಾರ್ಟಿನ್” ಚಿತ್ರಕ್ಕೆ ಸಿಗುತ್ತಿರುವ ಪ್ರಶಂಸೆಗೆ ಮನ ತುಂಬಿ ಬಂದಿದೆ. ಈ ಯಶಸ್ಸಿಗೆ ಕಾರಣರಾದ ನಿರ್ಮಾಪಕರು, ನಿರ್ದೇಶಕರು, ಚಿತ್ರತಂಡದ ಸದಸ್ಯರು ಹಾಗೂ ಕನ್ನಡ ಕಲಾಭಿಮಾನಿಗಳಿಗೆ ಅನಂತ ಧನ್ಯವಾದ. ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ ಎಂದು ಹೇಳಿದ್ದಾರೆ.

ಚಿತ್ರ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೂ ಬಿಡುಗಡೆಯಾಗಿರುವ ಬಹುತೇಕ ಚಿತ್ರಮಂದಿರಗಳಲ್ಲಿ ನಮ್ಮ “ಮಾರ್ಟಿನ್” ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹೈದರಾಬಾದ್ ಮುಂತಾದ ಕಡೆಗೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಮುಂದಿನವಾರ ವಿದೇಶದಲ್ಲೂ “ಮಾರ್ಟಿನ್” ರಿಲೀಸ್ ಆಗಲಿದೆ. ಈ ಸಂದರ್ಭದಲ್ಲಿ ನಾಯಕ ಧ್ರುವ ಸರ್ಜಾ, ನಾಯಕಿ ವೈಭವಿ ಶಾಂಡಿಲ್ಯ, ನಿರ್ಮಾಪಕರಾದ ಉದಯ್ ಕೆ ಮೆಹ್ತಾ ಸೇರಿದಂತೆ ನನ್ನ ಇಡೀ ತಂಡಕ್ಕೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ನಿರ್ದೇಶಕ ಎ.ಪಿ ಅರ್ಜುನ್ ಹೇಳಿದರು.

ನಿರ್ಮಾಪಕ ಉದಯ್ ಕೆ ಮೆಹ್ತಾ ಪುತ್ರ ಸೂರಜ್ ಮೆಹ್ತಾ ಸಹ ಎಲ್ಲರಿಗೂ ಧನ್ಯವಾದ ತಿಳಿಸಿ, ಚಿತ್ರ ಎಲ್ಲಾ ಕಡೆ ಯಶಸ್ವಿ ಪದರ್ಶನ ಕಾಣುತ್ತಿದೆ. ಕಲೆಕ್ಷನ್ ಸಹ ಉತ್ತಮವಾಗಿದೆ ಎಂದರು. ನಾಯಕಿ ವೈಭವಿ ಶಾಂಡಿಲ್ಯ, ಛಾಯಾಗ್ರಾಹಕ ಸತ್ಯ ಹೆಗಡೆ, ಪ್ರತಾಪ್, ವಜ್ರಾಂಗ್ ಶೆಟ್ಟಿ, ಶಿವಾರ್ಜುನ್, ಕುಮಾರ್ ಮುಂತಾದವರು ಚಿತ್ರದ ಯಶಸ್ಸನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.

ಇದನ್ನೂ ಓದಿ : ಬೆಂಗಳೂರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಗಿಫ್ಟ್ ​- ‘ಕಾವೇರಿ 5ನೇ ಹಂತ’ದ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ..!

Leave a Comment

DG Ad

RELATED LATEST NEWS

Top Headlines

ಪ್ಲೀಸ್‌ ಒಂದು ಚಾನ್ಸ್​ ಕೊಡಿ ಬಿಗ್​ಬಾಸ್… ಜಗದೀಶ್, ರಂಜಿತ್ ಹೊರಹೋಗ್ತಿದ್ದಂತೆ ಕಣ್ಣೀರಿಟ್ಟ ಸ್ಪರ್ಧಿಗಳು..!

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಾಕಿಂಗ್ ಬೆಳವಣಿಗೆ ನಡೆಯುತ್ತಿದೆ. ಸ್ಪರ್ಧಿಗಳೆಲ್ಲರೂ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದ ಜಗದೀಶ್ ಕೋಪಗೊಂಡು ಮಹಿಳಾ ಸ್ಪರ್ಧಿಗಳ ವಿರುದ್ಧ ಅಶ್ಲೀಲ

Live Cricket

Add Your Heading Text Here