Download Our App

Follow us

Home » ಸಿನಿಮಾ » ರೌಡಿಸಂ ಕಥೆ ಹೇಳಲು ಹೊರಟ ‘ಓಂಕಾಳಿ’

ರೌಡಿಸಂ ಕಥೆ ಹೇಳಲು ಹೊರಟ ‘ಓಂಕಾಳಿ’

ಗಾಂಧಿನಗರದಲ್ಲಿ ಹೊಸದೊಂದು ಸಿನಿಮಾ ರಿಜಿಸ್ಟರ್ ಆಗಿದೆ. ಅದುವೇ ಓಂಕಾಳಿ. ಮುಂಬೈನಲ್ಲಿ ಕೆಲವು ಸೀರಿಯಲ್ ಗಳಲ್ಲಿ ಕೆಲಸ ಮಾಡಿದ್ದಂತ ಸಿಂಹ ಅವರು ಇದೀಗ ಸ್ಯಾಂಡಲ್ ವುಡ್ ಗೆ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದಾರೆ. ನೋ ಪಾರ್ಕಿಂಗ್ ಎಂಬ ಶಾರ್ಟ್ ಮೂವಿಗೂ ಸ್ಕ್ರೀನ್ ಪ್ಲೇ, ಡೈರೆಕ್ಷನ್ ಮಾಡಿದ್ದಾರೆ. ಈ ಶಾರ್ಟ್ ಮೂವಿ ಯೂಟ್ಯೂಬ್ ನಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಓಂಕಾಳಿ ಸಿನಿಮಾ ನಿರ್ದೇಶಕ ಸಿಂಹ ಅವರ ಇಡೀ ಕುಟುಂಬದ ಕನಸು ಎಂದರೆ ತಪ್ಪಾಗಲಾರದು. ಯಾಕಂದ್ರೆ ಅಪ್ಪನ ಉತ್ಸಾಹ ನೋಡಿ ಮಗನೇ ಪ್ರೊಡ್ಯೂಸರ್ ಆಗಿದ್ದಾರೆ. ಮಗಳ ಆಸೆಗೆ ಅಪ್ಪನೇ ನಿರ್ದೇಶಕರಾಗಿದ್ದಾರೆ. ಇಡೀ ಸಿನಿಮಾದ ತಂಡಕ್ಕೆ ತಾಯಿಯ ಆಶೀರ್ವಾದವಿದೆ. ಹೀಗಾಗಿ ಈ ಸಿನಿಮಾ ಸಿಂಹ ಕುಟುಂಬದ ಕನಸಿನ ಕೂಸಾಗಿದೆ. ಈ ಕೂಸು ಇಂದಿನಿಂದ ಮುಹೂರ್ತ ಪಡೆದುಕೊಂಡಿದ್ದು, ಶೂಟಿಂಗ್ ಶುರು ಮಾಡಿದೆ.

ನಿರ್ದೇಶಕ ಸಿಂಹ ಮಾತನಾಡಿ, ಇದೊಂದು ರೌಡಿಸಂ ಬೇಸ್ ಸಿನಿಮಾ. ನಾನು ಸ್ವಂತವಾಗಿ ಬರೆದ ಕಥೆ. ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದಿದ್ದಂತ ಕಥೆಯನ್ನೇ ಈಗ ಸಿನಿಮಾದ ಕಥೆಯಾಗಿ ಎಣೆಯಲಾಗಿದೆ. ಇದೊಂದು ಆಕ್ಷನ್ ಸಿನಿಮಾ. ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕೂಡ ಇದರಲ್ಲಿ ಇದೆ. ಈ ಸಿನಿಮಾಗೆ ಮಗನೇ ನಿರ್ಮಾಪಕ. ನನ್ನ ಕನಸ್ಸನ್ನು ಕಂಡು ಅವನೇ ಸಿನಿಮಾ ಮಾಡೋಣಾ ಅಂತ ಮಾಡಿದ್ದಾನೆ’ ಎಂದಿದ್ದಾರೆ.

ನಿರ್ಮಾಪಕ ಪ್ರತಾಪ್ ಸಿಂಹ ಮಾತನಾಡಿ, ‘ನಮ್ಮ ತಂದೆಗೆ ಸಿನಿಮಾ ಮಾಡಬೇಕು ಎಂಬ ಆಸೆ. ಅದಕ್ಕೆ ಅಂತ ಸಾಕಷ್ಟು ಪ್ರಾಕ್ಟೀಸ್ ಮಾಡಿದ್ದಾರೆ. ಎರಡು ವರ್ಷದಿಂದ ಕೂತು ಈ ಕಥೆಯನ್ನು ಎಣೆದಿದ್ದರು. ಒಂದು ದಿನ ನನ್ನ ಬಳಿ ಬಂದು ಈ ಕಥೆಯನ್ನು ಹೇಳಿದರು. ಹತ್ತು ನಿಮಿಷ ಕೇಳುವಷ್ಟರಲ್ಲೇ ಏನೋ ಒಂಥರ ಕುತೂಹಲ ಮೂಡುವಂತ ಕಥೆ ಅದಾಗಿತ್ತು. ಹೀಗಾಗಿ ಸಿನಿಮಾವನ್ನ ನಾವೇ ಮಾಡೋಣಾ ಎಂದು ಒಪ್ಪಿಕೊಂಡು, ಸಿನಿಮಾಗೆ ಹಣ ಹಾಕಿದೆ. ಸಿನಿಮಾದ ಮೇಲೆ ತಂದೆಗೆ ಪ್ಯಾಷನ್ ಇದೆ’ ಎಂದು ತಂದೆಯನ್ನು ಮಗ ಹಾಡಿ ಹೊಗಳಿದ್ದಾರೆ.

ನಟಿ ಪ್ರವಾಲಿಕ ಮಾತನಾಡಿ, ಈ ಸಿನಿಮಾದಲ್ಲಿ ಮಧ್ಯಮವರ್ಗದ ಹುಡುಗಿಯ ಪಾತ್ರ ಮಾಡಿದ್ದೀನಿ. ಹೆಚ್ಚು ಕಥೆಯನ್ನು ರಿವಿಲ್ ಮಾಡುವುದಕ್ಕೆ ಆಗಲ್ಲ. ಇದು ನನ್ನ ಮೊದಲ ಸಿನಿಮಾ. ಇದಕ್ಕೂ ಮುನ್ನ ಅಪ್ಪನೇ ನಿರ್ದೇಶನ ಮಾಡಿರುವ ಶಾರ್ಟ್ ಮೂವಿಗಳಲ್ಲಿ ಅಭಿನಯಿಸಿದ ಅನುಭವವಿದೆ’ ಎಂದಿದ್ದಾರೆ.

ನಟ ವಿಜಯ್ ರಾಜ್ ಮಾತನಾಡಿ, ನನಗೆ ಇದು ಮೊದಲ ಕನ್ನಡ ಸಿನಿಮಾ. ತೆಲುಗಿನಲ್ಲಿ ಮಾರ್ನಾಲ್ಕು ಸಿನಿಮಾ ಮಾಡಿದ್ದೀನಿ. ಕನ್ನಡದಲ್ಲಿ ಶಿವಣ್ಣ ಅವರ ಅಭಿಮಾನಿಯಾಗಿದ್ದೀನಿ. ಪೋಸ್ಟರ್ ನಲ್ಲಿ ನೋಡಬಹುದು. ತುಂಬಾ ಕುತೂಹಲ ಹುಟ್ಟಿಸುವಂತ ಕಥೆ. ಇದಕ್ಕಾಗಿ ನಾನು ಕೂಡ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ ಎಂದಿದ್ದಾರೆ.

40-45 ದಿನಗಳ‌ ಕಾಲ ಶೂಟಿಂಗ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದು, ಬೆಂಗಳೂರು ಸುತ್ತ ಮುತ್ತವೆ ಶೂಟಿಂಗ್ ಮಾಡಲಾಗುತ್ತದೆ. ಬೆಂದಕಾಲ್ ಫಿಲ್ಮ್ಸ್‌ ಬ್ಯಾನರ್ ನಡಿ ಪ್ರತಾಪ್ ಸಿಂಹ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರವಿ ರಾಮದುರ್ಗ ಹಾಗೂ ಬಾಲ ನಾಗರಾಜ್ ಛಾಯಾಗ್ರಹಣ ಮಾಡಿದ್ದು, ಕೆವಿನ್ ಮ್ಯೂಸಿಕ್ ನೀಡಿದ್ದಾರೆ. ಉಳಿದಂತೆ ಪ್ರವಲಿಕಾ ನಾಯಕಿಯಾಗಿದ್ದು, ವಿಜಯ್ ರಾಜಾ ನಾಯಕರಾಗಿದ್ದಾರೆ. ಪದ್ಮಾವಾಸಂತಿ ಸೇರಿದಂತೆ ದೊಡ್ಡ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.

ಇದನ್ನೂ ಓದಿ : ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೊಳಗಾದ ಸದ್ಗುರು ಜಗ್ಗಿ ವಾಸುದೇವ್ – ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?

Leave a Comment

DG Ad

RELATED LATEST NEWS

Top Headlines

ಸ್ಟಾರ್ ನಿರ್ದೇಶಕ ಎ.ಪಿ ಅರ್ಜುನ್ ವಿರುದ್ಧ ನಡೆಯುತ್ತಿದ್ಯಾ ಪಿತೂರಿ?

ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ವಿವಾದದಲ್ಲಿ ಸಿಲುಕಿದೆ. ನಿರ್ಮಾಪಕರಿಂದ 2.5 ಕೋಟಿ ರೂಪಾಯಿ ಪಡೆದು ಡಿಜಿಟಲ್ ಟೆರೆನ್ ಸಂಸ್ಥೆ ಗ್ರಾಫಿಕ್ಸ್

Live Cricket

Add Your Heading Text Here