ಹೈದ್ರಾಬಾದ್ : ರೇಣು ದೇಸಾಯ್ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ.. ಒಂದು ಕಾಲದಲ್ಲಿ ಫೇಮಸ್ ನಟಿಯಾಗಿ ಹೆಸರು ಮಾಡಿದವರು. ಬಳಿಕ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆ ಪ್ರೀತಿ, ಲಿವಿಂಗ್ ಟುಗೆದರ್, ಮದುವೆ, ಡಿವೋರ್ಸ್ ಆಯ್ತು. ಪವನ್ ಕಲ್ಯಾಣ್ ಜೊತೆ ಮದುವೆಯಾದ್ಮೇಲೆ ರೇಣು ದೇಸಾಯ್ ಸಿನಿಮಾಗಳಿಂದ ದೂರ ಆಗಿಬಿಟ್ರು.
ರೇಣು ದೇಸಾಯ್ ಅವರು ಪವನ್ ಕಲ್ಯಾಣ್ ಅವರಿಂದ ದೂರ ಆದ ಬಳಿಕ ಮಕ್ಕಳ ಜೊತೆ ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿದ್ರು. ಮಕ್ಕಳ ಜವಾಬ್ದಾರಿಯನ್ನು ರೇಣು ದೇಸಾಯ್ ತಗೊಂಡ್ರು. ಈಗ ಅಖಿರಾ, ಆದ್ಯ ಪವನ್, ರೇಣು ಇಬ್ಬರ ಹತ್ರನೂ ಇರ್ತಾರೆ.
ರೇಣು ದೇಸಾಯ್ ‘ಟೈಗರ್ ನಾಗೇಶ್ವರ ರಾವ್’ ಸಿನಿಮಾದ ಮೂಲಕ ಮತ್ತೆ ಬಂದಿದ್ದು ಗೊತ್ತೇ ಇದೆ. ಆದ್ರೆ ಆ ಸಿನಿಮಾ ಹಿಟ್ ಆಗ್ಲಿಲ್ಲ. ರೇಣುಗೆ ಬರವಣಿಗೆ ಮೇಲೂ ಆಸಕ್ತಿ ಇದೆ. ನಿರ್ದೇಶನ ಕೂಡ ಮಾಡಿದ್ದಾರೆ. ರೇಣು ಮಾಡೆಲ್ ಆಗಿ ಕೆರಿಯರ್ ಶುರು ಮಾಡಿದ್ರು. ಆಗ ಪೂರಿ ಜಗನ್ನಾಥ್ ‘ಬದ್ರಿ’ ಸಿನಿಮಾದಲ್ಲಿ ಚಾನ್ಸ್ ಕೊಟ್ರು. ಹೀಗೆ ಪವನ್ ಕಲ್ಯಾಣ್ ಪರಿಚಯ ಆಯ್ತು.
ಮಾಡೆಲಿಂಗ್ನಲ್ಲಿ ಇದ್ದಾಗ ರೇಣುಗೆ ಆ್ಯಡ್ ಶೂಟ್ಸ್ ಅಂದ್ರೆ ತುಂಬಾ ಇಷ್ಟ. ಹೀರೋಯಿನ್ ಆದ್ಮೇಲೆ ಆ್ಯಡ್ಸ್ನಲ್ಲಿ ನಟಿಸೋದು ಬಿಟ್ರು. 22 ವರ್ಷಗಳ ನಂತರ ಮತ್ತೆ ರೇಣು ಆ್ಯಡ್ ಶೂಟ್ನಲ್ಲಿ ಭಾಗವಹಿಸಿದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ನನಗೆ ಆ್ಯಡ್ ಶೂಟ್ಸ್ ಅಂದ್ರೆ ತುಂಬಾ ಇಷ್ಟ. ಆದ್ರೆ ನನ್ನ ಭಾಗ್ಯ ಬೇರೆ. ಅದಕ್ಕೆ ಇಷ್ಟ ಇಲ್ಲದಿದ್ರೂ ಹೀರೋಯಿನ್ ಆದೆ. ಹೀರೋಯಿನ್ ಆಗ್ಬೇಕು ಅಂತ ಎಂದೂ ಅಂದುಕೊಂಡಿರಲಿಲ್ಲ. 22 ವರ್ಷಗಳ ನಂತರ ನನಗೆ ಇಷ್ಟವಾದ ಕೆಲಸ ಮಾಡ್ತಾ ಇರೋದಕ್ಕೆ ಖುಷಿ ಇದೆ ಅಂತ ರೇಣು ದೇಸಾಯ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಶೀಘ್ರ ಸ್ಟಾರ್ ಕ್ರಿಕೆಟಿಗನ ದಾಂಪತ್ಯ ಅಂತ್ಯವಾಗುತ್ತಾ ? – ಡಿವೋರ್ಸ್ ಆದ್ರೆ ಪತ್ನಿಗೆ ಜೀವನಾಂಶ ಎಷ್ಟು ಗೊತ್ತಾ ?