Download Our App

Follow us

Home » ರಾಜ್ಯ » ಈ ವಾರಾಂತ್ಯದಲ್ಲೇ SSLC ಫಲಿತಾಂಶ – ಮೇ 9 ಅಥವಾ 10 ರಂದು ರಿಸಲ್ಟ್​ ಪ್ರಕಟ ಸಾಧ್ಯತೆ..!

ಈ ವಾರಾಂತ್ಯದಲ್ಲೇ SSLC ಫಲಿತಾಂಶ – ಮೇ 9 ಅಥವಾ 10 ರಂದು ರಿಸಲ್ಟ್​ ಪ್ರಕಟ ಸಾಧ್ಯತೆ..!

ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಮೇ 9 ಅಥವಾ 10ರಂದು ಪ್ರಕಟವಾಗುವ ಸಾಧ್ಯತೆ ಇದೆ. ಮಂಗಳವಾರ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯುವ ಕಾರಣ ಫಲಿತಾಂಶ ವಿಳಂಬವಾಗುತ್ತಿದೆ. ಫಲಿತಾಂಶ ಇದೇ ವಾರ ಪ್ರಕಟವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ, ಫಲಿತಾಂಶದ ದಿನಾಂಕವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಫಲಿತಾಂಶ ಪ್ರಕಟಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡ ಪರೀಕ್ಷಾ ಮಂಡಳಿ, ಈಗಾಗಲೇ SSLC ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಳಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಶಿಕ್ಷಣ ಇಲಾಖೆಯ ವೆಬ್‌ಸೈಟ್​​​ನಲ್ಲಿ ಕೂಡ ಪ್ರಕಟವಾಗಲಿದೆ. ಜತೆಗೆ ಆಯಾ ಶಾಲೆಗಳಲ್ಲಿಯೂ ಪ್ರಕಟಿಸಲಾಗುತ್ತದೆ. ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶದ ಹೆಸರಿನಲ್ಲಿ ನಕಲಿ ಸಂದೇಶ ಭಾನುವಾರ ಹರಿದಾಡಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಫಾರ್ವರ್ಡ್​ ಆದ ಇಂತಹ ಅಸಂಬದ್ಧ ಸಂದೇಶಗಳಲ್ಲಿ ಬಗ್ಗೆ ವಿದ್ಯಾರ್ಥಿಗಳು ಎಚ್ಚರದಿಂದ ಇರಬೇಕು. ಇಲಾಖೆಯ ಅಧಿಕೃತ ವೆಬ್​​ಸೈಟ್​​ನಲ್ಲಿ ನೀಡಿದರೆ ಮಾತ್ರವೇ ಪರಿಗಣಿಸಬೇಕು ಎಂದು ಇಲಾಖೆ ಸಲಹೆ ನೀಡಿದೆ.

ಎಸ್​ಎಸ್​ಎಲ್​​ಸಿ ರಿಸಲ್ಟ್ ಯಾವ್ ವೆಬ್​​ಸೈಟ್​ನಲ್ಲಿ ದೊರೆಯುತ್ತದೆ? ಇಲಾಖೆಯ ಅಧಿಕೃತ ವೆಬ್​ಸೈಟ್​​ಗಳಾದ kseab.karnataka.gov.in ಮತ್ತು karresults.nic.in ಗಳಲ್ಲಿ ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು ಅವಕಾಶವಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ತಿಳಿಸಿದೆ.

ಫಲಿತಾಂಶ ನೋಡುವುದು, ಡೌನ್​ಲೋಡ್ ಮಾಡುವುದು ಹೇಗೆ?

  • ಅಧಿಕೃತ ವೆಬ್​ಸೈಟ್ karresults.nic.in ಗೆ ಭೇಟಿ ನೀಡಿ
  • ಮುಖಪುಟದಲ್ಲಿ SSLC Results 2024 ಲಿಂಕ್ ಅನ್ನು ಕ್ಲಿಕ್ ಮಾಡಿ
  • ಹೊಸ ಲಾಗಿನ್ ಪುಟವು ತೆರೆಯುತ್ತದೆ
  • ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
  • ಆಗ ಫಲಿತಾಂಶ ಕಾಣಿಸಿಕೊಳ್ಳುತ್ತದೆ, ಅಲ್ಲಿ ಡೌನ್​ಲೋಡ್ ಮಾಡಿ

ಎಸ್​​ಎಸ್​​ಎಲ್​ಸಿ ಪರೀಕ್ಷೆಗೆ ರಾಜ್ಯಾದ್ಯಂತ ಒಟ್ಟು 8,69,968 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅದರದಲ್ಲಿ 4,41,910 ಬಾಲಕರಾದರೆ, 4,28,058 ಬಾಲಕಿಯರು. ಒಟ್ಟು ವಿದ್ಯಾರ್ಥಿಗಳ ನೋಂದಣಿಯಲ್ಲಿ 8,10,368 ಸರ್ಕಾರಿ ಶಾಲಾ ವಿದ್ಯಾರ್ಥಿಗಳು, 18,225 ಖಾಸಗಿ ವಿದ್ಯಾರ್ಥಿಗಳು ಹಾಗೂ 41,375 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.

ಇದನ್ನೂ ಓದಿ : ಬೀದರ್ : ಮತದಾರರಿಗೆ ಹಂಚಲು ತಂದಿದ್ದ 4.40 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶಕ್ಕೆ..! 

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here