ಬೀದರ್ : ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಮತದಾರರಿಗೆ ಹಂಚಲು ತಂದಿದ್ದರು ಎನ್ನಲಾದ 4.40 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ. ಹೂಲಸೂರಿನಿಂದ ಬಸವಕಲ್ಯಾಣಕ್ಕೆ ಹುಂಡೈ ಕಾರ್ನಲ್ಲಿ ಮದ್ಯ ಸಾಗಿಸಲಾಗುತ್ತಿತ್ತು.
ಖಚಿತ ಮಾಹಿತಿ ಮೇರೆಗೆ ಕಾರ್ ತಡೆದು ಪರಿಶೀಲನೆ ನಡೆಸಿದಾಗ ಮದ್ಯ ಪತ್ತೆಯಾಗಿದೆ. ಕಾರ್ನಲ್ಲಿ ಎರಡು ಲಕ್ಷ ಲೀಟರ್ ಅಕ್ರಮ ಮದ್ಯವನ್ನು 36 ಬಾಕ್ಸ್ನಲ್ಲಿ ಸಾಗಿಸಲಾಗುತ್ತಿತ್ತು. ಕಾರ್ ಚಾಲಕ ಮಲ್ಲಿಕಾರ್ಜುನ ಕಂಟೆಪ್ಪಾನನ್ನು ಅರೆಸ್ಟ್ ಮಾಡಲಾಗಿದೆ.
ಜಿಲ್ಲಾ ಅಬಕಾರಿ ಡಿಸಿ ಡಾ.ಸಂಗನಗೌಡ ಪಿ ಹೊಸಳ್ಳಿ, ಅಬಕಾರಿ ಉಪ ಅಧಿಕ್ಷಕರಾದ ರವಿ ಮರಗೋಡ್, ಹನುಮಂತ ಗುತ್ತೆದಾರ, ರಮೇಶ್ ಬಿರಾದಾರ, ಶರಣಮ್ಮಾ ಬಜಂತ್ರಿ ಸೇರಿ ಹಲವರಿಂದ ಕಾರ್ಯಾಚರಣೆ ನಡೆದಿತ್ತು.
ಇದನ್ನೂ ಓದಿ : ಜಾರ್ಖಂಡ್ ಸಚಿವನ ಆಪ್ತನ ಮನೆ ಮೇಲೆ ಇಡಿ ರೇಡ್ : ರಾಶಿ ರಾಶಿ ಹಣ ಪತ್ತೆ..!
Post Views: 168