Download Our App

Follow us

Home » ರಾಜ್ಯ » ತಿಮ್ಮಪ್ಪನ ಪ್ರಸಾದ ಶ್ರೀವಾರಿ ಲಡ್ಡುಗೆ ಮತ್ತೆ ಕರ್ನಾಟಕದ ನಂದಿನಿ ತುಪ್ಪದ ಸ್ವಾದ..!

ತಿಮ್ಮಪ್ಪನ ಪ್ರಸಾದ ಶ್ರೀವಾರಿ ಲಡ್ಡುಗೆ ಮತ್ತೆ ಕರ್ನಾಟಕದ ನಂದಿನಿ ತುಪ್ಪದ ಸ್ವಾದ..!

ತಿಮ್ಮಪ್ಪನ ಪ್ರಸಾದ ಶ್ರೀವಾರಿ ಲಡ್ಡುಗೆ ಮತ್ತೆ ಕರ್ನಾಟಕದ ನಂದಿನಿ ತುಪ್ಪದ ಸ್ವಾದ ಸೇರಲಿದೆ. KMF​​ನಿಂದ ನಂದಿನಿ ತುಪ್ಪವನ್ನು ಖರೀದಿಸುವ ಟೆಂಡರ್​ಗೆ ಟಿಟಿಡಿ ಸಹಿ ಮಾಡಿದೆ. ಅಷ್ಟೇ ಅಲ್ಲ ನಂದಿನಿ ತುಪ್ಪದಿಂದ ತಿರುಪತಿ ಲಡ್ಡಿನ ರುಚಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಖುದ್ದು ಟಿಟಿಡಿಯೇ ಹೇಳಿದೆ.

ನಂದಿನಿ ತುಪ್ಪದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಳ ಮಾಡಿ ಒದಗಿಸುವಂತೆ ಟೆಂಡರ್​​ನಲ್ಲಿ ಮನವಿ ಮಾಡಲಾಗಿದೆ. ಮೂರು ವರ್ಷಗಳ ಹಿಂದೆ ತಿರುಪತಿ ಲಡ್ಡಿಗೆ ನಂದಿನಿ ತುಪ್ಪದ ಬಳಕೆಯನ್ನು ನಿಲ್ಲಿಸಲಾಗಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಟಿಟಿಡಿ ಮತ್ತೆ ಕೆಎಂಎಫ್​​ ಜೊತೆ ಒಪ್ಪಂದ ಮಾಡಿಕೊಂಡಿದೆ.

ಬುಧವಾರವೇ ತಿರುಮಲಕ್ಕೆ ಒಂದು ಲೋಡ್​ ನಂದಿನಿ ತುಪ್ಪ ರವಾನೆಯಾಗಿದೆ. ಪೂಜೆ ಮತ್ತು ಪ್ರಸಾದ ತಯಾರಿಗೆ ಈ ತುಪ್ಪವನ್ನು ಬಳಕೆ ಮಾಡಲಾಗ್ತಿದೆ. ಕಳೆದ 20 ವರ್ಷಗಳಿಂದಲೂ KMF​​​​ ತಿರುಪತಿಗೆ ತುಪ್ಪದ ಟ್ಯಾಂಕರ್​ ಮತ್ತು ಟಿನ್​ಗಳನ್ನು ಕಳಿಸುತ್ತಿದೆ.

ನಂದಿನ ತುಪ್ಪ ರುಚಿ ಮತ್ತು ಶುಚಿಯಿಂದಾಗಿಯೇ ಹೆಸರುವಾಸಿಯಾಗಿದೆ. ತಿರುಪತಿ ಲಡ್ಡು ಪ್ರಸಾದ ತಯಾರಿಸಲು ವರ್ಷಕ್ಕೆ ಎರಡು ಬಾರಿ 1600 ಟನ್​​​​​​​​ನಷ್ಟು ತುಪ್ಪವನ್ನು ಟಿಟಿಡಿ ಖರೀದಿ ಮಾಡಲಿದೆ. NABLನ ಮಾನದಂಡಗಳನ್ನು ನಂದಿನಿ ತುಪ್ಪ ಒಳಗೊಂಡಿರುವ ಹಿನ್ನೆಲೆಯಲ್ಲಿ ಟಿಟಿಡಿ ಖರೀದಿಗೆ ಒಪ್ಪಿದೆ.

ಇದನ್ನೂ ಓದಿ : ದರ್ಶನ್​ ಗ್ಯಾಂಗ್ ಸುಮನಹಳ್ಳಿ ಬಳಿ ರೇಣುಕಾಸ್ವಾಮಿಯ ಶವ ಬಿಸಾಡಿ ಹೋಗುವ ಸ್ಫೋಟಕ ದೃಶ್ಯ ರಿವೀಲ್​..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here