ತಿಮ್ಮಪ್ಪನ ಪ್ರಸಾದ ಶ್ರೀವಾರಿ ಲಡ್ಡುಗೆ ಮತ್ತೆ ಕರ್ನಾಟಕದ ನಂದಿನಿ ತುಪ್ಪದ ಸ್ವಾದ ಸೇರಲಿದೆ. KMFನಿಂದ ನಂದಿನಿ ತುಪ್ಪವನ್ನು ಖರೀದಿಸುವ ಟೆಂಡರ್ಗೆ ಟಿಟಿಡಿ ಸಹಿ ಮಾಡಿದೆ. ಅಷ್ಟೇ ಅಲ್ಲ ನಂದಿನಿ ತುಪ್ಪದಿಂದ ತಿರುಪತಿ ಲಡ್ಡಿನ ರುಚಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಖುದ್ದು ಟಿಟಿಡಿಯೇ ಹೇಳಿದೆ.
ನಂದಿನಿ ತುಪ್ಪದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಳ ಮಾಡಿ ಒದಗಿಸುವಂತೆ ಟೆಂಡರ್ನಲ್ಲಿ ಮನವಿ ಮಾಡಲಾಗಿದೆ. ಮೂರು ವರ್ಷಗಳ ಹಿಂದೆ ತಿರುಪತಿ ಲಡ್ಡಿಗೆ ನಂದಿನಿ ತುಪ್ಪದ ಬಳಕೆಯನ್ನು ನಿಲ್ಲಿಸಲಾಗಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಟಿಟಿಡಿ ಮತ್ತೆ ಕೆಎಂಎಫ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಬುಧವಾರವೇ ತಿರುಮಲಕ್ಕೆ ಒಂದು ಲೋಡ್ ನಂದಿನಿ ತುಪ್ಪ ರವಾನೆಯಾಗಿದೆ. ಪೂಜೆ ಮತ್ತು ಪ್ರಸಾದ ತಯಾರಿಗೆ ಈ ತುಪ್ಪವನ್ನು ಬಳಕೆ ಮಾಡಲಾಗ್ತಿದೆ. ಕಳೆದ 20 ವರ್ಷಗಳಿಂದಲೂ KMF ತಿರುಪತಿಗೆ ತುಪ್ಪದ ಟ್ಯಾಂಕರ್ ಮತ್ತು ಟಿನ್ಗಳನ್ನು ಕಳಿಸುತ್ತಿದೆ.
ನಂದಿನ ತುಪ್ಪ ರುಚಿ ಮತ್ತು ಶುಚಿಯಿಂದಾಗಿಯೇ ಹೆಸರುವಾಸಿಯಾಗಿದೆ. ತಿರುಪತಿ ಲಡ್ಡು ಪ್ರಸಾದ ತಯಾರಿಸಲು ವರ್ಷಕ್ಕೆ ಎರಡು ಬಾರಿ 1600 ಟನ್ನಷ್ಟು ತುಪ್ಪವನ್ನು ಟಿಟಿಡಿ ಖರೀದಿ ಮಾಡಲಿದೆ. NABLನ ಮಾನದಂಡಗಳನ್ನು ನಂದಿನಿ ತುಪ್ಪ ಒಳಗೊಂಡಿರುವ ಹಿನ್ನೆಲೆಯಲ್ಲಿ ಟಿಟಿಡಿ ಖರೀದಿಗೆ ಒಪ್ಪಿದೆ.
ಇದನ್ನೂ ಓದಿ : ದರ್ಶನ್ ಗ್ಯಾಂಗ್ ಸುಮನಹಳ್ಳಿ ಬಳಿ ರೇಣುಕಾಸ್ವಾಮಿಯ ಶವ ಬಿಸಾಡಿ ಹೋಗುವ ಸ್ಫೋಟಕ ದೃಶ್ಯ ರಿವೀಲ್..!