ಬೆಂಗಳೂರು : ಕಾನೂನು ಮೀರಿ ಮಗುವನ್ನು ದತ್ತು ಪಡೆದು ಅಕ್ರಮವಾಗಿ ಮನೆಯಲ್ಲಿ ಇಟ್ಟುಕೊಂಡ ಆರೋಪ ಹಿನ್ನೆಲೆ, ಇಂದು ಬೆಳಿಗ್ಗೆ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಬ್ಯಾಡರಹಳ್ಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸೋನು ಶ್ರೀನಿವಾಸ್ ಗೌಡ ಅವರನ್ನು ಬಂಧಿಸಿದ್ದಾರೆ.
ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ಮಗು ದತ್ತು ಪಡೆದಿರುವ ಬಗ್ಗೆ ಟ್ರೋಲ್ ಆಗಿತ್ತು. ಮಕ್ಕಳ ಹಕ್ಕು ಕಸಿದಿರುವ ಗಂಭೀರ ಆರೋಪ ಕೂಡ ಕೇಳಿ ಬಂದಿತ್ತು. ಈ ಸಂಬಂಧ ಸೋನು ಶ್ರೀನಿವಾಸ್ ಗೌಡ ಮೇಲೆ FIR ದಾಖಲಿಸಲಾಗಿತ್ತು. ಹಾಗೂ ಇದೀಗ ಅರೆಸ್ಟ್ ಮಾಡಲಾಗಿದೆ. ಸೋನು ಉತ್ತರ ಕರ್ನಾಟಕದ 8 ವರ್ಷದ ಮಗುವನ್ನು ದತ್ತು ಪಡೆದಿದ್ದರು. ಆ ಮಗುವನ್ನು ದತ್ತು ಪಡೆದು ಸಿಂಪತಿ ಗಿಟ್ಟಿಸಿಕೊಂಡು ಸೆಲೆಬ್ರಿಟಿ ಆಗಲು ಸೋನು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ.
ಮಗುವನ್ನ ದತ್ತು ಪಡೆದಿರುವುದಾಗಿ ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆಂದು ಮಕ್ಕಳ ರಕ್ಷಣಾ ಇಲಾಖೆಗೆ ಬಂದಿದ್ದ ದೂರು ಹಿನ್ನೆಲೆ ಹಾಗೂ ದತ್ತು ಪಡೆದುಕೊಳ್ಳಲು ಯಾವುದೇ ಕಾನೂನು ರೀತಿಯ ರೂಲ್ಸ್ ಪಾಲಿಸಲ್ಲಿ ಎಂದು ಆರೋಪ ಮಾಡಲಾಗಿದೆ. ಸದ್ಯ ಬ್ಯಾಡರಹಳ್ಳಿ ಪೊಲೀಸರಿಂದ ಸೋನು ಶ್ರೀನಿವಾಸ್ ಗೌಡ ಬಂಧಿಸಲಾಗಿದೆ. ಪೊಲೀಸರು ಸೋನು ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಸದ್ಯ ಅಧಿಕಾರಿಗಳು ಮಗುವಿನ ಪೋಷಕರನ್ನೂ ಸಂಪರ್ಕಿಸಿದ್ದಾರೆ.
ಇದನ್ನೂ ಓದಿ : ಇಂದಿನಿಂದ ಐಪಿಎಲ್ ಹಬ್ಬ : ಮೊದಲ ಪಂದ್ಯದಲ್ಲಿ ಆರ್ಸಿಬಿ-ಸಿಎಸ್ಕೆ ಮುಖಾಮುಖಿ..!