Download Our App

Follow us

Home » ಸಿನಿಮಾ » ಸೋಷಿಯಲ್​ ಮೀಡಿಯಾದಲ್ಲಿ ನಿಲ್ತಿಲ್ಲ ಸ್ಯಾಂಡಲ್​ವುಡ್​ ಸ್ಟಾರ್​ ನಟರ ಫ್ಯಾನ್ಸ್​​ ವಾರ್ : ಪದೇ ಪದೆ ಫ್ಯಾನ್ಸ್​ ಹೀಗೆ ರಂಪಾಟ ಮಾಡೋದ್ಯಾಕೆ..?

ಸೋಷಿಯಲ್​ ಮೀಡಿಯಾದಲ್ಲಿ ನಿಲ್ತಿಲ್ಲ ಸ್ಯಾಂಡಲ್​ವುಡ್​ ಸ್ಟಾರ್​ ನಟರ ಫ್ಯಾನ್ಸ್​​ ವಾರ್ : ಪದೇ ಪದೆ ಫ್ಯಾನ್ಸ್​ ಹೀಗೆ ರಂಪಾಟ ಮಾಡೋದ್ಯಾಕೆ..?

ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್​ ನಟರ ಫ್ಯಾನ್ಸ್​ ನಡುವೆ ಸೋಷಿಯಲ್​ ಮೀಡಿಯಾ ವಾರ್ ಹೊಸದೇನಲ್ಲ. ಸಿನಿಮಾರಂಗ ಅಂದ್ಮೇಲೆ ಸ್ಟಾರ್ ವಾರ್, ಫ್ಯಾನ್ಸ್​ ವಾರ್ ಇದ್ದಿದ್ದೇ. ಆದರೆ, ಅದು ಹೆಲ್ತಿಯಾಗಿದ್ರೆ ಒಳ್ಳೆದು. ಅಭಿಮಾನದ ಹೆಸರಲ್ಲಿ ಅಂದಾಭಿಮಾನ ತೋರಿದ್ರೆ ತಪ್ಪಾಗುತ್ತೆ. ಫ್ಯಾನ್ಸ್​ ವಾರ್ ಅಂದಾಕ್ಷಣ ಕಾಲಿವುಡ್​, ಟಾಲಿವುಡ್ ನೆನಪಾಗುತ್ತೆ. ಒಬ್ಬ ಸ್ಟಾರ್​ ಅಭಿಮಾನಿ ಮತ್ತೊಬ್ಬ ಸ್ಟಾರ್​ನ್ನ, ಅವರ ಅಭಿಮಾನಿಗಳನ್ನ ಬಹಳ ಹೀನಾಯವಾಗಿ ಅಣಕಿಸೋದು, ಟ್ರೋಲ್​ ಮಾಡೋದು, ಅವಾಚ್ಯ ಶಬ್ದಗಳಿಂದ ನಿಂದಿಸೋದು ನಡೀತಾನೇ ಇರುತ್ತೆ. ಇಂತಾದೊಂದು ಕೆಟ್ಟ ಚಾಳಿ ಸ್ಯಾಂಡಲ್​ವುಡ್​ನಲ್ಲೂ ಬಹಳ ಹಿಂದೆಯೇ ಶುರುವಾಗಿದೆ.

ಈಗ ಸೀನಿಯರ್​ ಹೀರೋ ಜೂನಿಯರ್​ ಹೀರೋ ಮೇಲೆ ಸೆಡ್ಡು ತೀರಿಸಿಕೊಳ್ತಿದ್ದಾರೆ. ಆ ಜೂನಿಯರ್​ ಹೀರೋ ಯಾರ್​​ ಗೊತ್ತಾ..? ವರನಟ ಮೇರು ಕಲಾವಿದ ಡಾ.ರಾಜ್​ಕುಮಾರ್​​ ಮೊಮ್ಮಗ ಯುವರಾಜ್​ ಕುಮಾರ್​​​​. ಯಾರೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ರು. ಯಾರೇ ಸಿನಿಮಾದಲ್ಲಿ ಫೇಮಸ್​ ಆಗಿ ಸೂಪರ್​ ಸ್ಟಾರ್​ ಹೀರೋ ಆದ್ರೆ ಸಾಕು ಈ ಸ್ಟಾರ್​ಗೆ ಸಹಿಸಿಕೊಳ್ಳೋಕೆ ಆಗಲ್ಲ. ಅವರ ಮೇಲೆ ಜಿದ್ದಿಗೆ ಬಿಳ್ತಾರೆ. ಅವರನ್ನ ಟಾರ್ಗೆಟ್​ ಮಾಡ್ತಾರೆ. ಇವಾಗಲೂ ಅಷ್ಟೇ ಯುವರಾಜ್​ ಕುಮಾರ್​ ಹೆಸ್ರನ್ನ ಹಾಳು ಮಾಡ್ತಿದ್ದಾರೆ ಆ ಹೀರೋ ಹಾಗೂ ಅವರ ಫ್ಯಾನ್ಸ್.

ಚಂದನವನ ಅಂದ್ರೆ ಸಿರಿಗಂಧದ ಬೀಡು, ಅದುವೇ ನಮ್ಮ ಕರುನಾಡು. ಕನ್ನಡ ಚಿತ್ರರಂಗ ಅಂದ್ರೆ ಕನ್ನಡಿಗರಿಗೆ ಒಂದು ಹೆಮ್ಮೆ. ಯಾಕಂದ್ರೆ ಇಲ್ಲಿ ಅತಿರಥ ಮಹಾರಥರ ಕುರುಹು ಇದೆ. ಅವರ ಆರ್ದಶಗಳಿವೆ. ಈ ಆದರ್ಶಗಳಿಂದಾಗಿಯೇ, ಕನ್ನಡದ ಕೀರ್ತಿ ಪತಾಕೆ ಹಿಮಾಲಯದೆತ್ತರದಲ್ಲಿತ್ತು. ಈ ಸಾಧನೆಯ ಶಿಖರಕ್ಕೆ ಮುಖ್ಯ ಕಾರಣ ಮೇರುನಟ, ವರನಟ, ಕರ್ನಾಟಕ ರತ್ನ, ಕನ್ನಡ ಕಣ್ಮಣಿ, ನಟ ಸಾರ್ವಭೌಮ ಡಾ. ರಾಜ್​ ಕುಮಾರ್​.

ಗಂಧದ ಗುಡಿಯಲ್ಲಿ ರಾಜ್​​​​​ಕುಮಾರ್ ಅನ್ನುವ ಹೆಸರಿಗೆ ಹತ್ತಾರು ಆಯಾಮಗಳು. ರಾಜ್​​​​​​ಕುಮಾರ್ ಅನ್ನೋದು ಕನ್ನಡಿಗರ ನಡೆ – ನುಡಿಯನ್ನು ರೂಪಿಸಿದ ಶಕ್ತಿ. ಈ ನಾಡಿನ ನೈತಿಕತೆಯನ್ನು ಸಾಕ್ಷಿ ಪ್ರಜ್ಞೆಯನ್ನು ವಿಕಸನಗೊಳಿಸಿದ ಮಾಯ ನೇತಾರ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ ಮುತ್ತುರಾಜ್​​, ಅಸಖ್ಯಾಂತ ವೈವಿದ್ಯಮಯ ಪಾತ್ರಗಳನ್ನು ಯಾವ ದೇಶದ ಯಾವ ಭಾಷೆಯ ನಟನು ಮಾಡಿರಲಾರ.

ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರೋ ಡಾ.ರಾಜ್​ಕುಮಾರ್​​​ ಕುಟುಂಬ ತುಂಬು ಕುಟುಂಬ. ದೊಡ್ಮನೆಯ ರಾಜ್​ಕುಮಾರನಿಗೆ ಮೂವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೊಮ್ಮಕಳು. ವರನಟ ಡಾ.ರಾಜ್ ಫ್ಯಾಮಿಲಿಯಲ್ಲಿ ನಟನೆ ಅನ್ನೋದು ರಕ್ತಗತವಾಗಿದೆ. ಈಗ ರಾಜ್​ ಫ್ಯಾಮಿಲಿಯ ಮೂರನೇ ತಲೆಮಾರಿನ ಹುಡುಗ ಯುವ. ತಾತನ ಖದರ್​​ ಜೊತೆಗೆ ದೊಡ್ಡಪ್ಪ, ಅಪ್ಪ, ಚಿಕ್ಕಪ್ಪ, ನಟನೆ ಎನರ್ಜಿ ಜೊತೆಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಮೊದಲ ಸಿನಿಮಾದಲ್ಲಿಯೇ ಕ್ಲಿಕ್​​ ಆಗಿದ್ದಾರೆ. ಹೀಗಾಗಿ ಆ ಸ್ಟಾರ್​ ಹೀರೋ ಯುವ ಮೇಲೆ ನಾವು ಮೊದಲೇ ಹೇಳಿದಂತೆ ಟಾರ್ಗೆಟ್​ ಮಾಡ್ತಿದ್ದಾರೆ.

ಯುವರಾಜ್​ಕುಮಾರ್​ ಸಕ್ಸಸ್​​ನ್ನ ಆ ಸ್ಟಾರ್​ ಹೀರೋಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಮೊದಲ ಸಿನಿಮಾದಲ್ಲಿಯೇ ಸಿಕ್ಕಾಪಟ್ಟೆ ಫೇಮಸ್​ ಆಗಿ ದೊಡ್ಡ ಅಭಿಮಾನಿ ವರ್ಗವನ್ನ ಸಂಪಾದನೆ ಮಾಡಿರೋ ಯುವರಾಜ್​ಕುಮಾರ್​ ನೋಡಿದ್ರೆ, ಆ ಸ್ಟಾರ್​​ ಹೀರೋಗೆ ಹೊಟ್ಟೆ ಕಿಚ್ಚು. ಹೀಗಾಗಿ ಆ ಹೀರೋ ತನ್ನ ಫ್ಯಾನ್ಸ್​ ಮೂಲಕ ಸೋಷಿಯಲ್​​ ಮೀಡಿಯಾದಲ್ಲಿ ಯುವರಾಜ್​ಕುಮಾರ್​ ಬಗ್ಗೆ ಕೆಟ್ಟದಾಗಿ ಕಾಮೆಂಟ್​ ಹಾಕಿಸಿದ್ದಾರೆ.

ಆ ಹೀರೋ ಫ್ಯಾನ್ಸ್​​​ ಸೋಷಿಯಲ್​ ಮೀಡಿಯಾದಲ್ಲಿ ಕಾಮೆಂಟ್​ ಮಾಡಿರೋ ಪರಿ ಹೇಗಿದೆ ಗೊತ್ತಾ ? ಕಣ್ಣಿಗೆ ಕಾಡಿಗೆ ಹಾಕಿಕೊಂಡು, ಯಾರೋ ಸತ್ತಿರೋ ಸಿಂಪತಿಯಲ್ಲಿ ಬೆಳಿತ್ತಿರೋ ಬಚ್ಚ ನನ್​ ಮಕ್ಕಳು ಅಂತ ಕಾಮೆಂಟ್​ ಮಾಡಿದ್ದಾರೆ.. ಇದೆಲ್ಲಾ ಆ ಹೀರೋ ಹಾಗೂ ಅವರ ಅಭಿಮಾನಿಗಳಿಗೆ ಬೇಕಿತ್ತಾ..? ಕನ್ನಡ ಇಂಡಸ್ಟ್ರಿಯಲ್ಲಿ ಯಾರು ಫೇಮಸ್​ ಆಗಬಾರದಾ? ಅವರಿಗೆ ದೊಡ್ಮನೆ ಮೇಲೆ ಅಷ್ಟೊಂದು ಸಿಟ್ಯಾಕೆ ?

ಇನ್ನೊಂದು ಕಡೆ ಯುವ ಸಿನಿಮಾ ಸೂಪರ್​ ಡೂಪರ್​ ಆಗಿ ಪ್ರದರ್ಶನ ಕಾಣ್ತಿದೆ. ಯುವ ರಾಜ್‌ಕುಮಾರ್ ಮೊದಲ ಸಿನಿಮಾ ‘ಯುವ’ ಕಳೆದ ವಾರ ಅದ್ಧೂರಿಯಾಗಿ ರಿಲೀಸ್​ ಆಗಿದೆ. ‘ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ’, ‘ರಾಜಕುಮಾರ’ದಂತಹ ಮೆಗಾ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಸಂತೋಷ್ ಆನಂದ್‌ರಾಮ್ ‘ಯುವ’ನನ್ನು ಕನ್ನಡ ಚಿತ್ರರಂಗಕ್ಕೆ ರಾಯಲ್​ ಆಗಿ ಇಂಟ್ರೊಡ್ಯೂಸ್ ಮಾಡಿಸಿ ಸಕ್ಸಸ್​ ಆಗಿದ್ದಾರೆ​​. ಯಾಕಂದ್ರೆ ರಾಜ್ಯಾದ್ಯಂತ ‘ಯುವ’ ಸಿನಿಮಾ ಹವಾ, ಕ್ರೇಜ್​​​ ಹಾಗೂ ದರ್ಬಾರ್​ ಸಖತ್​ ಹೈ ಆಗಿದೆ.

ಪುನೀತ್ ರಾಜ್‌ಕುಮಾರ್ ಅಗಲಿದ ಬಳಿಕ ಅಭಿಮಾನಿಗಳು ಕೂಡ ಯುವ ರಾಜ್‌ಕುಮಾರ್‌ಗೆ ಸಿನಿಮಾ ಮಾಡುವಂತೆ ದುಂಬಾಲು ಬಿದಿದ್ದರು. ಪುನೀತ್ ಬಳಿಕ ಆ ಜಾಗದಲ್ಲಿ ಯುವನನ್ನು ನೋಡಬೇಕು ಅಂತ ಆಸೆ ಇಟ್ಟುಕೊಂಡಿದ್ರು. ಅವರ ಒತ್ತಾಸೆಯ ಮೇಲೆ ಸಂತೋಷ್ ಆನಂದ್‌ರಾಮ್, ಯುವರಾಜ್​ಕುಮಾರ್​ಗೆ ಕಥೆ ಬರೆದು ಆ್ಯಕ್ಷನ್​ ಕಟ್​ ಹೇಳಿದ್ರು. ಈಗ ಯುವ ಮೂವಿ ರಿಲೀಸ್​ ಆಗಿ ಮೂರು ದಿನಗಳಾಗಿವೆ.

ಯುವ ರಾಜ್‌ಕುಮಾರ್ ಮೊದಲ ಸಿನಿಮಾ ಹೇಗಿರುತ್ತೆ? ಅನ್ನೋ ಪ್ರಶ್ನೆಗಳಿಗೆ ಉತ್ತರನೂ ಸಿಕ್ಕಿದೆ. ಕಳೆದ ಮೂರು ದಿನಗಳು ರಜೆ ಇತ್ತು. ಜೊತೆ ಪರೀಕ್ಷೆಗಳು ಮುಗಿಯುವ ಹಂತದಲ್ಲಿವೆ. ಇವೆಲ್ಲವನ್ನೂ ಲೆಕ್ಕಾಚಾರ ಹಾಕಿ ರಿಲೀಸ್​​ ಮಾಡಲಾಗಿತ್ತು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ, ಸಂತೋಷ್ ಆನಂದ್‌ರಾಮ್ ನಿರ್ದೇಶನ, ರಾಜ್‌ಕುಮಾರ್ ಕುಟುಂಬದ ಕುಡಿಯ ಎಂಟ್ರಿ. ಇವೆಲ್ಲವೂ ‘ಯುವ’ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿ, ಸಕ್ಸಸ್​ ಹಾದಿಯಲ್ಲಿ ಸಾಗ್ತಿದೆ.

ಯುವ ಸಿನಿಮಾ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಅಭಿಮಾನಿಗಳು ‘ಯುವ’ ಸಿನಿಮಾ ಕಣ್ತುಂಬಿಕೊಂಡು ಸೂಪರ್​​ ಸಿನಿಮಾ ಗುರು! ಸೂಪರ್​​ ಕಥೆ ಗುರು! ಯುವರಾಜ್​ ಕುಮಾರ್​ ಆ್ಯಕ್ಟಿಂಗ್​​, ಡೈಲಾಗ್​ ಡೆಲವರಿ, ಡ್ಯಾನ್ಸ್​​​-ಫೈಟ್​​​-ಸ್ಟಂಟ್​​ ಎಲ್ಲವೂ ಚಿಂದಿ ಗುರು ಅಂತ ಜೈಕಾರ ಹಾಕ್ತಿದ್ದಾರೆ. ರಾಜ್ಯಾದ್ಯಂತ 600ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಆರ್ಭಟಿಸುತ್ತಿದ್ದಾನೆ. ಇನ್ನೂ ಮಲ್ಟಿಪ್ಲೆಕ್ಸ್​​ಗಳಲ್ಲಿ ಸಾವಿರಕ್ಕೂ ಅಧಿಕ ಶೋಗಳಲ್ಲಿ ಯುವ ರಾರಾಜಿಸುತ್ತಿದ್ದಾರೆ​. ಒಟ್ಟಿನಲ್ಲಿ ಹೇಳಬೇಕು ಅಂದ್ರೆ ಗಾಂಧಿನಗರದಿಂದ ಹಿಡಿದು ಎಲ್ಲಾ ಕಡೆಗಳಲ್ಲಿಯೂ ‘ಯುವ’ ಜರ್ಬದಸ್ತ್​ ಆಗಿ ಸದ್ದು ಮಾಡ್ತಿದ್ದಾರೆ. ಎಲ್ಲಾ ಶೋಗಳು ಹೌಸ್​ಫುಲ್​​. ಬಾಕ್ಸಾಫೀಸ್​​​ನಲ್ಲಿ ಯುವ ಭರ್ಜರಿ ಕಲೆಕ್ಷನ್​ ಭೇಟೆ ಆಡ್ತಿದ್ದಾರೆ.

ನಾವು ಮೊದಲೇ ಹೇಳಿದಂತೆ ಯುವ ಮೊದಲನೇ ದಿನವೇ ಕೋಟಿ ಕೋಟಿ ಕಲೆಕ್ಷನ್​ ಮಾಡಿದ್ದಾನೆ. ಕೆಲ ಮೂಲಗಳ ಪ್ರಕಾರ ಮೊದಲನೇ ದಿನ 2.10 ಕೋಟಿ ರೂಪಾಯಿ ಯುವ ಕಲೆಕ್ಷನ್​ ಮಾಡಿದ್ರೆ, ಎರಡನೇ ದಿನ 1.60 ಕೋಟಿ, ಮೂರನೇ ದಿನ 1.80 ಕೋಟಿ ಹೀಗೆ ಮೂರೇ ಮೂರು ದಿನಕ್ಕೆ ಯುವ ಸಿನಿಮಾ ಬರೋಬರಿ 5.50 ಕೋಟಿ ಕಲೆಕ್ಷನ್​ ಮಾಡಿ ಸೂಪರ್​ ಸಕ್ಸಸ್​ ಕಂಡಿದೆ. ‘ಯುವ’ ಸಿನಿಮಾ ಕರ್ನಾಟಕದಾದ್ಯಂತ ದರ್ಬಾರ್​ ನಡೆಸುತ್ತಿದ್ದಾನೆ . ರಜೆ ಇದ್ದರೂ ನಿರೀಕ್ಷೆ ಮಾಡಿರುವುದಕ್ಕಿಂತ ಜಾಸ್ತಿ ಮಂದಿ ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದಾರೆ. ಬೆಂಗಳೂರಿನಲ್ಲಿ ಅತಿ ಹೆಚ್ಚು 3.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಉಳಿದಂತೆ ಮಂಡ್ಯ, ಹಾಸನ, ದಾವಣಗೆರೆ, ಬಳ್ಳಾರಿ, ತುಮಕೂರು, ಹೊಸಪೇಟೆ, ಚಿತ್ರದುರ್ಗ, ಹುಬ್ಬಳ್ಳಿ ಭಾಗಗಳಲ್ಲಿ ಉತ್ತಮ ಕಲೆಕ್ಷನ್ ಆಗಿದೆ ಎಂದು ಕರ್ನಾಟಕ ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ.

ಒಟ್ಟಾರೆಯಾಗಿ ಯಾರ್​ ಏನೇ ಹೇಳಿದ್ರು..? ಯಾರ್​ ಏನೇ ಕಾಮೆಂಟ್​ ಮಾಡಿದ್ರು..? ಯಾರ್​ ಏನೇ ಟೀಕೆ ಮಾಡಿದ್ರು..? ಆ ಸೂಪರ್​ ಸ್ಟಾರ್​ ಹೀರೋ ಯುವರಾಜ್​ ಕುಮಾರ್​ನ್ನ ಟಾರ್ಗೆಟ್​ ಮಾಡಿದ್ರು ಕೂಡ, ಯುವ ಸಿನಿಮಾ ನಿರೀಕ್ಷೆಗೂ ಮೀರಿ ಕ್ಲಿಕ್​ ಆಗಿದೆ. ಸೂಪರ್ ಡೂಪರ್​​​ ಸಕ್ಸಸ್​​ ಕಂಡಿದೆ. ಡಾ.ರಾಜ್​ ಕುಟುಂಬದ ಮೂರನೇ ತಲೆಮಾರಿನ ಹುಡುಗನ ದರ್ಬಾರ್​​​, ಆರ್ಭಟ, ಅಬ್ಬರ ಎಲ್ಲವೂ ಸ್ಯಾಂಡಲ್​​ವುಡ್​ನಲ್ಲಿ ಶುರುವಾಗಿದೆ. ಅಭಿಮಾನಿಗಳು ಯುವ ನಮ್ಮವ ಅಂತ ಅಪ್ಪಿ ಮುದ್ದಾಡಿ ಬೆಳೆಸುತ್ತಿದ್ದಾರೆ.

ಇದನ್ನೂ ಓದಿ : ಕೆಎಸ್​ಆರ್​ಟಿಸಿ ಬಸ್ ಟಯರ್ ಸ್ಫೋಟಗೊಂಡು ಸರಣಿ ಅಪಘಾತ : 2 ಬೈಕ್ ನಜ್ಜುಗುಜ್ಜು..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಿಗೆ ನಾಯಿ ಮಾಂಸ ರವಾನೆ ಆರೋಪ : ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ – ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುನೀತ್ ಕೆರೆಹಳ್ಳಿ ಅರೆಸ್ಟ್..!

ಬೆಂಗಳೂರು : ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ನಿನ್ನೆ (ಜುಲೈ 26) ರಾಜಸ್ಥಾನದಿಂದ ಬಂದ

Live Cricket

Add Your Heading Text Here