Download Our App

Follow us

Home » ಅಪರಾಧ » ಲೈಂಗಿಕ ದೌರ್ಜನ್ಯ ಕೇಸ್ : ಹೆಚ್.​ಡಿ ರೇವಣ್ಣ ನಿವಾಸದಲ್ಲಿ SIT ಸ್ಥಳ ಮಹಜರ್..!

ಲೈಂಗಿಕ ದೌರ್ಜನ್ಯ ಕೇಸ್ : ಹೆಚ್.​ಡಿ ರೇವಣ್ಣ ನಿವಾಸದಲ್ಲಿ SIT ಸ್ಥಳ ಮಹಜರ್..!

ಹಾಸನ : ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ದೇಶ್ಯಾದ್ಯಂತ ಸದ್ದು ಮಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ SIT ತಂಡ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖಾಧಿಕಾರಿಗಳು ರೇವಣ್ಣ ನಿವಾಸಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದಾರೆ.

ಸಂತ್ರಸ್ತೆ ನೀಡಿದ ದೂರಿನಲ್ಲಿ, ರೇವಣ್ಣ ನಿವಾಸದ ಕಿಚನ್​​ನಲ್ಲಿ, ಸ್ಟೋರ್​​ ರೂಂನಲ್ಲಿ ದೌರ್ಜನ್ಯ ಆಗಿತ್ತು. ಭವಾನಿ ರೇವಣ್ಣ ಇಲ್ಲದಿದ್ದಾಗ ನನಗೆ ಲೈಂಗಿಕ ದೌರ್ಜನ್ಯ ಮಾಡಿದ್ದರು ಎಂಬ ಹೇಳಿಕೆ ಹಿನ್ನೆಲೆ ಸಂತ್ರಸ್ತೆ ಸಮೇತ ಹೊಳೆನರಸೀಪುರದ ಅನುಗ್ರಹ ರೇವಣ್ಣ ನಿವಾಸದಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ.

ಸಂತ್ರಸ್ತೆ ಸಮೇತ ಬಿಗಿ ಭದ್ರತೆಯಲ್ಲಿ ರೇವಣ್ಣ ನಿವಾಸಕ್ಕೆ ಬಂದಿರುವ SIT ಟೀಂ ಎರಡು ಕಂಪ್ಯೂಟರ್​​​, ಒಂದು ಪ್ರಿಂಟರ್​​​​ ಸಮೇತ ಆಗಮಸಿದೆ. ಹೆಚ್.ಡಿ.ರೇವಣ್ಣ ನಿವಾಸದಲ್ಲಿ ಟೆಕ್ನಿಕಲ್ ಎವಿಡೆನ್ಸ್
ಸಿಸಿಟಿವಿ ದೃಶ್ಯಗಳ ಪರಿಶೀಲನೆ, ದೌರ್ಜನ್ಯ ಎಸಗಿದ್ದರು ಎನ್ನಲಾದ ದಿನದ CCTV ದೃಶ್ಯ ಹಾಗೂ  ಕಿಚನ್ನಲ್ಲಿ, ಸ್ಟೋರ್ ರೂಂನಲ್ಲೂ ಮಹಜರ್  ನಡೆಸುತ್ತಿದ್ದಾರೆ.

ಇನ್ನು ಮಹಜರ್ ನಡೆಸುತ್ತಿರುವ SIT ಟೀಂ ಕೃತ್ಯ ನಡೆದ ಸಮಯದಲ್ಲಿ ಕೆಲಸದಲ್ಲಿದ್ದ ಮನೆ ಕೆಲಸದವರು, ಸೆಕ್ಯೂರಿಟಿ ಸಿಬ್ಬಂದಿಗಳ ಬಳಿ  ಇಂಥಾ ಚಟುವಟಿಕೆಗಳು ನಿಮ್ಮ ಗಮನಕ್ಕೆ ಬಂದಿದ್ದವೆ ಎಂದು ಪ್ರಶ್ನೆ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇದರ ಜೊತೆಗೆ  ಅನುಗ್ರಹ ನಿವಾಸಕ್ಕೆ ಅಳವಡಿಸಿರುವ CCTV ಡಿವಿಆರ್ ಸಂಗ್ರಹಿಸಿ, ಫಾರ್ಮ್ ಹೌಸ್, ಹಾಸನದ ಸಂಸದರ ಗೆಸ್ಟ್ ಹೌಸ್ನಲ್ಲೂ ಪರಿಶೀಲನೆ ನಡೆಸಿದ್ದಾರೆ.

ಮೈಸೂರು : ಜೆಡಿಎಸ್​ನ 19 ಶಾಸಕರೂ ಒಟ್ಟಾಗಿದ್ದೇವೆ, ಯಾರೂ ಕಾಂಗ್ರೆಸ್​ ಸೇರುವ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ : ಜಿ.ಟಿ.ದೇವೇಗೌಡ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಿಗೆ ನಾಯಿ ಮಾಂಸ ರವಾನೆ ಆರೋಪ : ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ – ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುನೀತ್ ಕೆರೆಹಳ್ಳಿ ಅರೆಸ್ಟ್..!

ಬೆಂಗಳೂರು : ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ನಿನ್ನೆ (ಜುಲೈ 26) ರಾಜಸ್ಥಾನದಿಂದ ಬಂದ

Live Cricket

Add Your Heading Text Here