ಲೋಕಸಭೆ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಅಖಾಡವನ್ನು ಸಿದ್ದಗೊಳಿಸುತ್ತಿದೆ. ಇದರೊಂದಿಗೆ ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಗೆಲ್ಲುವ ಕಾರ್ಯತಂತ್ರ ರೂಪಿಸುತ್ತಿರುವ ಮೈತ್ರಿ ನಾಯಕರು ಇಂದು ಆದಿಚುಂಚನಗಿರಿ ಮಠಕ್ಕೆ ಭೇಟಿ ನಿರ್ಮಲಾನಂದನಾಥ ಶ್ರೀಗಳಿಂದ ಆಶೀರ್ವಾದ ಪಡೆಯುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಒಕ್ಕಲಿಗ ಸಮಾಜಕ್ಕೆ ಏನು ಮಾಡಿದ್ದಾರೆ? ಜೆಡಿಎಸ್ನಲ್ಲಿದ್ದಾಗ ಏನ್ ಮಾಡಿದ್ರು, ಆ ಮೇಲೆ ಏನ್ ಮಾಡಿದ್ರು..? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರ ಒಕ್ಕಲಿಗ ಕಾಳಜಿ ಎಲ್ಲರಿಗೂ ಗೊತ್ತಿದೆ. ಲೋಕಸಭೆ ಎಲೆಕ್ಷನ್ ಬಂದ್ಮೇಲೆ ಒಕ್ಕಲಿಗರ ಬಗ್ಗೆ ಪ್ರೀತಿ ಬಂದಿದೆ. ಸಿದ್ದರಾಮಯ್ಯನವರು ಈಗ ಒಕ್ಕಲಿಗ ಮಠಕ್ಕೆ ಭೇಟಿ ಕೊಡ್ತಿದ್ದಾರೆ.
ಒಕ್ಕಲಿಗ ನಾಯಕರ ಸಭೆ ಮಾಡಿ ನಮಗೆ ಬೆಂಬಲ ಕೊಡಿ ಎಂದಿದ್ದಾರೆ. ಯಾರು..? ಯಾವಾಗ..? ಹೇಗೆ ನಡ್ಕೊಂಡಿದ್ದಾರೆ ಗೊತ್ತಿದೆ ಎಂದು ಎಚ್ಡಿಕೆ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊ*ಲೆ ಮಾಡಿದ ಪಾಪಿ ತಾಯಿ – ಪ್ರಕರಣ ದಾಖಲು..!