Download Our App

Follow us

Home » ರಾಜಕೀಯ » ಕ್ಷಣ ಕ್ಷಣಕ್ಕೂ ಬಿಜೆಪಿಗೆ ಶಾಕ್ – ಬಂಡಾಯ ಅಭ್ಯರ್ಥಿಯಾಗಿ ನಾಳೆ ಈಶ್ವರಪ್ಪ ನಾಮಪತ್ರ ಸಲ್ಲಿಕೆ..!

ಕ್ಷಣ ಕ್ಷಣಕ್ಕೂ ಬಿಜೆಪಿಗೆ ಶಾಕ್ – ಬಂಡಾಯ ಅಭ್ಯರ್ಥಿಯಾಗಿ ನಾಳೆ ಈಶ್ವರಪ್ಪ ನಾಮಪತ್ರ ಸಲ್ಲಿಕೆ..!

ಶಿವಮೊಗ್ಗ : ಲೋಕಸಭಾ ಚುನಾವಣೆಗೆ ಬಿಜೆಪಿಯು ತಮ್ಮ ಪುತ್ರನಿಗೆ ಟಿಕೆಟ್ ಕೊಡದಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ. ಈ ಮೂಲಕ ಈಶ್ವರಪ್ಪ ಬಿಜೆಪಿಗೆ ಕ್ಷಣ-ಕ್ಷಣಕ್ಕೂ ಶಾಕ್​ ಕೊಡ್ತಿದ್ದಾರೆ.

ನಾಳೆ ಬೆಳಿಗ್ಗೆ 10 ಗಂಟೆಗೆ ಬೃಹತ್​​ ಮೆರವಣಿಗೆ ಆಯೋಜಿಸಿ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಖುದ್ದು ಅವರೇ ಘೋಷಣೆ ಮಾಡಿದ್ದಾರೆ.

ವರಿಷ್ಠರ ಮನವೊಲಿಕೆ ಪ್ರಯತ್ನ ಫಲಿಸದೇ ಬಿಕ್ಕಟ್ಟು ಉಲ್ಬಣವಾಗುತ್ತಿದ್ದು, ದೆಹಲಿಗೆ ಬರುವಂತೆ ಈಶ್ವರಪ್ಪಗೆ ಅಮಿತ್ ಶಾ ಬುಲಾವ್ ನೀಡಿದ್ದರು. ಅಮಿತ್ ಶಾ ಭೇಟಿಗಾಗಿ ದೆಹಲಿಗೆ ಹೋಗಿದ್ದ ಈಶ್ವರಪ್ಪಗೆ ಭೇಟಿಗೆ ಸಮಯ ನೀಡಲಾಗಿಲ್ಲ. ಹೀಗಾಗಿ ಬರಿಗೈಯಲ್ಲಿ ವಾಪಸ್ ಆಗಿದ್ದರು. ಬಳಿಕ ಅಮಿತ್​​ ಶಾ, ಬಿಎಸ್​ವೈ ಮನವೊಲಿಕೆ ಪ್ರಯತ್ನ ಕೂಡ ವಿಫಲವಾಗಿತ್ತು. ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : ಏ.17ರಂದು ರಾಜ್ಯ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಟಾಲಿವುಡ್ ಸ್ಟಾರ್ ಪವನ್​ ಕಲ್ಯಾಣ್..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಿಗೆ ನಾಯಿ ಮಾಂಸ ರವಾನೆ ಆರೋಪ : ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ – ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುನೀತ್ ಕೆರೆಹಳ್ಳಿ ಅರೆಸ್ಟ್..!

ಬೆಂಗಳೂರು : ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ನಿನ್ನೆ (ಜುಲೈ 26) ರಾಜಸ್ಥಾನದಿಂದ ಬಂದ

Live Cricket

Add Your Heading Text Here