Download Our App

Follow us

Home » ಅಪರಾಧ » ಕಿಡ್ನಾಪ್ ಕೇಸ್​ನಲ್ಲಿ ಭವಾನಿ ರೇವಣ್ಣಗೆ ಎರಡನೇ ಬಾರಿ SIT ನೋಟಿಸ್​..!

ಕಿಡ್ನಾಪ್ ಕೇಸ್​ನಲ್ಲಿ ಭವಾನಿ ರೇವಣ್ಣಗೆ ಎರಡನೇ ಬಾರಿ SIT ನೋಟಿಸ್​..!

ಬೆಂಗಳೂರು : ಕಿಡ್ನಾಪ್​​​ ಕೇಸ್​ನಲ್ಲಿ ಎಚ್​​.ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣಗೂ ಕಾನೂನು ಕಂಟಕ ಸುತ್ತಿಕೊಂಡಿದೆ. ಈ ಕೇಸ್​​ನಲ್ಲಿ ಭವಾನಿ ರೇವಣ್ಣಗೆ SIT ವಾಟ್ಸಾಪ್​​​​​ ಮೂಲಕ ಎರಡನೇ ಬಾರಿ ನೋಟಿಸ್​ ನೀಡಿದೆ. 2ನೇ ನೋಟಿಸ್​ ನೀಡಿದ SIT ತನಿಖಾ ಟೀಂ, ನೋಟಿಸ್​ ತಲುಪಿದ 24 ಗಂಟೆಯಲ್ಲಿ ವಿಚಾರಣೆಗೆ ಬರಲು ಸೂಚನೆ ನೀಡಿದೆ.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಹೆಚ್​.ಡಿ.ರೇವಣ್ಣ, ಸತೀಶ್ ಬಾಬು ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗಿದೆ. SIT ಅಧಿಕಾರಿಗಳು ಸಂತ್ರಸ್ತೆಯ ವಿಚಾರಣೆ ನಡೆಸಿದ ವೇಳೆ  ಭವಾನಿ ರೇವಣ್ಣ ಕರೆದ್ರು ಅಂತಾ ಹೇಳಿಯೇ ಕಿಡ್ನಾಪ್ ಮಾಡಿರೋ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಭವಾನಿ ರೇವಣ್ಣಗೆ SIT ನೋಟಿಸ್ ಕೊಟ್ಟಿತ್ತು. ಆದರೆ ಮೊದಲನೇ ನೋಟಿಸ್​ಗೆ ಭವಾನಿ ರೇವಣ್ಣ ಉತ್ತರ ನೀಡಿರಲಿಲ್ಲ.

ಇನ್ನು ಭವಾನಿ ರೇವಣ್ಣ ಆರೋಪಿ ಸತೀಶ್​ ಬಾಬುಗೆ ಫೋನ್​ ಮಾಡಿರೋ ಮಾಹಿತಿ ಲಭ್ಯವಾಗಿದೆ. ಇದರೊಂದಿಗೆ ಭವಾನಿ ರೇವಣ್ಣ ಕೆಲ ದಿನಗಳಿಂದ ಸತತ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಮೇಲೆ ಭವಾನಿ ರೇವಣ್ಣಗೆ SIT ಎರಡನೇ ಬಾರಿ ನೋಟಿಸ್​ ನೀಡಿದೆ. ಭವಾನಿ ರೇವಣ್ಣ ಆರೋಪಿ ಸತೀಶ್​ ಬಾಬುಗೆ ಫೋನ್​ ಮಾಡಿರೋ ಮಾಹಿತಿ ಹಿನ್ನಲೆ SIT ಸತೀಶ್​ ಬಾಬು ಕಾಲ್​ ಡಿಟೇಲ್ಸ್​ ಕೂಡಾ ಚೆಕ್​ ಮಾಡಿದೆ. ಈಗಾಗಲೇ ಇದೇ ಪ್ರಕರಣಲ್ಲಿ SIT ಅಧಿಕಾರಿಗಳು ಸುಜಯ್ ಹೆಬ್ಬಾಳು, ಕೀರ್ತಿ ಹೊಸೂರು, ಮನು, ತಿಮ್ಮಪ್ಪ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಪೆನ್​ ಡ್ರೈವ್​​ ಕೇಸ್​​ಗೆ ಬಿಗ್​ ಟ್ವಿಸ್ಟ್​ – ರಾಜ್ಯಪಾಲರ ಭೇಟಿಗೆ ಮುಂದಾದ ಮಾಜಿ ಸಿಎಂ ಹೆಚ್​ಡಿಕೆ..!

Leave a Comment

DG Ad

RELATED LATEST NEWS

Top Headlines

ಸ್ಟಾರ್ ನಿರ್ದೇಶಕ ಎ.ಪಿ ಅರ್ಜುನ್ ವಿರುದ್ಧ ನಡೆಯುತ್ತಿದ್ಯಾ ಪಿತೂರಿ?

ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ವಿವಾದದಲ್ಲಿ ಸಿಲುಕಿದೆ. ನಿರ್ಮಾಪಕರಿಂದ 2.5 ಕೋಟಿ ರೂಪಾಯಿ ಪಡೆದು ಡಿಜಿಟಲ್ ಟೆರೆನ್ ಸಂಸ್ಥೆ ಗ್ರಾಫಿಕ್ಸ್

Live Cricket

Add Your Heading Text Here