ಬೆಂಗಳೂರು : ಕಿಡ್ನಾಪ್ ಕೇಸ್ನಲ್ಲಿ ಎಚ್.ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣಗೂ ಕಾನೂನು ಕಂಟಕ ಸುತ್ತಿಕೊಂಡಿದೆ. ಈ ಕೇಸ್ನಲ್ಲಿ ಭವಾನಿ ರೇವಣ್ಣಗೆ SIT ವಾಟ್ಸಾಪ್ ಮೂಲಕ ಎರಡನೇ ಬಾರಿ ನೋಟಿಸ್ ನೀಡಿದೆ. 2ನೇ ನೋಟಿಸ್ ನೀಡಿದ SIT ತನಿಖಾ ಟೀಂ, ನೋಟಿಸ್ ತಲುಪಿದ 24 ಗಂಟೆಯಲ್ಲಿ ವಿಚಾರಣೆಗೆ ಬರಲು ಸೂಚನೆ ನೀಡಿದೆ.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ.ರೇವಣ್ಣ, ಸತೀಶ್ ಬಾಬು ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗಿದೆ. SIT ಅಧಿಕಾರಿಗಳು ಸಂತ್ರಸ್ತೆಯ ವಿಚಾರಣೆ ನಡೆಸಿದ ವೇಳೆ ಭವಾನಿ ರೇವಣ್ಣ ಕರೆದ್ರು ಅಂತಾ ಹೇಳಿಯೇ ಕಿಡ್ನಾಪ್ ಮಾಡಿರೋ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಭವಾನಿ ರೇವಣ್ಣಗೆ SIT ನೋಟಿಸ್ ಕೊಟ್ಟಿತ್ತು. ಆದರೆ ಮೊದಲನೇ ನೋಟಿಸ್ಗೆ ಭವಾನಿ ರೇವಣ್ಣ ಉತ್ತರ ನೀಡಿರಲಿಲ್ಲ.
ಇನ್ನು ಭವಾನಿ ರೇವಣ್ಣ ಆರೋಪಿ ಸತೀಶ್ ಬಾಬುಗೆ ಫೋನ್ ಮಾಡಿರೋ ಮಾಹಿತಿ ಲಭ್ಯವಾಗಿದೆ. ಇದರೊಂದಿಗೆ ಭವಾನಿ ರೇವಣ್ಣ ಕೆಲ ದಿನಗಳಿಂದ ಸತತ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಮೇಲೆ ಭವಾನಿ ರೇವಣ್ಣಗೆ SIT ಎರಡನೇ ಬಾರಿ ನೋಟಿಸ್ ನೀಡಿದೆ. ಭವಾನಿ ರೇವಣ್ಣ ಆರೋಪಿ ಸತೀಶ್ ಬಾಬುಗೆ ಫೋನ್ ಮಾಡಿರೋ ಮಾಹಿತಿ ಹಿನ್ನಲೆ SIT ಸತೀಶ್ ಬಾಬು ಕಾಲ್ ಡಿಟೇಲ್ಸ್ ಕೂಡಾ ಚೆಕ್ ಮಾಡಿದೆ. ಈಗಾಗಲೇ ಇದೇ ಪ್ರಕರಣಲ್ಲಿ SIT ಅಧಿಕಾರಿಗಳು ಸುಜಯ್ ಹೆಬ್ಬಾಳು, ಕೀರ್ತಿ ಹೊಸೂರು, ಮನು, ತಿಮ್ಮಪ್ಪ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಪೆನ್ ಡ್ರೈವ್ ಕೇಸ್ಗೆ ಬಿಗ್ ಟ್ವಿಸ್ಟ್ – ರಾಜ್ಯಪಾಲರ ಭೇಟಿಗೆ ಮುಂದಾದ ಮಾಜಿ ಸಿಎಂ ಹೆಚ್ಡಿಕೆ..!