Download Our App

Follow us

Home » ರಾಜಕೀಯ » ಫೈನಲ್​ ಆಯ್ತು ಕಾಂಗ್ರೆಸ್​ನ ಸೆಕೆಂಡ್​ ಲಿಸ್ಟ್ ​- 21ರ ಪೈಕಿ 17 ಕ್ಷೇತ್ರಗಳ ಅಭ್ಯರ್ಥಿಗಳು ಫೈನಲ್..!​

ಫೈನಲ್​ ಆಯ್ತು ಕಾಂಗ್ರೆಸ್​ನ ಸೆಕೆಂಡ್​ ಲಿಸ್ಟ್ ​- 21ರ ಪೈಕಿ 17 ಕ್ಷೇತ್ರಗಳ ಅಭ್ಯರ್ಥಿಗಳು ಫೈನಲ್..!​

ನವದೆಹಲಿ : ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್​ ಅಭ್ಯರ್ಥಿಗಳ 2ನೇ ಪಟ್ಟಿ ಫೈನಲ್​ ಆಗಿದ್ದು, ಶೀಘ್ರದಲ್ಲೇ ಅಭ್ಯರ್ಥಿಗಳ ಹೆಸರು ಘೋಷಣೆ ಆಗಲಿದೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿಯ ಸಭೆಯಲ್ಲಿ ರಾಜ್ಯವಾರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಸದ್ಯ ಫೈನಲ್ ಆಗಿರುವ ಕಾಂಗ್ರೆಸ್​ನ ಸೆಕೆಂಡ್​ ಲಿಸ್ಟ್​ನ ಎಕ್ಸ್​ಕ್ಲೂಸಿವ್​ ಡಿಟೇಲ್ಸ್ ಬಿಟಿವಿಗೆ ಲಭ್ಯವಾಗಿದೆ.

ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್​ನ ಹಿರಿಯ ನಾಯಕಿ ಸೋನಿಯಾ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಕೆಸಿ ವೇಣುಗೋಪಾಲ್, ಅಂಬಿಕಾ ಸೋನಿ, ಸಲ್ಮಾನ್ ಖುರ್ಷಿದ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿ, ಚರ್ಚಿಸಿ ಅಳೆದು ತೂಗಿ ರಾಜ್ಯದ  21ರ ಪೈಕಿ 17 ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದಾರೆ.

ಕಾಂಗ್ರೆಸ್ 2ನೇ​ ಲಿಸ್ಟ್ ಇಂದು ಸಂಜೆ ವೇಳೆಗೆ ಹೊರ ಬೀಳಲಿದ್ದು, ಕಾಂಗ್ರೆಸ್ ಈ ಬಾರಿ 6 ಮಹಿಳೆಯರಿಗೆ ಟಿಕೆಟ್​ ಕೊಟ್ಟು ದಾಖಲೆ ಬರೆಯಲು ​ಸಜ್ಜಾಗಿದೆ. ಸಚಿವರ ಬದಲು ಅವರ 6 ಮಂದಿ ಬಂಧುಗಳಿಗೂ ಕಾಂಗ್ರೆಸ್​ ಟಿಕೆಟ್​ ನೀಡಿದೆ.

ಫೈನಲ್ ಆಗಿರೋ ಅಭ್ಯರ್ಥಿಗಳ ಹೆಸರು ಹೀಗಿವೆ :

  • ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ
  • ಬೆಂಗಳೂರು ಕೇಂದ್ರ – ಮನ್ಸೂರ್ ಅಲಿಖಾನ್​
  • ಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್
  • ಬೆಂಗಳೂರು ದಕ್ಷಿಣ – ಸೌಮ್ಯರೆಡ್ಡಿ
  • ರಾಯಚೂರು – ಕುಮಾರ್ ನಾಯಕ್
  • ಕೊಪ್ಪಳ – ರಾಜಶೇಖರ್ ಹಿಟ್ನಾಳ್
  • ಬೀದರ್​​- ಸಾಗರ್​ ಖಂಡ್ರೆ
  • ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ
  • ದಕ್ಷಿಣಕನ್ನಡ – ಪದ್ಮರಾಜ್
  • ಚಿತ್ರದುರ್ಗ – ಬಿ.ಎನ್​​.ಚಂದ್ರಪ್ಪ
  • ಬೆಂಗಳೂರು ಉತ್ತರ – ಪ್ರೊ.ರಾಜೀವ್ ​ಗೌಡ
  • ಧಾರವಾಡ – ವಿನೋದ್ ಅಸೂಟಿ
  • ಬಾಗಲಕೋಟೆ – ಸಂಯುಕ್ತ ಶಿವಾನಂದ್ ಪಾಟೀಲ್
  • ಉಡುಪಿ – ಚಿಕ್ಕಮಗಳೂರು ಜಯಪ್ರಕಾಶ್ ಹೆಗ್ಡೆ
  • ಬೆಳಗಾವಿ – ಮೃಣಾಲ್ ಹೆಬ್ಬಾಳ್ಕರ್
  • ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ
  • ಮೈಸೂರು – ಎಂ.ಲಕ್ಷ್ಮಣ-

17 ಕ್ಷೇತ್ರಗಳ ಟಿಕೆಟ್ ಫೈನಲ್ ಆಗಿದ್ದು ​, AICCಯಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಕರ್ನಾಟಕದ ಏಳು ಕ್ಷೇತ್ರಗಳಿಗೆ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದೆ. ಶಿವಮೊಗ್ಗದಿಂದ ಗೀತಾ ಶಿವರಾಜ್​ ಕುಮಾರ್, ತುಮಕೂರಿನಿಂದ ಎಸ್​ಪಿ ಮುದ್ದಹನುಮೇಗೌಡ, ಮಂಡ್ಯದಿಂದ ವೆಂಕಟರಾಮೇಗೌಡ (ಸ್ಟಾರ್ ಚಂದ್ರು), ಹಾಸನದಿಂದ ಶ್ರೇಯಸ್ ಪಟೇಲ್, ಬೆಂಗಳೂರು ಗ್ರಾಮಾಂತರದಿಂದ ಡಿಕೆ ಸುರೇಶ್, ವಿಜಯಪುರದಿಂದ ಎಚ್​ಆರ್​ ಅಲ್ಗೂರ್ ಹಾಗೂ ಹಾವೇರಿಯಿಂದ ಆನಂದ್ ಸ್ವಾಮಿ ಗಡ್ಡ ದೇವರಮಠ ಅವರನ್ನು ಕಣಕ್ಕಿಳಿಸಲಾಗಿದೆ.

ಇದನ್ನೂ ಓದಿ : ಆರ್‌ಸಿಬಿ ಹೆಸರು, ಜರ್ಸಿ ಚೇಂಜ್ – ಇದು “ಆರ್‌ಸಿಬಿ”ಯ ಹೊಸ ಅಧ್ಯಾಯ ಎಂದು ಕನ್ನಡದಲ್ಲೇ ಖಡಕ್ ಸೂಚನೆ ನೀಡಿದ ಕಿಂಗ್ ಕೊಹ್ಲಿ…!

Leave a Comment

DG Ad

RELATED LATEST NEWS

Top Headlines

ಬೆಂಗಳೂರಿಗೆ ನಾಯಿ ಮಾಂಸ ರವಾನೆ ಆರೋಪ : ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ – ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುನೀತ್ ಕೆರೆಹಳ್ಳಿ ಅರೆಸ್ಟ್..!

ಬೆಂಗಳೂರು : ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ನಿನ್ನೆ (ಜುಲೈ 26) ರಾಜಸ್ಥಾನದಿಂದ ಬಂದ

Live Cricket

Add Your Heading Text Here