ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ED ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಡಾಲರ್ಸ್ ಕಾಲೋನಿಯಲ್ಲಿರುವ ನಾಗೇಂದ್ರ ನಿವಾಸ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ್ದರು. ದಾಳಿ ನಡೆಸಿದ ED ಅಧಿಕಾರಿಗಳು ಕಾಂಗ್ರೆಸ್ ಮಾಜಿ ಸಚಿವ ಬಿ.ಎನ್ ನಾಗೇಂದ್ರ ಅವರ ಮೊಬೈಲ್ ವಶಕ್ಕೆ ಪಡೆದು ಸುಮಾರು 2 ಗಂಟೆಯಿಂದ ವಿಚಾರಣೆ ನಡೆಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿಚಾರಣೆ ನಡೆಸಿದ ED ಅಧಿಕಾರಿಗಳು ಇದೀಗ ಮಾಜಿ ಮಂತ್ರಿ ನಾಗೇಂದ್ರ ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ನಾಗೇಂದ್ರ ಸೇರಿದಂತೆ PA ಚೇತನನ್ನು ಕೂಡಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಾಲ್ಮೀಕಿ ಹಗಣರದಲ್ಲಿ ಅರೆಸ್ಟ್ ಮಾಡಿರುವ ನಾಗೇಂದ್ರರನ್ನು ED ಅಧಿಕಾರಿಗಳು ಕಾರಿನಲ್ಲಿ ಕರೆದೊಯ್ಯತ್ತಿದ್ದಾರೆ.
ಇದನ್ನೂ ಓದಿ : ಇನ್ನೂ 8 ದಿನ ದರ್ಶನ್ಗೆ ಮನೆ ಊಟ ಸಿಗಲ್ಲ – ಜು.18ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್..!
Post Views: 39